• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜಿಯಾಬಾದ್: ಪ್ರಿಯಕರ ಮತ್ತು ಪತ್ನಿಯ ಪ್ರೇಮ್ ಕಹಾನಿಗೆ ಬಲಿಯಾಯ್ತು ಪತಿಯ ಜೀವ

|
Google Oneindia Kannada News

ಶ್ರದ್ಧಾ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣ ಕಣ್ಮುಂದೆ ಇರುವಾಗಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸಿನಿಮಿಯ ಮಾದರಿಯಲ್ಲಿ ಪತ್ನಿ ಪತಿಯನ್ನು ಕೊಲೆ ಮಾಡಿದ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಪ್ರಿಯಕರನ ಸಹಾಯದಿಂದ ಪತಿಯನ್ನು ಕೊಂದು ಮನೆಯೊಳಗೆ ಪತಿಯ ದೇಹವನ್ನು ಹೂತುಹಾಕಿದ್ದ ಪತ್ನಿ ನಾಲ್ಕು ವರ್ಷದ ಬಳಿಕ ಸಿಕ್ಕಿಬಿದ್ದಿದ್ದಾಳೆ.

ಘಟನೆ ನಡೆದು ನಾಲ್ಕು ವರ್ಷದ ಬಳಿಕ ಪ್ರಕರಣವನ್ನು ಭೇದಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. 2018 ರಲ್ಲಿ ಈ ಘಟನೆ ನಡೆದಿದ್ದು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಹತ್ಯೆಗೈದ ವ್ಯಕ್ತಿಯ ದೇಹವನ್ನು ಹೊರತೆಗೆದಿರುವುದಾಗಿ ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ನಿ ನೆರೆಯ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ವ್ಯಕ್ತಿಯ ಶವವನ್ನು ಆತನ ಪತ್ನಿಯ ಪ್ರಿಯಕರನ ಒಡೆತನದ ಮನೆಯಲ್ಲಿ ಹೂಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಟ್ಟಿಂಗ್‌ಗೆ ದಾಸನಾಗಿ ಪತ್ನಿ ಮಕ್ಕಳನ್ನು ಬೀದಿಪಾಲು ಮಾಡಿದ ಭೂಪ ಬೆಟ್ಟಿಂಗ್‌ಗೆ ದಾಸನಾಗಿ ಪತ್ನಿ ಮಕ್ಕಳನ್ನು ಬೀದಿಪಾಲು ಮಾಡಿದ ಭೂಪ

ಸಿಕ್ರೋಡ್ ಗ್ರಾಮದ ಸಂತ್ರಸ್ತ ಚಂದ್ರವೀರ್ ಎಂಬಾತ ಸೆಪ್ಟೆಂಬರ್ 28, 2018 ರಂದು ನಾಪತ್ತೆಯಾಗಿದ್ದನು. ಈ ಬಗ್ಗೆ ಸಿಹಾನಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಗತಿ ಸಾಧಿಸಲು ಸಾಧ್ಯವಾಗದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಆದರೆ ಹೊಸ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಇತ್ತೀಚೆಗೆ ಪ್ರಕರಣವನ್ನು ಪುನಃ ಕೈಗೆತ್ತಿಕೊಂಡಿದ್ದರು.

ಚಂದ್ರವೀರ್ ಅವರ ಪತ್ನಿ ಸವಿತಾ ಮದುವೆಗೂ ಮುನ್ನ ಅರುಣ್ ಅಲಿಯಾಸ್ ಅನಿಲ್ ಕುಮಾರ್ ಜೊತೆ ಸಂಬಂಧ ಹೊಂದಿದ್ದರು. ಮದುವೆಯ ನಂತರವೂ ಸವಿತಾ ಅನಿಲ್ ಜೊತೆ ಸಂಬಂಧ ಹೊಂದಿದ್ದರು. ಅರುಣ್ ಮನೆಗೆ ಬಂದು ಹೋಗುವಾಗ ಹಲವಾರು ಬಾರಿ ಚಂದ್ರವೀರ್ ಕೈಗೆ ಸಿಕ್ಕಿಬಿದ್ದಿದ್ದನು. ಇದಕ್ಕಾಗಿ ಅರುಣ್‌ನನ್ನು ಚಂದ್ರವೀರ್ ಥಳಿಸಿದ್ದಾನೆ. ಇದೇ ದ್ವೇಷವನ್ನು ಅರುಣ್‌ ಚಂದ್ರವೀರ್ ಮೇಲೆ ಇಟ್ಟುಕೊಂಡಿದ್ದನು.

ಪುನ: ಪ್ರಕರಣದ ತನಿಖೆ ಆರಂಭ

ಸೆಪ್ಟೆಂಬರ್ 28, 2018 ರಂದು ಚಂದ್ರವೀರ್ ಅಮಲೇರಿದ ಸ್ಥಿತಿಯಲ್ಲಿ ಮನೆಗೆ ಮರಳಿದ್ದನು. ನಿದ್ದೆಗೆ ಜಾರಿದಾಗ ಸವಿತಾ ಅರುಣ್ ಅನ್ನು ತನ್ನ ಮನೆಗೆ ಕರೆದಿದ್ದಾಳೆ. ಅರುಣ್ ಪಿಸ್ತೂಲ್ ಬಳಸಿ ಚಂದ್ರವೀರ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಆಗ ಚಂದ್ರವೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಅರುಣ್ ಮನೆಯಲ್ಲಿ ಹೂತು ಹಾಕಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚು ಸಾಕ್ಷಿಗಳು ಸಿಗದ ಬೆನ್ನಲ್ಲೆ ಪ್ರಕರಣವನ್ನು ಕೈಬಿಡಲಾಗಿತ್ತು. ಇತ್ತೀಚೆಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಪುನ: ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಅಸಲಿಯತ್ತು ತಿಳಿದಿದೆ. ಸದ್ಯ ಇಬ್ಬರು ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಹಾಗೂ ಗುಂಡಿ ಅಗೆಯಲು ಬಳಸಿದ್ದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನಿಲ್ ಅವರ ಮನೆಯೊಳಗಿನ ಆರು ಅಡಿ ಆಳದ ಗುಂಡಿಯಿಂದ ಅಸ್ಥಿಪಂಜರವನ್ನು ಹೊರತೆಗೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ) ದೀಕ್ಷಾ ಶರ್ಮಾ ಅವರು ತಿಳಿಸಿದ್ದಾರೆ. ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

English summary
The incident of a wife murdering her husband with the help of her lover in Ghaziabad has come to light after four years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X