ಜೆನ್ನೋವಾ ಕೊರೊನಾ ಲಸಿಕೆ ಮಾನವನ ಮೇಲೆ ಪ್ರಯೋಗಕ್ಕೆ ಷರತ್ತುಬದ್ಧ ಅನುಮತಿ
ನವದೆಹಲಿ, ಡಿಸೆಂಬರ್ 10: ಜೆನ್ನೋವಾ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಮಾನವ ಪ್ರಯೋಗಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.
ಎರಡನೇ ಹಂತದ ಪ್ರಯೋಗ ನಡೆಸುವ ಮುನ್ನ ಮೊದಲ ಹಂತದ ಮಧ್ಯಂತರ ಫಲಿತಾಂಶವನ್ನು ಸಮಿತಿಗೆ ಸಲ್ಲಿಸಬೇಕು ಎಂಬ ಷರತ್ತಿನೊಂದಿಗೆ ಮೊದಲು ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಸಮಿತಿ ಅನುಮತಿಗೆ ಶಿಫಾರಸು ಮಾಡಿದೆ ಎಂದು ಎಸ್ ಇಸಿ ಹೇಳಿದೆ.
ಅಮೆರಿಕಾದ ಹೆಚ್ ಡಿಟಿ ಬಯೋಟೆಕ್ ಕಾರ್ಪೋರೇಷನ್ ಸಹಯೋಗದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಎಂಆರ್ ಎನ್ ಎ ಲಸಿಕೆಯನ್ನು ಜೆನ್ನೋವಾ ಅಭಿವೃದ್ಧಿಪಡಿಸಿದೆ.

ಎರಡನೇ ಹಂತದ ಮಾನವ ಪ್ರಯೋಗಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( ಡಿಸಿಜಿಐ) ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡುವಂತೆ ಸಂಸ್ಥೆ ಸಲ್ಲಿಸಿದ ಪ್ರಸ್ತಾವನೆಯನ್ನು ಚರ್ಚಿಸಿದ ಕೊವಿಡ್-19 ಕುರಿತ ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಡಿಸಿಜಿಐ ಅನುಮೋದಿಸಿದೆ.
ಬ್ರಿಟನ್ ನಲ್ಲಿ ಮೊದಲ ಹಂತದಲ್ಲಿ ರೋಗಿಗಳಿಗೆ ಎರಡು ಡೋಸ್ ಗಳ ಲಸಿಕೆ ನೀಡಿದ ನಂತರ ಈ ಎಚ್ಚರಿಕೆಯನ್ನು ರವಾನಿಸಲಾಗಿದೆ. ಇಬ್ಬರು ರಾಷ್ಟ್ರೀಯ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ತೆಗೆದುಕೊಂಡ ನಂತರ ಅನಾಫಿಲ್ಯಾಕ್ಟಾಯ್ಡ್ ಅಲರ್ಜಿ (ಉಸಿರಾಟದಲ್ಲಿ ತೊಂದರೆ, ಚರ್ಮದ ಸಮಸ್ಯೆ, ರಕ್ತದೊತ್ತಡ) ಕಾಣಿಸಿಕೊಂಡಿದೆ. ಅವರಿಗೆ ತಕ್ಷಣವೇ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಹೊಸ ಲಸಿಕೆ ನೀಡಿದಾಗ ಈ ರೀತಿ ಆಗುವುದು ಸಹಜವೇ ಆಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಅಲರ್ಜಿಯ ಹಿನ್ನೆಲೆಯಿರುವ ಜನರಿಗೆ ಲಸಿಕೆ ತೆಗೆದುಕೊಳ್ಳದೇ ಇರುವುದು ಉತ್ತಮ ಎಂದು ವೈದ್ಯಕೀಯ ನಿರ್ದೇಶಕ ಸ್ಟೀಫನ್ ಪೋವಿಸ್ ತಿಳಿಸಿದ್ದಾರೆ.
ಯಾವುದೇ ಲಸಿಕೆ ತೆಗೆದುಕೊಂಡಾಗಲೂ ಅಲರ್ಜಿ ಹಿನ್ನೆಲೆವುಳ್ಳ ವ್ಯಕ್ತಿಗಳಿಗೆ ಈ ರೀತಿಯಾಗುವುದು ನಿರೀಕ್ಷಿತವೇ. ಹಾಗಾಗಿ ಈ ಕುರಿತು ಮತ್ತಷ್ಟು ಸ್ಪಷ್ಟತೆ ದೊರೆತ ನಂತರ ಮುಂದುವರೆಯಲಾಗುವುದು ಎಂದರು.












Click it and Unblock the Notifications