ಏಪ್ರಿಲ್ 20ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪುನರಾರಂಭ
ನವದೆಹಲಿ, ಏಪ್ರಿಲ್ 18: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಏಪ್ರಿಲ್ 20ರಿಂದಲೇ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Recommended Video
ಲಾಕ್‌ಡೌನ್‌ನಿಂದಾಗಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು, ಏಪ್ರಿಲ್ 20ರ ಬಳಿಕ ಲಾಕ್‌ಡೌನ್ ನಿಯಮವನ್ನು ಸಡಿಲಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾ ನಡೆಸುತ್ತಿರುವವರಿಗೆ ಪತ್ರ ಬರೆದಿದ್ದು, ಎಂದಿನಂತೆ ವಾಹನಗಳ ಶುಲ್ಕವನ್ನು ಪಡೆಯುವಂತೆ ಹೇಳಿದೆ.

ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಾದ ಬಳಿಕ ಅಗತ್ಯ ವಾಹನಗಳು ಮಾತ್ರ ಟೋಲ್ ಮೂಲಕ ಚಲಿಸುತ್ತಿದ್ದವು. ಇದೀಗ ಲಾಕ್‌ಡೌನ್ ನಿಯಮ ಸಡಿಲಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿರುವುದರಿಂದ ಟೋಲ್ ಸಂಗ್ರಹವನ್ನು ಪುನರಾರಂಭಿಸುವುದುದಾಗಿ ಎನ್ಎಚ್‌ಎಐ ತಿಳಿಸಿದೆ.
ಅಗತ್ಯ ಸೇವಾ ಸರಕು ವಾಹನಗಳು ತುರ್ತಾಗಿ ಸ್ಥಳಗಳನ್ನು ತಲುಪಬೇಕಿರುವುದರಿಂದ ಟೋಲ್‌ಗಳನ್ನು ಮುಕ್ತಗೊಳಿಸಲಾಗಿದೆ ಎಂದು ಕೇಂದ್ರ ಸಾರಿಗೆ ಮಾಹಿತಿ ನೀಡಿತ್ತು.
ಆದರೆ ಟೋಲ್ ಶುಲ್ಕ ರದ್ದತಿ ತಾತ್ಕಾಲಿಕವಾಗಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದ ಮೇಲೆ ಮತ್ತೆ ಟೋಲ್ ಶುಲ್ಕ ಕೇಂದ್ರಗಳನ್ನು ಪ್ರಾರಂಭಿಸುವುದಾಗಿಯೂ ಕೇಂದ್ರ ಸಾರಿಗೆ ಇಲಾಖೆ ಸ್ಪಷ್ಟಪಡಿಸಿತ್ತು.
ಒಟ್ಟಿನಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದ ಒಂದೊಂದೇ ಇಲಾಖೆಗಳು ಅಧಿಕೃತವಾಗಿ ಧುಮುಕಿದ್ದವು. ಸಂಕಷ್ಟದ ಸಮಯದಲ್ಲಿ ನಾಗರಿಕರಿಗೆ ಹಲವು ವಿನಾಯ್ತಿಗಳನ್ನು ನೀಡುವ ಮೂಲಕ ನೆರವಿಗೆ ಧಾವಿಸಿದ್ದವು.












Click it and Unblock the Notifications