ಮಾರ್ಚ್ ಮೊದಲ ದಿನ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
ನವದೆಹಲಿ, ಮಾರ್ಚ್ 01: ದೇಶದಲ್ಲಿ ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ಕಳೆದ ಶನಿವಾರವೂ ಮೂರು ದಿನಗಳ ಸ್ಥಿರತೆ ನಂತರ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಪೆಟ್ರೋಲ್‌ಗೆ 24 ಪೈಸೆ ಹಾಗೂ ಡೀಸೆಲ್‌ಗೆ 15 ಪೈಸೆ ಏರಿಕೆಯಾಗಿತ್ತು.
ಈ ಬೆಲೆ ಏರಿಕೆಯೊಂದಿಗೆ ಪೆಟ್ರೋಲ್ ಲೀಟರಿಗೆ 91.17 ರೂ ಹಾಗೂ ಡೀಸೆಲ್‌ಗೆ 81.47 ರೂ ಮುಟ್ಟಿದೆ. ಈ ಬೆಲೆ ಎರಡು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದು, ಸೋಮವಾರವೂ ಇದೇ ಬೆಲೆ ಮುಂದುವರೆದಿದೆ. ಮುಂದೆ ಓದಿ...
ಪೆಟ್ರೋಲ್, ಡೀಸೆಲ್, ಗ್ಯಾಸ್: ಮಾರ್ಚ್.1ರಿಂದ ಎಲ್ಲವೂ ಬದಲು!

ಪ್ರಮುಖ ನಗರಗಳಲ್ಲಿ ತೈಲ ಬೆಲೆ
ನಗರ -ಪೆಟ್ರೋಲ್ -ಡೀಸೆಲ್
ದೆಹಲಿ: 91.17 ರೂ 81.47 ರೂ
ಮುಂಬೈ: 97.57 ರೂ 88.60 ರೂ
ಚೆನ್ನೈ: 93.11 ರೂ 86.45 ರೂ
ಕೋಲ್ಕತ್ತಾ: 91.35 ರೂ 84.35 ರೂ
ಬೆಂಗಳೂರು: 94.22 ರೂ 86.37 ರೂ

ಫೆಬ್ರವರಿಯಲ್ಲಿ 14 ಬಾರಿ ಏರಿಕೆ ಕಂಡಿದ್ದ ತೈಲ ಬೆಲೆ
ಫೆಬ್ರವರಿ 9ರಿಂದಲೂ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಫೆ.9ರಿಂದ ಹದಿನಾಲ್ಕು ಬಾರಿ ಬೆಲೆ ಏರಿಕೆ ಕಂಡಿತ್ತು. ಕಳೆದ ವಾರ ಪೆಟ್ರೋಲ್ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆಯಾಗಿದ್ದು, ಕೆಲವು ನಗರಗಳಲ್ಲಿ ಲೀಟರಿಗೆ 100ರೂವರೆಗೂ ತಲುಪಿತ್ತು. 2021ರಲ್ಲಿ ತೈಲ ಬೆಲೆ ಏರಿಕೆಯನ್ನು ಗಮನಿಸುವುದಾದರೆ, ವರ್ಷದ ಮೊದಲ ಎರಡು ತಿಂಗಳಲ್ಲಿಯೇ 26 ಬಾರಿ ತೈಲ ಬೆಲೆ ಏರಿಕೆಯಾಗಿದೆ.
ತಿಂಗಳ ಆರಂಭದಲ್ಲೇ ಕಹಿ ಸುದ್ದಿ, ಅಡುಗೆ ಅನಿಲ ದರ ಏರಿಕೆ!

ತೆರಿಗೆ ಕಡಿತಗೊಳಿಸಿದ್ದ ರಾಜ್ಯಗಳು
ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭೆ ಚುನಾವಣೆ ಎದುರಾಗುತ್ತಿರುವ ಕಾರಣ ಕೋಲ್ಕತ್ತಾದಲ್ಲಿ ತೈಲಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿತ್ತು. ಫೆಬ್ರವರಿ 20ರಂದು ತೈಲ ಬೆಲೆ ತೆರಿಗೆಯನ್ನು ತಗ್ಗಿಸಿದ್ದು, ಇದೀಗ ಅಲ್ಲಿ, ಪೆಟ್ರೋಲ್‌ಗೆ 91.35 ರೂ ಇದ್ದರೆ, ಡೀಸೆಲ್‌ಗೆ 84.35 ರೂಪಾಯಿ ಇದೆ. ನಾಗಾಲ್ಯಾಂಡ್ ನಲ್ಲಿ ಕೂಡ ಒಂದು ಲೀಟರ್ ಪೆಟ್ರೋಲ್ ಮೇಲಿನ ತೆರಿಗೆ ದರದಲ್ಲಿ ಶೇ.29.80ರಿಂದ ಶೇ.25ಕ್ಕೆ ಇಳಿಸಲಾಗಿತ್ತು.

ಚಳಿಗಾಲದ ನಂತರ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ
ಚಳಿಗಾಲದ ಬಳಿಕ ಪೆಟ್ರೋಲಿಯಂ ದರ ತುಸು ಕಡಿಮೆಯಾಗಲಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವುದು ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಸ್ವಲ್ಪ ಇಳಿಕೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.