ಅತ್ಯಾಚಾರಿ ಆರೋಪಿ, ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅರೆಸ್ಟ್

Posted By:
Subscribe to Oneindia Kannada

ಲಕನೌ, ಮಾರ್ಚ್ 14: ಅತ್ಯಾಚಾರದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗುವ ಭೀತಿಯಲ್ಲಿ ಸರಿಸುಮಾರು ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಯನ್ನು ಲಕನೌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಪ್ರಜಾಪತಿಯ ಆಪ್ತರು ಹಾಗೂ ಆತನ ಮೇಲಿರುವ ಅತ್ಯಾಚಾರ ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ಸುಮಾರು 6 ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮಂಗಳವಾರವೇ ಮೂವರನ್ನು ಬಂಧಿಸಲಾಗಿತ್ತು.[ಅತ್ಯಾಚಾರ ಆರೋಪಿ ಎಸ್ ಪಿ ಶಾಸಕ ಪ್ರಜಾಪತಿ ಬಂಧನಕ್ಕೆ ವ್ಯಾಪಕ ಜಾಲ]

Gayatri Prajapati, former UP minister accused of rape, arrested

ಇದೀಗ, ಪ್ರಮುಖ ಆರೋಪಿಯಾಗಿದ್ದ ಪ್ರಜಾಪತಿಯೂ ಅರೆಸ್ಟ್ ಆಗಿರುವುದು ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Uttar Pradesh minister Gayatri Prajapati has been arrested from Lucknow in relation to a rape case. On Tuesday, three accomplices of Prajapati were arrested by the Uttar Pradesh Police in connection with the case.
Please Wait while comments are loading...