• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಚಿತ್ರ ನಮನ

|

ಬೆಂಗಳೂರು, ಅಕ್ಟೋಬರ್ 02 : ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಂತಾದ ಗಣ್ಯರು ದೆಹಲಿಯ ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

'ಮಹಾತ್ಮ ಗಾಂಧಿ ಅವರು ಸ್ವಚ್ಛತೆಗೆ ಆದ್ಯತೆ ನೀಡಲು ಕರೆ ನೀಡಿದ್ದರು. ಗಾಂಧಿ ಜಯಂತಿಯಂದು ದೇಶದ ಜನರು ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲ ನೀಡಿ, ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ. [ಗಾಂಧೀಜಿ ಅವರ ಕನಸು ಕರ್ನಾಟಕದಲ್ಲಿ ನನಸು]

ಭಾರತ ದೇಶ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಗಾಂಧಿ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಆಚರಣೆ ಮಾಡಲಾಗುತ್ತದೆ. ಆ ಮೂಲಕ ಶಾಂತಿ ಪ್ರಿಯ, ಅಹಿಂಸಾ ವಾದಿ ಗಾಂಧೀಜಿಯವರಿಗೆ ನಮನ ಸಲ್ಲಿಸಲಾಗುತ್ತಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಮುಂತಾದವರು ರಾಜ್‌ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು. ಚಿತ್ರಗಳಲ್ಲಿ ನೋಡಿ ಗಾಂಧಿ ಸಮಾಧಿಗೆ ಗಣ್ಯರ ನಮನ...... [ಪಿಟಿಐ ಚಿತ್ರಗಳು]

ಪುಷ್ಪ ನಮನ ಸಲ್ಲಿಸಿದ ರಾಷ್ಟ್ರಪತಿ

ಪುಷ್ಪ ನಮನ ಸಲ್ಲಿಸಿದ ರಾಷ್ಟ್ರಪತಿ

ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಮಹಾತ್ಮನಿಗೆ ನಮಿಸಿದ ಮೋದಿ

ಮಹಾತ್ಮನಿಗೆ ನಮಿಸಿದ ಮೋದಿ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರುದೆಹಲಿಯ ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ಸ್ವಚ್ಛ ಭಾರತಕ್ಕೆ ಬೆಂಬಲ ನೀಡಿ

ಸ್ವಚ್ಛ ಭಾರತಕ್ಕೆ ಬೆಂಬಲ ನೀಡಿ

'ಮಹಾತ್ಮ ಗಾಂಧಿ ಅವರು ಸ್ವಚ್ಛತೆಗೆ ಆದ್ಯತೆ ನೀಡಲು ಕರೆ ನೀಡಿದ್ದರು. ಗಾಂಧಿ ಜಯಂತಿಯಂದು ದೇಶದ ಜನರು ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲ ನೀಡಿ, ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಮನ ಸಲ್ಲಿಸಿದ ಉಪರಾಷ್ಟ್ರಪತಿ

ನಮನ ಸಲ್ಲಿಸಿದ ಉಪರಾಷ್ಟ್ರಪತಿ

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಶುಕ್ರವಾರ ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.

ನಮನ ಸಲ್ಲಿಸಿದ ಅಡ್ವಾಣಿ

ನಮನ ಸಲ್ಲಿಸಿದ ಅಡ್ವಾಣಿ

ಮಹಾತ್ಮ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ನಮನ ಸಲ್ಲಿಸಿದ ಕೇಜ್ರಿವಾಲ್

ನಮನ ಸಲ್ಲಿಸಿದ ಕೇಜ್ರಿವಾಲ್

ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ನಮನ ಸಲ್ಲಿಸಿದ ಸೋನಿಯಾ ಗಾಂಧಿ

ನಮನ ಸಲ್ಲಿಸಿದ ಸೋನಿಯಾ ಗಾಂಧಿ

ಗಾಂಧಿ ಜಯಂತಿ ಪ್ರಯುಕ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ನಮನ ಸಲ್ಲಿಸಿದ ವೆಂಕಯ್ಯ ನಾಯ್ಡು

ನಮನ ಸಲ್ಲಿಸಿದ ವೆಂಕಯ್ಯ ನಾಯ್ಡು

ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ರಾಜ್ ಘಾಟ್‌ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ಗಮನ ಸೆಳೆದ ಮೇಕ್ ಇನ್ ಇಂಡಿಯಾ

ಗಮನ ಸೆಳೆದ ಮೇಕ್ ಇನ್ ಇಂಡಿಯಾ

ಗಾಂಧಿ ಜಯಂತಿ ಅಂಗವಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಮುಂದೆ ನಿರ್ಮಾಣ ಮಾಡಲಾಗಿದ್ದ ಮೇಕ್ ಇನ್ ಇಂಡಿಯಾ ಮತ್ತು ಸ್ವಚ್ಛ ಭಾರತದ ಲೋಗೋ ಎಲ್ಲರ ಗಮನ ಸೆಳೆದವು.

ರಾಷ್ಟ್ರಪಿತನಿಗೆ ಮಕ್ಕಳ ನಮನ

ರಾಷ್ಟ್ರಪಿತನಿಗೆ ಮಕ್ಕಳ ನಮನ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ಮುರದಾಬಾದ್‌ನಲ್ಲಿ ಶಾಲಾ ಮಕ್ಕಳು ಗಾಂಧಿಯಂತೆ ವೇಷ ಧರಿಸಿ ಮಹಾತ್ಮನಿಗೆ ನಮನ ಸಲ್ಲಿಸಿದರು.

ಅಹಮದಾಬಾದ್‌ನಲ್ಲಿ ಮಹಾತ್ಮನಿಗೆ ನಮನ

ಅಹಮದಾಬಾದ್‌ನಲ್ಲಿ ಮಹಾತ್ಮನಿಗೆ ನಮನ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 146 ನೇ ಜನ್ಮದಿನಾಚರಣೆ ಅಂಗವಾಗಿ ಅಹಮದಾಬಾದ್‌ನಲ್ಲಿನ ಸಬರಮತಿ ಆಶ್ರಮದಲ್ಲಿ ಚರಕದ ಮೂಲಕ ನೂಲು ತೆಗೆಯಲಾಯಿತು.

English summary
Prime Minister Narendra Modi and other leaders on Friday paid tribute to Mahatma Gandhi on his 146th birth anniversary at his Raj Ghat memorial, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X