Gautam Adani: ಮಹಾಕುಂಭ ಮೇಳದಲ್ಲಿ ಗೌತಮ್‌ ಅದಾನಿಯಿಂದ ಮಹಾಪ್ರಸಾದ ಸೇವೆ

ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್‌ ಅದಾನಿ ಅವರು ಇಂದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡರು. ಇಸ್ಕಾನ್‌ ಸಹಯೋಗದೊಂದಿಗೆ ಅದಾನಿ ಗ್ರೂಪ್‌ ಅಲ್ಲಿ ಮಹಾಪ್ರಸಾದ ವಿತರಿಸುವ ಕೆಲಸ ಮಾಡುತ್ತಿದೆ. ಇಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿರುವ ಅದಾನಿ ಅವರು ಪವಿತ್ರ ಸ್ನಾನ ಮಾಡಿ ಬಳಿಕ ತಾವೇ ಖುದ್ದಾಗಿ ಭಕ್ತರಿಗೆ ಮಹಾಪ್ರಸಾದ ವಿತರಿಸಿದರು.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಇಸ್ಕಾನ್ ದೇವಾಲಯದ ಶಿಬಿರಕ್ಕೆ ಭೇಟಿ ನೀಡಿದರು. ಅದಾನಿ ಸಮೂಹದ ಸಹಯೋಗದೊಂದಿಗೆ ಇಸ್ಕಾನ್ ತನ್ನ "ಮಹಾಪ್ರಸಾದ್ ಸೇವೆ" ಕಾರ್ಯಕ್ರಮದಡಿ ಪ್ರತಿದಿನವೂ ಒಂದು ಲಕ್ಷ ಮಂದಿ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮದಡಿ ಯಾತ್ರಾರ್ಥಿಗಳಿಗೆ ಉಚಿತ, ಶುದ್ಧ ಸಸ್ಯಾಹಾರಿ ಊಟವನ್ನು ಒದಗಿಸಲಾಗುತ್ತಿದೆ. ಇದು ಇಸ್ಕಾನ್‌ನ ನಿಸ್ವಾರ್ಥ ಸೇವೆ ಮತ್ತು ಭಕ್ತಿಯ ಧ್ಯೇಯದ ಪ್ರತಿಬಿಂಬ ಎಂದು ಹೇಳಲಾಗುತ್ತಿದೆ.

Gautam Adani Participates In Maha Prasada Seva At Maha Kumbh Mela In Prayagraj

ತನ್ನ ಕುಟುಂಬದೊಂದಿಗೆ ಭೇಟಿ ನೀಡಿರುವ ಅದಾನಿ ಅವರು ಮಹಾ ಪ್ರಸಾದವನ್ನು ಸಿದ್ಧಪಡಿಸುವ ಅಡುಗೆ ಮನೆಗಳು ಹಾಗೂ ಸೇವಾ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಇನ್ನು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಕೆಲಸವನ್ನು ಶ್ಲಾಘಿಸಿದರು. ಭಕ್ತರಿಗೆ ಸೇವೆ ಸಲ್ಲಿಸುವುದು ಗಂಗಾಮಾತೆಯ ಸೇವೆಗೆ ಸಮನಾದುದು ಎಂದು ಅದಾನಿ ಅಭಿಪ್ರಾಯಪಟ್ಟರು. ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ಮಾಡುವ ಸೇವಾ ಕಾರ್ಯಗಳು ಧಾರ್ಮಿಕವಾಗಿ ವಿಶಿಷ್ಟವಾದ ಮಹತ್ವವನ್ನು ಹೊಂದಿವೆ ಎಂದರು.

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟಗಳಲ್ಲಿ ಒಂದಾದ ಮಹಾ ಕುಂಭಮೇಳದಲ್ಲಿ ಇಸ್ಕಾನ್ ಮತ್ತು ಅದಾನಿ ಗ್ರೂಪ್ ಸಹಯೋಗದಲ್ಲಿ ನಡೆಯುತ್ತಿರುವ ಈ ಸೇವಾಕಾರ್ಯವು ಜನಮನ್ನಣೆ ಗಳಿಸಿದೆ. ಮಹಾಕುಂಭಮೇಳಕ್ಕಾಗಿ ಇಲ್ಲಿ ದೊಡ್ಡ ಪ್ರಮಾಣದ ಅಡುಗೆ ಮನೆಗಳು ಮತ್ತು ಪ್ರಸಾದ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿದಿನವೂ ಭಕ್ತರ ಹಸಿವು ನೀಗಿಸುವ ಮಹತ್ವದ ಕೆಲಸ ಮಾಡುತ್ತಿದೆ. ಅದಾನಿ ಹಾಗೂ ಇಸ್ಕಾನ್‌ ಕಾರ್ಯಕ್ರಮದ ಮೂಲಕ ಪ್ರತಿದಿನವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಅದಾನಿ ಅವರು ಮಹಾಕುಂಭ ಮೇಳ ಪ್ರದೇಶದಲ್ಲಿ ಇಸ್ಕಾನ್‌ನ ಸೇವಾ ಶಿಬಿರಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಅಲ್ಲಿ ಮಹಾಪ್ರಸಾದವನ್ನು ಸಿದ್ಧಪಡಿಸುವ ಅಡುಗೆಮನೆ ಪರಿಶೀಲಿಸಿದರು. ಈ ವೇಳೆ ಅದಾನಿ ಅವರು ಭಕ್ತರಿಗೆ ಸೇವೆ ಸಲ್ಲಿಸುವುದು ಗಂಗಾಮಾತೆಯ ಸೇವೆಗೆ ಸಮಾನ ಎಂದರು. ಸೇವಾ ಕಾರ್ಯಗಳನ್ನು ಶುದ್ಧ ಹೃದಯದಿಂದ ನಿರ್ವಹಿಸಿದಾಗ ಅದು ದೇವರನ್ನು ತಲುಪುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ಭೇಟಿ ವೇಳೆ ಗೌತಮ್ ಅದಾನಿ ಅವರು ಮಹಾಕುಂಭ ಮೇಳದ ನಿಮಿತ್ತ ಒಂದು ಕೋಟಿ ಉಚಿತ ಆರತಿ ಸಂಗ್ರಹ ಪುಸ್ತಕಗಳನ್ನು ವಿತರಿಸುತ್ತಿರುವ ಗೀತಾ ಪ್ರೆಸ್‌ ಶಿಬಿರಗಳಿಗೂ ಭೇಟಿ ನೀಡಿದರು. ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯನ್ನು ಶ್ಲಾಘಿಸಿದರು.

ಮಹಾಪ್ರಸಾದ ಸೇವೆಯಡಿ ಮಹಾಕುಂಭ ಮೇಳ ನಡೆಯುವ ಜನವರಿ 13ರಿಂದ ಫೆಬ್ರವರಿ 26ರವರೆಗೆ ಐದು ಮಿಲಿಯನ್ ಭಕ್ತರಿಗೆ ಸೇವೆ ಸಲ್ಲಿಸಲು ಅದಾನಿ ಗ್ರೂಪ್‌ ಮುಂದಾಗಿದೆ. ಇದಕ್ಕಾಗಿ ಇಸ್ಕಾನ್‌ ಎರಡು ದೊಡ್ಡ ಅಡುಗೆಮನೆಗಳನ್ನು ಪ್ರಯಾಗ್‌ರಾಜ್‌ನಲ್ಲಿ ತೆರೆದಿದ್ದು, ಮಹಾಕುಂಭ ನಡೆಯುವ ಹಲವು ಪ್ರದೇಶಗಳಲ್ಲಿ 40 ಪ್ರಸಾದ ವಿತರಣಾ ಕೇಂದ್ರಗಳನ್ನು ಕೂಡ ತೆರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+