• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದ್ದಾಗ...

By ಅಂಕುರ್ ಸಿಂಗ್, ಲಖನೌ
|

ಲಖನೌ (ಉ.ಪ್ರ.), ಆಗಸ್ಟ್ 21 : ಉತ್ತರಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ... ಬಾಲಕಿಯ ಮೇಲೆ ಮುಗಿಬಿದ್ದ ಐವರು ಕಾಮುಕರು... ಉತ್ತರಪ್ರದೇಶದಲ್ಲಿ ಈ ಸುದ್ದಿ ಅಸಲಿಗೆ ಸುದ್ದಿಯೇ ಅಲ್ಲ ಅನ್ನುವಷ್ಟರ ಮಟ್ಟಿಗೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಗುರುವಾರ ಲಖನೌನಲ್ಲಿ ನಡೆದಿರುವ ಈ ಘಟನೆಯಿದೆಯಲ್ಲ... ಎಂಥವರಲ್ಲೂ ಆಕ್ರೋಶ ಉಕ್ಕಿಸುವಂಥದ್ದು.

ಎಂಟನೇ ತರಗತಿ ಓದುತ್ತಿರುವ ಬಾಲಕಿಯ ಮೇಲೆ ಕಾಡೊಂದರಲ್ಲಿ ಅತ್ಯಾಚಾರ ಎಸಗಿರುವ ಐವರು ದುರುಳರು ಗುರುವಾರ ಮಧ್ಯಾಹ್ನ ರಸ್ತೆಯ ಮೇಲೆ ಬಿಸಾಕಿ ಹೋಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆಕೆ ಕಷ್ಟಪಟ್ಟು ಮನೆಗೆ ಮರಳಿದ್ದಾಳೆ. ಇದಕ್ಕೂ ಆಘಾತಕಾರಿ ಸಂಗತಿಯೆಂದರೆ, ಮೂವರು ಹುಡುಗಿಯರು ಅತ್ಯಾಚಾರ ಎಸಗುತ್ತಿದ್ದ ಕೃತ್ಯವನ್ನು ನೋಡಿ ಮಜಾ ಮಾಡಿದ್ದು.

ಶುಕ್ರವಾರ ಈ ಘಟನೆಯ ಪ್ರಥಮ ಮಾಹಿತಿ ವರದಿ ಪತ್ರಕರ್ತರಿಗೆ ದಕ್ಕಿದೆ. ಒನ್ಇಂಡಿಯಾದ ವರದಿಗಾರರಿಗೆ ಈ ಎಫ್ಐಆರ್ ಸಿಕ್ಕಿದ್ದು, ಅದರಲ್ಲಿ ನಿಶಾತಗಂಜ್‌ನಲ್ಲಿ ಯಾವ ರೀತಿ ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈಯಲಾಗಿತು, ಉಳಿದ ಬಾಲಕಿಯರು ಆ ಸಮಯದಲ್ಲಿ ಏನು ಮಾಡುತ್ತಿದ್ದರು ಎಂಬ ವಿವರಗಳು ಎಂಥವರನ್ನೂ ಬೆಚ್ಚಿಬೀಳಿಸುವಂತಿವೆ. (ವಿ.ಸೂ. : ಸ್ಲೈಡುಗಳಲ್ಲಿ ಭೀಕರ ಚಿತ್ರಗಳಿವೆ, ಎಚ್ಚರಿಕೆ!)

ಅತ್ಯಾಚಾರ ನಡೆದಿದ್ದು ಹೇಗೆ?

ಅತ್ಯಾಚಾರ ನಡೆದಿದ್ದು ಹೇಗೆ?

ಮಧ್ಯಾಹ್ನ ಸುಮಾರು ಎರಡೂವರೆ ಹೊತ್ತಿಗೆ ಬಾಲಕಿ ಶಾಲೆಯಿಂದ ಮರಳುತ್ತಿದ್ದಾಗ ಆಕೆಯ ಬಾಯಿಗೆ ಪಟ್ಟಿ ಕಟ್ಟಿ, ಬಲಾತ್ಕಾರದಿಂದ ಆಕೆಯನ್ನು ಕಾರಿನಲ್ಲಿ ಇಬ್ಬರು ಯುವಕರು ಎಳೆದುಕೊಂಡಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ.

ವಿಪರೀತ ರಕ್ತಸ್ರಾವ

ವಿಪರೀತ ರಕ್ತಸ್ರಾವ

ಆಕೆಯನ್ನು ಮನೆಯ ಬಳಿ ಎಸೆದು ಹೋದ ನಂತರ ಆಕೆ ಹೇಗೋ ಸಾವರಿಸಿಕೊಂಡು ಮನೆಗೆ ಮರಳಿದ್ದಾಳೆ. ಆಕೆಯ ಸ್ಥಿತಿ ಕಂಡು ನೆರೆಹೊರೆಯವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಂಜೆಯ ಹೊತ್ತಿಗೆ ಆಕೆಯ ಮನೆಗೆ ಬಂದ ಪೊಲೀಸರು ಕೆಲ ವಸ್ತುಗಳನ್ನು ಮತ್ತು ಆಕೆಯ ಭಾವಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ.

ಸ್ನೇಹಿತೆಯರಿಂದಲೇ ಷಡ್ಯಂತ್ರ

ಸ್ನೇಹಿತೆಯರಿಂದಲೇ ಷಡ್ಯಂತ್ರ

ಬಾಲಕಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಆಕೆಯ ಕೆಲ ಸ್ನೇಹಿತೆಯರು ಆಕೆಯ ಅಪಹರಣ ಮಾಡಿಸಿ, ಅತ್ಯಾಚಾರ ಎಸಗುವಂತೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಂತರ ಆಗಮಿಸಿದ ಪೊಲೀಸರು

ನಂತರ ಆಗಮಿಸಿದ ಪೊಲೀಸರು

ಅತ್ಯಾಚಾರ ನಡೆದು, ನೆರೆಹೊರೆಯವರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ ಬಹುಸಮಯದ ನಂತರ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದಾರೆ.

ಎಫ್ಐಆರ್ ನಲ್ಲಿ ಇತರ ಸ್ನೇಹಿತೆಯರ ಪ್ರಸ್ತಾಪ

ಎಫ್ಐಆರ್ ನಲ್ಲಿ ಇತರ ಸ್ನೇಹಿತೆಯರ ಪ್ರಸ್ತಾಪ

ದಾಖಲಿಸಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಸಮಯದಲ್ಲಿ ಇತರ ಹುಡುಗಿಯರು ಇದ್ದದ್ದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ನಾಲ್ವರಿಂದ ಸಾಮೂಹಿಕ ರೇಪ್ ಸಾಧ್ಯವೆ?

ನಾಲ್ವರಿಂದ ಸಾಮೂಹಿಕ ರೇಪ್ ಸಾಧ್ಯವೆ?

ಹಿಂದೆ ಕೂಡ ಅತ್ಯಾಚಾರಿಗಳನ್ನು ಬೆಂಬಲಿಸಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ನಾಲ್ವರಿಂದ ಸಾಮೂಹಿಕ ಅತ್ಯಾಚಾರ ನಡೆಯಲು ಸಾಧ್ಯವೆ ಎಂದು ಪ್ರಶ್ನಿಸಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ ಅವರ ಮಗನೇ ಉತ್ತರಪ್ರದೇಶದ ಚುಕ್ಕಾಣಿ ಹಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking incident 8-year-old has been gang-raped by five young men in front of three girls, who were enjoying it. The incident has happened in Lucknow in Uttar Pradesh. After raping the girl the culprits thrown her on the road and fled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more