‘ಗೌರಿ ಗತಿಯೇ ನಿಮಗೂ ಬರಲಿದೆ’ಎಂದಿದ್ದ ಹಿಂದು ನಾಯಕಿ ಮೇಲೆ ಕೇಸ್

Subscribe to Oneindia Kannada
   gauri lankesh : Kerala Hindu Aikyavedi leader K P Sasikala gives controversy statement

   ಕೋಯಿಕ್ಕೋಡ್, ಸೆಪ್ಟೆಂಬರ್ 11: 'ಪತ್ರಕರ್ತೆ ಗೌರಿ ಲಂಕೇಶ್ ಅವರಿಗಾದ ಗತಿಯೇ ನಿಮಗೂ ಬರಲಿದೆ,' ಎಂದು ವಿವಾದಿತ ಹೇಳಿಕೆ ನೀಡಿದ್ದ ಹಿಂದು ಐಕ್ಯವೇದಿ ಸಂಘಟನೆಯ ಕೇರಳ ಅಧ್ಯಕ್ಷೆ ಕೆ.ಪಿ. ಶಶಿಕಲಾ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

   ಗೌರಿಯನ್ನು ನಕ್ಸಲರು ಕೊಂದೇ ಇಲ್ಲ ಅಂತಾರೆ ಶಿವಸುಂದರ್

   ಶನಿವಾರ ಕೋಯಿಕ್ಕೋಡ್ ನ ಪರವೂರ್ ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಅವರಿಗಾದ ಗತಿಯೇ ನಿಮಗೂ ಬರಲಿದೆ ಎಂದು ಪ್ರಗತಿಪರ ಹಾಗೂ ಜಾತ್ಯಾತೀತ ಪತ್ರಕರ್ತರು ಹಾಗೂ ಲೇಖಕರಿಗೆ ಎಚ್ಚರಿಕೆ ನೀಡಿದ್ದರು.

   'Gauri Lankesh’s fate awaits you': 2 complaint registered against Kerala Hindu leader KP Sasikala

   'ಅನಗತ್ಯವಾಗಿ ಮೃತ್ಯುವನ್ನು ಆಹ್ವಾನಿಸಿಕೊಳ್ಳಬೇಡಿ. ಸಾವಿನ ದವಡೆಯಿಂದ ಪಾರಾಗಲು ಮೃತ್ಯುಂಜಯ ಹೋಮ ಮಾಡಿ, ಪ್ರಾಣ ಉಳಿಸಿಕೊಳ್ಳಿ' ಎಂದು ಪ್ರಗತಿಪರರಿಗೆ ಬಿಟ್ಟಿ ಸಲಹೆ ಬೇರೆ ನೀಡಿದ್ದರು.

   ಪರವೂರ್ ಠಾಣೆಯಲ್ಲಿ ಶಶಿಕಲಾ ವಿರುದ್ಧ ಐಪಿಸಿ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಶಾಸಕ ವಿಡಿ ಸತೀಶನ್ ಮತ್ತು ಡಿವೈಎಫ್ಐ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

   ಇದೇ ವೇಳೆ ಕೋಯಿಕ್ಕೋಡ್ ನ ಕಸಬಾ ಠಾಣೆಯಲ್ಲೂ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2006ರಲ್ಲಿ ಇದೇ ಕಸಬಾ ಠಾಣೆ ವ್ಯಾಪ್ತಿಯಲ್ಲಿ ಶಶಿಕಲಾ ವಿವಾದಿತ ಭಾಷಣ ಮಾಡಿದ್ದರು. ಈ ಭಾಷಣಕ್ಕೆ ಸಂಬಂಧಿಸಿದಂತೆ ಈಗ ಪ್ರಕರಣ ದಾಖಲಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Kerala police have registered two separate cases against Hindu Aikya Vedi leader K P Sasikala after she threatened secular writers on Sunday saying the fate of murdered Kannada journalist Gauri Lankesh also awaits them.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ