'100% ಪ್ಯೂರ್' ಎಂದು ಗ್ರಾಹಕರನ್ನು ದಾರಿ ತಪ್ಪಿಸಬೇಡಿ: ಡಾಬರ್ ಉತ್ಪನ್ನಗಳ ಮಾರಾಟಕ್ಕೆ FSSAI ಬ್ರೇಕ್
ನವದೆಹಲಿ: ಮಾರುಕಟ್ಟೆಯಲ್ಲಿ ಶೇಕಡಾ 100ರಷ್ಟು ಶುದ್ಧ, ಪರಿಶುದ್ಧ, ಸಾವಯವ ಎಂದು ಹೇಳಿಕೊಂಡು ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ಅಭಿಪ್ರಾಯಪಟ್ಟಿದೆ. ಹೀಗಾಗಿ ಡಾಬರ್ ಕಂಪನಿಗೆ ಬಹುತೇಕ ಎಲ್ಲ ಉತ್ಪನಗಳ ಮಾರಾಟಕ್ಕೆ ಬ್ರೇಕ್ ಹಾಕಿದೆ.
ಹೌದು, "ಶೇಕಡಾ 100" ಶುದ್ಧತೆ, ಪರಿಶುದ್ಧತೆ ಲೇಬಲ್ ಹಾಕಿಕೊಂಡು ಮಾರಾಟ ಮಾಡುತ್ತಿರುವ ಡಾಬರ್ ಕಂಪನಿಯು ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ನಿಯಮಗಳ ಪ್ರಕಾರ "ಶೇಕಡಾ 100' ಶುದ್ಧ, ನೈಸರ್ಗಿಕ, ಪ್ಯೂರ್ ಎಂಬ ಅಂಶವು ಸ್ಪಷ್ಟವಾಗಿಲ್ಲ. ಗ್ರಾಹಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ರೀತಿ ಹೇಳಿಕೊಂಡು ಮಾರಾಟ ಮಾಡುವಂತಿಲ್ಲ ಎಂದು FSSAI ನಿಷೇಧ ಹೇರಿದೆ. ಈ ಸಂಬಂಧ ವರದಿ ಸಲ್ಲಿಸುವಂತೆ ಕಂಪನಿಗೆ ಸೂಚನೆ ನೀಡಿದೆ.

ಡಾಬರ್ ಇಂಡಿಯಾ ಕಂಪನಿಯ 'ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ವರ್ಜಿನ್ ತೆಂಗಿನ ಎಣ್ಣೆ, ಎಳ್ಳೆಣ್ಣೆ, ಹಸುವಿನ ತುಪ್ಪ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ 'ಶೇಕಡಾ 100' ಪರಿಶುದ್ಧತೆ, ನೈಸರ್ಗಿಕ ಎಂಬ ಹಕ್ಕು ಸಹಿತ ಮಾರಾಟ ಮಾಡಲಾಗುತ್ತಿದೆ. ಇಂತಹ ಹಕ್ಕುಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಜಾಹೀರಾತು ಮತ್ತು ಹಕ್ಕುಗಳು) ನಿಯಮಗಳು- 2018ರ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಆಹಾರ ನಿಯಂತ್ರಕರು ತಿಳಿಸಿದ್ದಾರೆ.
"ಶೇ.100 ಪ್ಯೂರ್'ಬಳಸದಂತೆ ಸೂಚನೆ
ಯಾವೊಂದು ಉತ್ಪನ್ನಗಳು ಶೇ.100ರಷ್ಟು ಪರಿಶುದ್ಧವಾಗಿರುವುದಿಲ್ಲ ಎಂದು ನಿಯಮ ಹೇಳುತ್ತದೆ. ಈ ಕಾರಣಕ್ಕೇನೆ FSSAI ಮೇ 2025ರಲ್ಲಿ ಮಾರಾಟ ಮಾಡುವ ಆಹಾರ ಉತ್ಪನ್ನಗಳ ಮೇಲೆ, ಪ್ಯಾಕೇಜಿಂಗ್ ಹಾಗೂ ಪ್ರಚಾರ ಸಾಮಗ್ರಿಗಳ ಮೇಲೆ "ಶೇ.100 ಪ್ಯೂರ್' ಎಂದು ಬಳಸದಂತೆ ಸಲಹೆ ನೀಡಲಾಗಿದೆ. ಇದು ನಡುವೆಯು ಸೂಚನೆ ವಿರುದ್ಧ ಡಾಬರ್ ಇಂಡಿಯಾ ತನ್ನ ಉತ್ಪನ್ನಗಳ ಮೇಲೆ ಶೇ. 100ರಷ್ಟು ಶುದ್ಧ, ನೈಸರ್ಗಿಕ ಎಂದೆಲ್ಲ ಬರೆದುಕೊಂಡಿದೆ. ಹೀಗೆ ಹಾಕುವುದು ಸಂಪೂರ್ಣ ಶುದ್ಧತೆಯ ಹೆಸರಿನಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ ಎಂದು ತೀರ್ಮಾನಿಸಿ ಪ್ರಾಧಿಕಾರ ಮಾರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ.
ಡಾಬರ್ ಆಪಲ್ ಸೈಡರ್ ವಿನೆಗರ್, ಡಾಬರ್ ಸಾವಯವ ಜೇನುತುಪ್ಪ ಉತ್ಪನ್ನಗಳ ಮೇಲೆ ಪ್ರಾಧಿಕಾರ (FSSAI) ಪರಿಶೀಲಿಸಿ ಅನುಮೋದನೆ ನೀಡಬೇಕು. ಈ ಒಪ್ಪಿಗೆ ಇಲ್ಲಿದೆ ಉತ್ಪನ್ನಗಳ ಮೇಲೆ 'ಜೈವಿಕ್ ಭಾರತ್ ಲೋಗೋ' ಹಾಕಲಾಗಿದೆ ಎಂಬುದು ಆಹಾಯ ನಿಯಂತ್ರಕರ ಕಣ್ಣಿಗೆ ಬಿದ್ದಿದೆ. ಅಲ್ಲದೇ ಈ ರೀತಿ ಲೋಗೋವನ್ನು ನೈಸರ್ಗಿಕ ಆಹಾರದ ಮೇಲೆ ಮಾತ್ರವೇ ಬಳಸಲಾಗುತ್ತದೆ.
ನೋಟಿಸ್ ಜಾರಿ, ವರದಿ ಸಲ್ಲಿಕೆಗೆ ಸೂಚನೆ
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಡಾಬರ್ ಇಂಡಿಯಾ ಕಂಪನಿಗೆ ಮಾರಾಟ ನಿಷೇಧಿಸುವಂತೆ ಸೂಚಿಸಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಉತ್ಪನ್ನಗಳಿಗೆ, ಶೇ.100 ಹಕ್ಕಿಗೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಕೆಗೆ ನಿರ್ದೇಶಿಸಿದೆ.


Click it and Unblock the Notifications
