ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತೆ ಗೌರಿಗೆ ರಷ್ಯಾದ ಪ್ರತಿಷ್ಠಿತ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ರಷ್ಯಾದ ಅನಾ ಪುಲಿತ್ಕೋವಸ್ಕಾಯ ಪ್ರಶಸ್ತಿ (ಮರಣೋತ್ತರ) ಗೌರವ ಲಭಿಸಿದೆ. ಪಾಕಿಸ್ತಾನದ ಗುಲಾಲಯ್ ಇಸ್ಮಾಯಿಲ್‌ ಅವರಿಗೂ ಈ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ.

ಗೌರಿ ಲಂಕೇಶ್ ಹತ್ಯೆ, ವಿಜಯಪುರದಲ್ಲಿ ಎಸ್‌ಐಟಿ ತಂಡಗೌರಿ ಲಂಕೇಶ್ ಹತ್ಯೆ, ವಿಜಯಪುರದಲ್ಲಿ ಎಸ್‌ಐಟಿ ತಂಡ

ರಷ್ಯಾ ಮೂಲದ ರಾ ಇನ್‌ ವಾರ್‌ ಸಂಸ್ಥೆ ನೀಡುವ ಅನಾ ಪುಲಿತ್ಕೋವಸ್ಕಾಯ ಪ್ರಶಸ್ತಿ ಇದಾಗಿದೆ. ಸಮಾಜದ ದಮನಿತರಿಗಾಗಿ ದನಿ ಎತ್ತಿ, ತಮ್ಮ ಕಠೋರ ಬರವಣಿಗೆಯಿಂದ ಸಮಾಜದ ತಪ್ಪುಗಳನ್ನು ತಿದ್ದಿದ ವ್ಯಕ್ತಿ. ಅಂಥವರ ದನಿಯನ್ನು ಸೆಪ್ಟಂಬರ್‌ 5ರಂದು ಹಂತಕರು ನಿಲ್ಲಿಸಿದ್ದರು ಎಂದು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಗೌರಿ ಬಗ್ಗೆ ಹೊಗಳಲಾಗಿದೆ.

Gauri Lankesh

ಈ ಕುರಿತು ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್ ಹೇಳಿಕೆ ನೀಡಿದ್ದು, ಯಾರ ಸತ್ಯವನ್ನು ಬರೆಯಬೇಕು, ಹೋರಾಡಬೇಕು ಎಂದುಕೊಂಡಿರುತ್ತಾರೋ ಅಂತಹ ಪತ್ರಕರ್ತರಿಗೆ ಇದರಿಂದ ಪ್ರೇರಣೆಯಾಗುತ್ತದೆ. ಗೌರಿ ಯಾವುದಕ್ಕಾಗಿ ಹೋರಾಡುತ್ತಿದ್ದರೋ ಅದಕ್ಕೆ ಸಂದ ಗೌರವ ಎಂದಿದ್ದಾರೆ.

ಅನಾ ಪುಲಿತ್ಕೋವಸ್ಕಾಯ ಎಂಬ ಒಬ್ಬ ರಷ್ಯಾ ಮೂಲದ ಪತ್ರಕರ್ತರನ್ನು 2006ರ ಅಕ್ಟೋಬರ್‌ 7ರಂದು ಹತ್ಯೆ ಮಾಡಲಾಗಿತ್ತು. ಅವರ ನೆನಪಿಗಾಗಿ ಲಂಡನ್‌ ಮೂಲದ ರಾ ಎಂಡ್‌ ವಾರ್‌ ಎಂಬ ಸಂಸ್ಥೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ.

English summary
Journalist Gauri Lankesh who was shot dead at her residence in Bengaluru has been honored with the Annual Anna Politkovskaya Award, posthumously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X