ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿಗೆ ಅಗ್ರ ಸ್ಥಾನ

|
Google Oneindia Kannada News

ನವದೆಹಲಿ, ಅ.20: ಭಾರತ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ತನ್ನ ಆರ್ಥಿಕತೆಯನ್ನು ಬಲಗೊಳಿಸಿಕೊಳ್ಳಲು ಹೋರಾಡುತ್ತಿರುವಾಗಲೇ, ದೇಶದ ಶ್ರೀಮಂತ ವ್ಯಕ್ತಿಗಳ ಸಂಪತ್ತು ಮಾತ್ರ ಏರುತ್ತಲೇ ಇದೆ. ಈ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ ಗೌತಮ್ ಅದಾನಿ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.

ದೇಶದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ 150 ಬಿಲಿಯನ್ ಡಾಲರ್ ನೆಟ್ ವರ್ತ್ ಹೊಂದಿರುವ ಗೌತಮ್ ಅದಾನಿ ಅಗ್ರಸ್ಥಾನಕ್ಕೆ ಏರಿದ್ದಾರೆ.

'ಟೈಮ್ 100 ನೆಕ್ಸ್ಟ್' ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ'ಟೈಮ್ 100 ನೆಕ್ಸ್ಟ್' ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ

ಶ್ರೀಮಂತರ ಪಟ್ಟಿಯ ದೀರ್ಘಾವಧಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಮುಖೇಶ್ ಅಂಬಾನಿ, ಈ ವರ್ಷ ಗೌತಮ್ ಅದಾನಿಯಿಂದಾಗಿ ಕೆಳಗೆ ಇಳಿದಿದ್ದಾರೆ. ಅವರ ನೆಟ್ ವರ್ತ್ 88 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ.

ರಾಧಾಕಿಶನ್ ದಮಾನಿ, ಸೈರಸ್ ಪೂನಾವಾಲಾ, ಶಿವ ನಾಡರ್, ಸಾವಿತ್ರಿ ಜಿಂದಾಲ್, ದಿಲೀಪ್ ಶಾಂಘ್ವಿ, ಹಿಂದೂಜಾ ಸಹೋದರರು, ಕುಮಾರ್ ಮಂಗಳಂ ಬಿರ್ಲಾ ಮತ್ತು ಬಜಾಜ್ ಕುಟುಂಬ ಟಾಪ್ 10 ಪಟ್ಟಿಯಲ್ಲಿದೆ.

ಶ್ರೀಮಂತರ ಒಟ್ಟು ಸಂಪತ್ತಿನಲ್ಲಿ ಅಂಬಾನಿ, ಅದಾನಿಯದ್ದೇ 30%!

ಶ್ರೀಮಂತರ ಒಟ್ಟು ಸಂಪತ್ತಿನಲ್ಲಿ ಅಂಬಾನಿ, ಅದಾನಿಯದ್ದೇ 30%!

2021 ರಲ್ಲಿ ತನ್ನ ಸಂಪತ್ತನ್ನು ಸುಮಾರು ಮೂರು ಪಟ್ಟು ಹೆಚ್ಚಿಸಿದ ಗೌತಮ್ ಅದಾನಿ 2022 ರಲ್ಲಿ ತನ್ನ ನೆಟ್‌ವರ್ತ್ ಎರಡರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. ವಾಸ್ತವವಾಗಿ, ಅದಾನಿಯವರ ಮೇಲೆ ರೂಪಾಯಿ ದರ ಕುಸಿತ ಕೂಡ ಪರಿಣಾಮ ಬಿರಿಲ್ಲ ಎಂದು ವರದಿಯಾಗಿದೆ.

ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಇಬ್ಬರೇ ಭಾರತದ 100 ಶ್ರೀಮಂತರ ಒಟ್ಟು ಸಂಪತ್ತಿನಲ್ಲಿ 30% ಹೊಂದಿದ್ದಾರೆ.

ಸಾಂಕ್ರಾಮಿಕ ರೋಗ ಕೊರೊನಾದಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೂ, ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು 25 ಶತಕೋಟಿಯಿಂದ ಡಾಲರ್‌ನಿಂದ 800 ಶತಕೋಟಿ ಡಾಲರ್‌ಗೆ ಏರಿದೆ.

ಅಪಘಾತದಲ್ಲಿ ಮೃತಪಟ್ಟ ಸೈರಸ್ ಮಿಸ್ತ್ರಿ ಕೂಡ ಪಟ್ಟಿಯಲ್ಲಿದ್ದಾರೆ

ಅಪಘಾತದಲ್ಲಿ ಮೃತಪಟ್ಟ ಸೈರಸ್ ಮಿಸ್ತ್ರಿ ಕೂಡ ಪಟ್ಟಿಯಲ್ಲಿದ್ದಾರೆ

ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ಈ ಬಾರಿ ಒಂಬತ್ತು ಹೊಸ ಮುಖಗಳು ಸೇರಿವೆ. ಸಾರ್ವಜನಿಕ ಮಾರುಕಟ್ಟೆಗೆ ಮೊದಲ ಬಾರಿ ಪ್ರವೇಶಿಸಿದ, ಫ್ಯಾಷನ್ ಇಂಡಸ್ಟ್ರಿಯಿಂದ ಬಂದಿರುವ ನೈಕಾ ಅವರ ಫಲ್ಗುಣಿ ನಾಯರ್ (44ನೇ), ವೇದಾಂತ್ ಫ್ಯಾಶನ್ಸ್‌ನ ರವಿ ಮೋದಿ (50ನೇ) ಮತ್ತು ಮೆಟ್ರೋ ಬ್ರಾಂಡ್ಸ್‌ನ ರಫೀಕ್ ಮಲಿಕ್ (89) ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿರುವ ನಾಲ್ಕು ಪ್ರಮುಖ ಸದಸ್ಯರು ಈ ವರ್ಷ ನಿಧನರಾಗಿದ್ದಾರೆ. ಬಜಾಜ್ ಕುಟುಂಬದ ಕುಲಪತಿ ರಾಹುಲ್ ಬಜಾಜ್, ಏಸ್ ಮಾರುಕಟ್ಟೆಯ ಹೂಡಿಕೆದಾರ ರಾಕೇಶ್ ಜುಂಜನ್‌ವಾಲಾ ಮತ್ತು ನಿರ್ಮಾಣ ಉದ್ಯಮಿ ಪಲ್ಲೊಂಜಿ ಮಿಸ್ತ್ರಿ ಮತ್ತು ಅವರ ಮಗ ಸೈರಸ್ ಮಿಸ್ತ್ರಿ 2022 ರಲ್ಲಿ ಶ್ರೀಮಂತರು.

ಮತ್ತೆ ಶ್ರೀಮಂತರ ಪಟ್ಟಿ ಸೇರಿದ ಆನಂದ್ ಮಹೀಂದ್ರಾ

ಮತ್ತೆ ಶ್ರೀಮಂತರ ಪಟ್ಟಿ ಸೇರಿದ ಆನಂದ್ ಮಹೀಂದ್ರಾ

ಹಿಂದಿನ ವರ್ಷಗಳಲ್ಲಿ ಪಟ್ಟಿಯಿಂದ ಹೊರಗಿದ್ದ ನಾಲ್ಕು ಜನರು 2022 ರ ಪಟ್ಟಿಗೆ ಮರಳಿದ್ದಾರೆ. ಇವರಲ್ಲಿ ಪ್ರಮುಖವಾಗಿ ಆನಂದ್ ಮಹೀಂದ್ರಾ. ಆನಂದ್ ಮಹೀಂದ್ರಾ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅದ್ಭುತ ವ್ಯವಹಾರ ನಡೆಸಿ, ತಮ್ಮ ಕಂಪನಿಯ ಷೇರುಗಳನ್ನು ಮಾರಾಟ ಮಾಡಿದ ನಂತರ 100ರಲ್ಲಿ 91 ನೇ ಸ್ಥಾನಕ್ಕೆ ಮರಳಿದ್ದಾರೆ.

ಇನ್ನು, ಪೇಟಿಎಂ (Paytm) ನ ವಿಜಯ್ ಶೇಖರ್ ಶರ್ಮಾ ಈ ವರ್ಷ ತನ್ನ ಕಂಪನಿಯು ಷೇರುಗಳಲ್ಲಿ ನಿರಾಶಾದಾಯಕ ವ್ಯವಹಾರ ನಡೆಸಿದ್ದು, ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ರೂಪಾಯಿ ಮೌಲ್ಯ 10% ಕುಸಿದರೂ, ಶ್ರೀಮಂತರಿಗಾಗಿಲ್ಲ ತೊಂದರೆ!

ರೂಪಾಯಿ ಮೌಲ್ಯ 10% ಕುಸಿದರೂ, ಶ್ರೀಮಂತರಿಗಾಗಿಲ್ಲ ತೊಂದರೆ!

ಕುಟುಂಬಗಳು ಮತ್ತು ವ್ಯಕ್ತಿಗಳು, ಸ್ಟಾಕ್ ಎಕ್ಸ್‌ಚೆಂಜ್‌ಗಳು, ವಿಶ್ಲೇಷಕರು ಮತ್ತು ನಿಯಂತ್ರಕ ಸಂಸ್ಥೆಗಳಿಂದ ಪಡೆದ ಷೇರುಗಳ ವಿವರ ಮತ್ತು ಹಣಕಾಸಿನ ಮಾಹಿತಿಯನ್ನು ಬಳಸಿಕೊಂಡು ಶ್ರೀಮಂತರ ಪಟ್ಟಿಯನ್ನು ರಚಿಸಲಾಗಿದೆ ಎಂದು ಫೋರ್ಬ್ಸ್ ಹೇಳಿದೆ. ಪಟ್ಟಿಯನ್ನು ಸೆಪ್ಟೆಂಬರ್ 23 ರ ಸ್ಟಾಕ್ ಬೆಲೆಗಳು ಮತ್ತು ವಿನಿಮಯ ದರಗಳ ಆಧಾರದ ಮೇಲೆ ಲೆಕ್ಕಹಾಕಲಾಗಿದೆ ಎಂದು ಫೋರ್ಬ್ಸ್ ಹೇಳಿದೆ.

ಒಂದೆಡೆ, ದೇಶ ಕೊರೊನಾ ನಂತರ ವ್ಯಾಪಾರ ವಹಿವಾಟಿಗೆ ತೆರೆದುಕೊಂಡಿದ್ದರೂ ಇನ್ನೂ ಆರ್ಥಿಕತೆ ಕುಂಟುತ್ತಲೇ ಸಾಗುತ್ತಿದೆ. ಷೇರು ಮಾರುಕಟ್ಟೆಯು ಒಂದು ವರ್ಷದ ಹಿಂದೆ ಸ್ವಲ್ಪಮಟ್ಟಿಗೆ ಕುಸಿದಿದೆ. ಇದೇ ಅವಧಿಯಲ್ಲಿ ರೂಪಾಯಿ ಮೌಲ್ಯ 10% ನಷ್ಟು ಕುಸಿದಿದೆ. ಇದರ ಹೊರತಾಗಿಯೂ, ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು 25 ಶತಕೋಟಿಯಿಂದ ಡಾಲರ್‌ನಿಂದ 800 ಶತಕೋಟಿ ಡಾಲರ್‌ಗೆ ಮುಟ್ಟಿದೆ.

English summary
India's 100 Richest list: Gautam Adani topped the 2022 Forbes list of India's 100 Richest with a net worth of $150 billion. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X