ಪ್ರಧಾನಿ ಮೋದಿ ವಿರುದ್ಧ ನಿಂದನೆ: 'ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು' ಎಂದು ಕ್ಷಮೆಯಾಚಿಸಿದ ಹುಡುಗಿ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ಯುವತಿಯೊಬ್ಬಳು ಇದೀಗ ವಿಡಿಯೋ ಮೂಲಕ ಇಡೀ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಿದ್ದಾಳೆ.

ಜುಲೈ 23ರಂದು ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿದ ಆರೋಪದ ಮೇಲೆ ಈಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿದ ಆಕೆ, ತಾನು ಮಾಡಿದ ತಪ್ಪಿಗೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ.

Girl

ಕ್ಷಮೆಯಾಚನೆ ವಿಡಿಯೋ ವೈರಲ್: 'ನನಗೆ ನನ್ನನ್ನ ನೋಡಿಕೊಳ್ಳಲು ನಾಚಿಕೆಯಾಗುತ್ತಿದೆ'

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕ್ಷಮೆಯಾಚನೆಯ ವಿಡಿಯೋದಲ್ಲಿ ಯುವತಿ ಭಾವುಕಳಾಗಿ ಮಾತನಾಡಿದ್ದಾಳೆ. "ಪ್ರತಿಭಟನೆಯ ಸ್ಥಳದಲ್ಲಿ ಕೆಲವು ಜನರ ಪ್ರಭಾವಕ್ಕೆ ಒಳಗಾಗಿ ನಾನು ಪ್ರಧಾನಿಯವರ ವಿರುದ್ಧ ಅತ್ಯಂತ ಕೆಟ್ಟ ಮಾತುಗಳನ್ನಾಡಿದೆ. ಇದು ನನ್ನ ಜೀವನದ ಮೊದಲ ಮತ್ತು ಕೊನೆಯ ತಪ್ಪಾಗಿದೆ. ನಾನು ಆಡಿದ ಮಾತುಗಳಿಗೆ ಇಡೀ ದೇಶದ ಜನತೆಯಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ತಪ್ಪಿನಿಂದಾಗಿ ನನಗೆ ನಾಚಿಕೆಯಾಗುತ್ತಿದ್ದು, ಕನ್ನಡಿಯಲ್ಲಿ ನನ್ನನ್ನ ನಾನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಎಲ್ಲರೂ ನನ್ನನ್ನ ಕ್ಷಮಿಸಿ," ಎಂದು ಮನವಿ ಮಾಡಿಕೊಂಡಿದ್ದಾಳೆ.

ವಯಸ್ಸಿನ ಕುರಿತು ಗೊಂದಲ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 'ಜೀರೋ ಎಫ್‌ಐಆರ್'ನಲ್ಲಿ ಯುವತಿಯ ವಯಸ್ಸನ್ನ 25 ಎಂದು ಉಲ್ಲೇಖಿಸಲಾಗಿದೆ. ಆದರೆ, ಇದೀಗ ಬಿಡುಗಡೆಯಾಗಿರುವ ಕ್ಷಮೆಯಾಚನೆಯ ವಿಡಿಯೋದಲ್ಲಿ ಆಕೆ, "ನನಗೆ ಕೇವಲ 15 ವರ್ಷ, ತಿಳಿಯದೆ ತಪ್ಪು ಮಾಡಿದ್ದೇನೆ," ಎಂದು ಹೇಳಿಕೊಂಡಿರುವುದು ಹೊಸ ಗೊಂದಲಕ್ಕೆ ಕಾರಣವಾಗಿದೆ. ಘಟನೆಯು ನವದೆಹಲಿಯ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ನೋಯ್ಡಾ ಪೊಲೀಸರು ಪ್ರಕರಣವನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು, ಪೊಲೀಸರು ವಿಡಿಯೋದ ನೈಜತೆ ಹಾಗೂ ಯುವತಿಯ ವಯಸ್ಸಿನ ಕುರಿತು ತನಿಖೆ ಮುಂದುವರಿಸಿದ್ದಾರೆ.

'ದಾರಿತಪ್ಪಿದ ಮಕ್ಕಳನ್ನು ಕ್ಷಮಿಸೋಣ' ಎಂದಿದ್ದ ಪ್ರಧಾನಿ ಮೋದಿ

ಅವಹೇಳನಕಾರಿ ವಿಡಿಯೋ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಘಟನೆಯಿಂದ ತಮಗೆ ಉಂಟಾದ ನೋವನ್ನ ವ್ಯಕ್ತಪಡಿಸಿದ್ದರು. "ಜಂತರ್ ಮಂತರ್‌ನಲ್ಲಿ ನನ್ನನ್ನು ಮತ್ತು ನನ್ನ ತಾಯಿಯನ್ನ ಅತ್ಯಂತ ಕೆಟ್ಟ ಭಾಷೆಯಿಂದ ನಿಂದಿಸಲಾಗಿದೆ. ನಾಗರಿಕ ಸಮಾಜದಲ್ಲಿ ಇಂತಹ ಮಾತುಗಳಿಗೆ ಜಾಗವಿಲ್ಲ. ಆದರೆ, ಇವರು ನಮ್ಮ ದಾರಿತಪ್ಪಿದ ಮಕ್ಕಳು. ಅವರಿಗೆ ಶಿಕ್ಷೆ ನೀಡುವ ಬದಲು ಸರಿಯಾದ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ ಮತ್ತು ಸಮಾಜವೂ ಅವರನ್ನು ಕ್ಷಮಿಸಬೇಕು," ಎಂದು ಪ್ರಧಾನಿ ಯುವಜನತೆಯ ಪರವಾಗಿ ಮಾತನಾಡಿದ್ದರು.

ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ನಾಯಕರ ಆಕ್ರೋಶ

ಪ್ರಧಾನಿ ಮೋದಿಯವರ ಕ್ಷಮೆ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಪವನ್ ಖೇರಾ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಪ್ರಧಾನಿಯವರ ವಿಡಿಯೋವನ್ನು ಹಂಚಿಕೊಂಡು ಟೀಕಿಸಿದ್ದಾರೆ. "ದೇಶದ ಜನತೆ ಪ್ರಧಾನಿಯವರಿಂದ ಅನೇಕ ವಿಚಾರಗಳಿಗೆ ಕ್ಷಮೆಯಾಚನೆಯನ್ನು ನಿರೀಕ್ಷಿಸುತ್ತಿದ್ದರೆ, ಪ್ರಧಾನಿಯವರು ಮಾತ್ರ ಇಡೀ ದೇಶವನ್ನೇ ಕ್ಷಮಿಸಿದಂತೆ ಮಾತನಾಡುತ್ತಿದ್ದಾರೆ," ಎಂದು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+