G20 Summit: ಭಾರತಕ್ಕಿಂದು ಜೋ ಬಿಡನ್ ಆಗಮನ- ದೆಹಲಿಯಲ್ಲಿ ಮೂರು ಹಂತದ ಭದ್ರತೆ!
ದೆಹಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬಿಡನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಬಿಡೆನ್ ಇಂದು (ಸೆಪ್ಟೆಂಬರ್ 7) ಭಾರತಕ್ಕೆ ಪ್ರಯಾಣಿಸಲಿದ್ದಾರೆ.
ರಾಷ್ಟ್ರ ರಾಜಧಾನಿಗೆ ಅವರ ಭೇಟಿಯ ಸಮಯದಲ್ಲಿ, ಬಿಡೆನ್ ಅವರು ಯುಎಸ್ ಅಧ್ಯಕ್ಷರ ಅಧಿಕೃತ ಕಾರು ಬೀಸ್ಟ್‌ನಲ್ಲಿ (Beast) ಪ್ರಯಾಣಿಸುತ್ತಾರೆ. ಇದನ್ನು ಇದನ್ನು US ನಿಂದ ಭಾರತಕ್ಕೆ ಬೋಯಿಂಗ್ C-17 Globemaster III ಎಂಬ ದೊಡ್ಡ ಮಿಲಿಟರಿ ಸಾರಿಗೆ ವಿಮಾನದಲ್ಲಿ ತರಲಾಗುತ್ತಿದೆ.

ಮೂರು ಹಂತದ ಭದ್ರತೆ
ಜೋ ಬಿಡೆನ್ ಅವರ ದೆಹಲಿ ಭೇಟಿಗೆ ಮೂರು ಹಂತದ ಭದ್ರತೆಯನ್ನು ಏರ್ಪಡಿಸಲಾಗಿದೆ. ಮೊದಲನೆಯದ್ದು ಹೊರಗೆ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೆ, ಎರಡು ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಗಳನ್ನು ಮತ್ತು ಮೂರು ಒಳಗೆ ರಹಸ್ಯ ಸೇವಾ ಏಜೆಂಟ್‌ಗಳ ಭದ್ರತೆಯನ್ನು ಹೊಂದಿರುತ್ತಾರೆ.
ಬಿಡೆನ್ ಮತ್ತು ಇತರ ಯುಎಸ್ ಪ್ರತಿನಿಧಿಗಳು ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಸಿಬ್ಬಂದಿ ಹಿನ್ನೆಲೆ ತಪಾಸಣೆಗೆ ಒಳಗಾಗುತ್ತಾರೆ ಮತ್ತು ಜೋ ಬಿಡೆನ್ ತಂಗುವ 14 ನೇ ಮಹಡಿಗೆ ಭೇಟಿ ನೀಡುವವರಿಗೆ ವಿಶೇಷ ಪ್ರವೇಶ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಮಹಡಿ ತಲುಪಲು ವಿಶೇಷ ಲಿಫ್ಟ್ ಅಳವಡಿಸಲಾಗಿದೆ. ಈ ಹೋಟೆಲ್‌ನ ಸುಮಾರು 400 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಅಂದರೆ ಭದ್ರತೆ ದೃಷ್ಟಿಯಿಂದ ಯಾವುದೇ ಕೊಠಡಿಗಳನ್ನು ಜನರಿಗೆ ನೀಡಲಾಗಿಲ್ಲ.
ಭಾರತಕ್ಕೆ ಬರುತ್ತಿದೆ ಬೀಸ್ಟ್ ಕಾರು
'ಬೀಸ್ಟ್' ಯುಎಸ್ ಅಧ್ಯಕ್ಷರ ಅಧಿಕೃತ ಕಾರಾಗಿದೆ. ಬಿಡೆನ್ G20 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದರಿಂದ ಇದನ್ನು US ನಿಂದ ಭಾರತಕ್ಕೆ ಬೋಯಿಂಗ್ C-17 Globemaster III ಎಂಬ ದೊಡ್ಡ ಮಿಲಿಟರಿ ಸಾರಿಗೆ ವಿಮಾನದಲ್ಲಿ ತರಲಾಗುತ್ತಿದೆ.
ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸುರಕ್ಷಿತ ಎಂದು ಕರೆಯಲ್ಪಡುವ ಬುಲೆಟ್ ಪ್ರೂಫ್ ಬೀಸ್ಟ್ ಕಾರು ಎಲ್ಲಾ ಸಮಯದಲ್ಲೂ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವೀಸ್‌ನ ಕಾವಲುಗಾರರ ಅಡಿಯಲ್ಲಿರುತ್ತದೆ. ದೆಹಲಿಯ ಮೇಲೆ ಕಣ್ಣಿಡಲು ವಾಯುಸೇನೆ ಮತ್ತು ಭಾರತೀಯ ಸೇನೆಯ ಹೆಲಿಕಾಪ್ಟರ್‌ಗಳು ನಿರಂತರವಾಗಿ ಆಕಾಶದಲ್ಲಿ ಸುತ್ತುತ್ತವೆ. ಈ ಹೆಲಿಕಾಪ್ಟರ್‌ಗಳಲ್ಲಿ ಸೇನೆ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ಇರುತ್ತಾರೆ.
ಹಲವೆಡೆ ಆ್ಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಲಾಗುವುದು. ದೆಹಲಿಯ ಬಹುಮಹಡಿ ಕಟ್ಟಡಗಳ ಮೇಲೆ NSG ಮತ್ತು ಸೇನಾ ಸ್ನೈಪರ್‌ಗಳನ್ನು ನಿಯೋಜಿಸಲಾಗುವುದು. ದೆಹಲಿ ಪೊಲೀಸರು ವಿವಿಧ ದೇಶಗಳ ತಂಡಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಮತ್ತು ಅವರ ಭದ್ರತಾ ಅಗತ್ಯತೆಗಳು ಮತ್ತು ಕಾಳಜಿಗಳನ್ನು ತೆಗೆದುಕೊಳ್ಳಲಾಗಿದೆ.
ಭಾರತದಲ್ಲಿ ಜೋ ಬಿಡೆನ್
ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರ, ಜೋ ಬಿಡೆನ್ ಸೆಪ್ಟೆಂಬರ್ 7 ಗುರುವಾರ ಭಾರತಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ಬಿಡೆನ್ ಅವರು ಸೆಪ್ಟೆಂಬರ್ 8 ರಂದು ಐತಿಹಾಸಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಶ್ವೇತಭವನ ಶುಕ್ರವಾರ ಪ್ರಕಟಿಸಿದೆ. ಜೋ ಬಿಡೆನ್ ಅವರು ಸೆಪ್ಟೆಂಬರ್ 9-10 ರಂದು ಜಿ20 ಶೃಂಗಸಭೆಯ ಅಧಿಕೃತ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications