'ಅರವಿಂದ್ ಕೇಜ್ರಿವಾಲ್‌ಗೆ ಯಾವುದೇ ವಿಶೇಷ ವಿನಾಯಿತಿ ನೀಡಿಲ್ಲ'
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನಿನ ಮೇಲೆ, ಅವರಿಗೆ ಯಾವುದೇ ವಿಶೇಷ ವಿನಾಯಿತಿ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಇಡಿ ಪರವಾಗಿ ಎಎಸ್ ಜಿ ಎಸ್ ವಿ ರಾಜು ಪರ ಎಸ್ ಜಿ ತುಷಾರ್ ವಾದ ಮಂಡಿಸಿದರು. ಕೇಜ್ರಿವಾಲ್ ಪರವಾಗಿ ಅವರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.

ಗುರುವಾರದ ವಿಚಾರಣೆಯ ವೇಳೆ ಕೇಜ್ರಿವಾಲ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ವಿಷಯವನ್ನೇ ಎಡಿ ಪರ ವಕೀಲ ಕೋರ್ಟ್ ಮುಂದೆ ಪ್ರಸ್ತಾಪಿಸಿದರು. ಆಪ್ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್, ಮತದಾರರಿಗೆ ಎಎಪಿಗೆ ನೀವು ಮತ ಹಾಕಿದರೆ, ಜೂನ್ 2 ರಂದು ನಾನು ಮತ್ತೆ ಜೈಲಿಗೆ ಹೋಗ ಬೇಕಿಲ್ಲ ಎಂದು ನೀಡಿದ್ದ ಹೇಳಿಕೆ ಬಗ್ಗೆ ಕೋರ್ಟ್‌ನಲ್ಲಿ ಚರ್ಚೆ ನಡೆಯಿತು.
ಬಂಧನ ಏಕೆ?
ದೆಹಲಿ ಮದ್ಯ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದ್ದು, ಜಾರಿ ನಿರ್ದೇಶನಾಲಯ ಮಾರ್ಚ್ 21 ರಂದು ಬಂಧಿಸಿತ್ತು. ಮತ್ತು 10 ದಿನಗಳ ರಿಮಾಂಡ್ ಪಡೆದು ಏಪ್ರಿಲ್ 1 ರಂದು ಜೈಲಿಗೆ ಕಳುಹಿಸಲಾಯಿತು. ಅರವಿಂದ್ ಕೇಜ್ರಿವಾಲ್ ತಮ್ಮ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಇಡಿ ಇದನ್ನು ವಿರೋಧಿಸಿದೆ.

ಇಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಮ್ಮ ವಾದದಲ್ಲಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಪ್ರಸ್ತಾಪಿಸಿದರು. ಕೇಜ್ರಿವಾಲ್ ಚುನಾವಣಾ ಪ್ರಚಾರದ ವೇಳೆ ಜನರು ಆಪ್‌ಗೆ ಮತ ಹಾಕಿ, ಗೆಲ್ಲಿಸಿದರೆ, ತಾನು ಮತ್ತೆ ಜೈಲಿಗೆ ಹೋಗಬೇಕಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪ್ರಶ್ನಿಸಿ ತುಷಾರ್ ಮೆಹ್ತಾ ವಾದವನ್ನು ಮಂಡಿಸಿದರು. ಅರವಿಂದ್ ಕೇಜ್ರಿವಾಲ್ ಈ ರೀತಿ ಹೇಳಿಕೆ ನೀಡುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಆ ಹೇಳಿಕೆ ಕೇಜ್ರಿವಾಲ್ ಅವರ ಸ್ವಂತ ಗ್ರಹಿಕೆಯಾಗಿದೆ. ಕೇಜ್ರಿವಾಲ್‌ಗೆ ಜಾಮೀನು ನೀಡುವ ನಿರ್ಧಾರ ಮತ್ತು ಜೂನ್ 2 ರಂದು ಶರಣಾಗುವ ಆದೇಶವು ಸುಪ್ರೀಂ ಕೋರ್ಟ್‌ನ ಆದೇಶವಾಗಿದ್ದು, ಕಾನೂನು ಆ ಆದೇಶವನ್ನು ಅನುಸರಿಸುತ್ತದೆ. ಕೇಜ್ರಿವಾಲ್ ಯಾವಾಗ ಶರಣಾಗಬೇಕು ಎಂಬುದಕ್ಕೆ ನಮ್ಮ ಆದೇಶ ಸ್ಪಷ್ಟವಾಗಿದೆಯೇ? ನಿಗದಿತ ದಿನಾಂಕದಂದು ಕೇಜ್ರಿವಾಲ್ ಶರಣಾಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಅರವಿಂದ್‌ಗೆ ಮಧ್ಯಂತರ ಜಾಮೀನು
ಮೇ 10 ರಂದು ಸುಪ್ರೀಂ ಕೋರ್ಟ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕೇಜ್ರಿವಾಲ್ ಗೆ ಜೂನ್ 1ರವರೆಗೆ ರಿಲೀಫ್ ಸಿಕ್ಕಿದೆ. ಜೂನ್ 2 ರಂದು ಯಾವುದೇ ಪರಿಸ್ಥಿತಿಯಲ್ಲಿ ಶರಣಾಗುವಂತೆ ಅವರಿಗೆ ತಿಳಿಸಲಾಗಿದೆ.












Click it and Unblock the Notifications