ನಿಂದನೆಯಿಂದ ಶರಣಾಗತಿಯವರೆಗೆ: ವಿರೋಧ ಪಕ್ಷಗಳ ಕ್ಷಮೆಯಾಚನೆಯ ನಾಟಕಗಳು!
ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಾಕೇತ್ ಗೋಖಲೆ ಅವರು ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಮುರ್ಡೇಶ್ವರ ಪುರಿಗೆ ಬೇಷರತ್ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಇದೊಂದು ಸುದೀರ್ಘ ಕಾನೂನು ಹೋರಾಟವಾಗಿತ್ತು. ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರು ಕ್ಷಮೆಯಾಚನೆ ಮಾಡುವುದರೊಂದಿಗೆ ಪ್ರಕರಣವು ತಾರ್ಕಿಕ ಅಂತ್ಯ ಕಂಡಿದೆ. 2021ರಲ್ಲಿ ಪುರಿ ಅವರು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ ಎಂದು ಸಾಕೇತ್ ಅವರು ಆರೋಪ ಮಾಡಿದ್ದರು. ಆದರೆ, ಈ ಸುಳ್ಳನ್ನು ಪ್ರಶ್ನಿಸಿ ಪುರಿ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕ್ಷಮೆಯಾಚಿಸಬೇಕು ಎಂದು ಹೇಳಿತ್ತು. ಕ್ಷಮೆ ಕೇಳುವ ವಿಚಾರದಲ್ಲಿ ಪದೇ ಪದೇ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿತ್ತು. ಬಂಧನಕ್ಕೆ ಒಳಪಡಿಸುವ ಎಚ್ಚರಿಕೆ ಬಂದ ಮೇಲೆ ಕೊನೆಗೂ ಸಾಕೇತ್ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಕ್ಷಮೆ ಕೇಳಬೇಕು ಮತ್ತು 50 ಲಕ್ಷ ದಂಡದ ಪಾವತಿ ಹಾಗೂ ಇನ್ಮುಂದೆ ಯಾವುದೇ ಮಾನನಷ್ಟ ಹೇಳಿಕೆಗಳನ್ನು ನೀಡಬಾರದು ಎಂದು ಸೂಚನೆ ನೀಡಲಾಗಿತ್ತು.
ಇದೊಂದು ಪ್ರತ್ಯೇಕ ಪ್ರಕರಣವಾಗಿ ಉಳಿದಿಲ್ಲ. ದೇಶದ ವಿರೋಧ ಪಕ್ಷದ ನಾಯಕರು ಪ್ರಚೋದನಕಾರಿ ಹಾಗೂ ಆಧಾರ ರಹಿತವಾಗಿ ಆರೋಪಗಳನ್ನು ಮಾಡುವುದನ್ನು ಮುಂದುವರಿಸಿದ್ದಾರೆ. ಆದರೆ, ಸತ್ಯಾಂಶ ಹಾಗೂ ಕಾನೂನಿನ ವಿಚಾರದಲ್ಲಿ ಹಿಂದೆ ಸರಿಯುತ್ತಾರೆ. ಈ ಪ್ರಕರಣವು ಅದಕ್ಕೆ ಮತ್ತೊಂದು ಸಾಕ್ಷಿ.

ರಾಹುಲ್ ಗಾಂಧಿಯಿಂದ ದಿಗ್ವಿಜಯ ಸಿಂಗ್ ವರೆಗೆ ಕಾಂಗ್ರೆಸ್ ನಾಯಕರು ಪದೇ ಪದೇ ಇದೇ ರೀತಿ ನಾಟಕವನ್ನು ಮುಂದುವರಿಸಿದ್ದಾರೆ. ಆಕ್ರೋಶವನ್ನು ಸೃಷ್ಟಿಸುವುದು, ಮಾಧ್ಯಮಗಳಲ್ಲಿ ಸಂಚಲನ ಮೂಡಿಸುವುದು ಮತ್ತು ನಂತರ ಕಾನೂನು ಬಿಸಿ ತೀವ್ರಗೊಂಡ ನಂತರ ಸದ್ದಿಲ್ಲದೆ ಮೌನಕ್ಕೆ ಜಾರುವುದು. ಆರ್‌ಎಸ್‌ಎಸ್ ಬಗ್ಗೆ ಅಪಪ್ರಚಾರ, ಪ್ರಧಾನಿ ನರೇಂದ್ರ ಮೋದಿ ನಿಂದಿಸುವುದು ಅಥವಾ ಸರ್ಜಿಕಲ್ ಸ್ಟ್ರೈಕ್‌ನಂತಹ ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆ ವಿಚಾರವನ್ನು ರಾಜಕೀಯಗೊಳಿಸುವುದಿರಲಿ. ಅಜಾಗರೂಕ ಹೇಳಿಕೆಗಳ ನಂತರ ನ್ಯಾಯಾಲಯದಲ್ಲಿ ಕ್ಷಮೆಯಾಚನೆ ಮಾಡುವುದು ಹೆಚ್ಚಾಗುತ್ತಿದೆ.
ಮಹಾತ್ಮ ಗಾಂಧಿಯವರ ಹತ್ಯೆಗೆ ಆರ್‌ಎಸ್‌ಎಸ್ ಅನ್ನು ದೂಷಿಸುತ್ತಿರುವ ರಾಹುಲ್ ಗಾಂಧಿ ಅವರ 2014ರ ಹೇಳಿಕೆಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮಾನನಷ್ಟ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಅವರ ಹೇಳಿಕೆಗಳು ಆರ್‌ಎಸ್‌ಎಸ್‌ನೊಂದಿಗೆ "ಸಂಬಂಧಿತ" ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿವೆ ಎಂದು ಸ್ಪಷ್ಟಪಡಿಸಬೇಕಾಯಿತು - ಸಂಘಟನೆಯನ್ನು ಅಲ್ಲ. ರಾಹುಲ್ ಗಾಂಧಿ ಅವರ ಆರಂಭಿಕ ಧೈರ್ಯದ ಹೊರತಾಗಿಯೂ, ವಿಚಾರಣೆ ಎದುರಿಸುವಾಗ ರಾಹುಲ್ ಗಾಂಧಿಯ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು.
2016 ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು "ಖೂನ್ ಕಿ ದಲಾಲಿ" ಎಂದು ಆರೋಪಿಸಿದಾಗ ಅದೇ ಮಾದರಿ ಪುನರಾವರ್ತನೆಯಾಯಿತು. ಸೇನೆಯ ಸರ್ಜಿಕಲ್ ಸ್ಟ್ರೈಕ್‌ಗಳನ್ನು ರಾಜಕೀಯಗೊಳಿಸುವುದಕ್ಕೂ ಅವರು ಪ್ರಯತ್ನಿಸಿದ್ದರು. ರಾಹುಲ್ ಗಾಂಧಿ ಅವರು ಸೇನೆಯನ್ನು ಗುರಿಯಾಗಿಸಿಕೊಂಡು ನೀಡಿದ್ದ ಹೇಳಿಕೆಗೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಸೇನೆಯ ವಿಚಾರವನ್ನು ರಾಜಕೀಯಗೊಳಿಸಬಾರದು ಹಾಗೂ ಜನರ ಭಾವನಾತ್ಮಕ ವಿಚಾರದೊಂದಿಗೆ ಈ ರೀತಿ ಮಾಡಬಾರದು ಎಂದು ಜನಾಕ್ರೋಶ ವ್ಯಕ್ತವಾದ ಮೇಲೆ ಅವರು ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದರು.
2019ರಲ್ಲಿ ರಫೇಲ್ ಒಪ್ಪಂದ ವವಾದದ ಸಂದರ್ಭದಲ್ಲಿಯೂ ಇದೇ ರೀತಿ ಆಗಿತ್ತು. "ಚೌಕಿದಾರ್ ಚೋರ್ ಹೈ" ಎಂಬ ಘೋಷಣೆಯನ್ನು ಸುಪ್ರೀಂ ಕೋರ್ಟ್ ತೀರ್ಪಿಗೆ ಜೋಡಿಸಿದ್ದರು. ಪ್ರಧಾನಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ನ್ಯಾಯಾಲಯವು ಸತ್ಯ ಎಂದು ಹೇಳಿದೆ ಎಂಬರ್ಥದಲ್ಲಿ ಸಾರ್ವಜನಿಕರ ದಿಕ್ಕುತಪ್ಪಿಸಿದ್ದರು. ಸುಪ್ರೀಂ ಕೋರ್ಟ್‌ನಿಂದ ಕ್ರಿಮಿನಲ್ ನ್ಯಾಯಾಂಗ ನಿಂದನೆ ನೋಟಿಸ್ ಬಂದ ನಂತರ ಅವರು ಬೇಷರತ್ ಕ್ಷಮೆಯಾಚನೆ ಮಾಡಿದ್ದರು. ರಾಜಕೀಯ ಪ್ರಚಾರದ ಬಿಸಿಯಲ್ಲಿ ಈ ರೀತಿ ಹೇಳಿಕೆ ನೀಡಲಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದರು.
ಈ ರೀತಿ ವಿರೋಧ ಪಕ್ಷಗಳು ಹೇಳಿಕೆ ಕೊಡುವುದು ಗಾಂಧಿ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಮಣಿಶಂಕರ್ ಅಯ್ಯರ್, ಜೈರಾಮ್ ರಮೇಶ್, ಸಂಜಯ್ ಸಿಂಗ್ ಮತ್ತು ದಿಗ್ವಿಜಯ ಸಿಂಗ್ ಅವರಂತಹ ಕಾಂಗ್ರೆಸ್ ಹಿರಿಯ ನಾಯಕರು ಮಾನನಷ್ಟ ಅಥವಾ ಸತ್ಯವಲ್ಲದ ಹೇಳಿಕೆಗಳನ್ನು ನೀಡಿದ ನಂತರ ಕ್ಷಮೆಯಾಚನೆ ಮಾಡಿದ್ದಾರೆ.
ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯೆಂದರೆ ಮಣಿಶಂಕರ್ ಅಯ್ಯರ್ ಅವರು, 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು "ನೀಚ್ ಕಿಸಮ್ ಕಾ ಆದ್ಮಿ" (ಒಬ್ಬ ಕೀಳು ರೀತಿಯ ವ್ಯಕ್ತಿ) ಎಂದು ಕರೆದರು. ಈ ಹೇಳಿಕೆಯನ್ನು ಗಣ್ಯರು ಮತ್ತು ಜಾತಿವಾದಿ ಹೇಳಿಕೆ ಎಂದು ಭಾರೀ ಖಂಡನೆ ವ್ಯಕ್ತಪಡಿಸಲಾಯಿತು. ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸಿ ಹಾನಿ ನಿಯಂತ್ರಣಕ್ಕೆ ಮುಂದಾಯಿತು. ನಂತರ ಅವರು ಕ್ಷಮೆಯಾಚನೆ ಮಾಡಿದರು. ಅಯ್ಯರ್ ನಂತರ ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದರು. ಅಲ್ಲದೇ ಕೆಳಮಟ್ಟದ ನಡವಳಿಕೆ ಎಂದಷ್ಟೇ ಅಂತ ಹೇಳಿದ್ದರು.
ಇನ್ನು 2019ರಲ್ಲಿ ಜೈರಾಮ್ ರಮೇಶ್ ಅವರು ಯಾವುದೇ ಪರಿಶೀಲನೆ ಮಾಡದ ಮಾಧ್ಯಮ ಲೇಖನವನ್ನು ಆಧರಿಸಿ, NSA ಅಜಿತ್ ದೋವಲ್ ಅವರ ಪುತ್ರ ವಿವೇಕ್ ದೋವಲ್ ಅವರ ವಿರುದ್ಧ ಆರ್ಥಿಕ ಅಕ್ರಮದ ಆರೋಪ ಹೊರಿಸಿದ್ದರು. ಮಾನನಷ್ಟ ಮೊಕದ್ದಮೆ ಹೂಡಿದಾಗ ರಮೇಶ್ ಅಂತಿಮವಾಗಿ ಲಿಖಿತ ಕ್ಷಮೆಯಾಚಿಸಿದರು. ಅವರು ತಮ್ಮ ಹೇಳಿಕೆಯನ್ನು ಸಾರ್ವಜನಿಕವಾಗಿ ಪರಿಶೀಲಿಸುವ ಮೊದಲು ಅವುಗಳನ್ನು ಬಹಿರಂಗಪಡಿಸಲಿಲ್ಲ ಎಂದು ಒಪ್ಪಿಕೊಂಡಿದ್ದರು.
ಮತ್ತೊಂದು ಪ್ರಕರಣದಲ್ಲಿ ಸಂಜಯ್ ಸಿಂಗ್ 2017ರಲ್ಲಿ ಎಎಪಿ ನಾಯಕ ಕಪಿಲ್ ಮಿಶ್ರಾ ಅವರ ಮೇಲಿನ ದಾಳಿಯಲ್ಲಿ ಬಿಜೆಪಿ ಯುವ ಸದಸ್ಯ ಅಂಕಿತ್ ಭಾರದ್ವಾಜ್ ಅವರನ್ನು ಆರೋಪಿ ಎಂದಿದ್ದರು. ಆರೋಪವು ನಂತರ ಆಧಾರ ರಹಿತವೆಂದು ಸಾಬೀತಾಯಿತು ಮತ್ತು ಸಿಂಗ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಯಿತು.
ಹಿರಿಯ ನಾಯಕ ದಿಗ್ವಿಜಯ ಸಿಂಗ್ ಕೂಡ ಈ ತಪ್ಪು ಹೇಳಿಕೆ ನೀಡುವುದರಿಂದ ಹಿಂದೆ ಉಳಿದಿಲ್ಲ. 2023 ರಲ್ಲಿ ಅವರು ಆರ್‌ಎಸ್‌ಎಸ್ ಸಿದ್ಧಾಂತವಾದಿ ಎಂ.ಎಸ್. ಗೋಲ್ವಾಲ್ಕರ್ ಅವರ ಬಗ್ಗೆ ಮಾನನಷ್ಟ ವಿಷಯವನ್ನು ಪೋಸ್ಟ್ ಮಾಡಿದ್ದರು. ಇದು ಕಾನೂನು ಕ್ರಮಗಳಿಗೆ ಕಾರಣವಾಯಿತು. 2024 ರಲ್ಲಿ ನ್ಯಾಯಾಲಯದ ಆದೇಶವು ಲಿಖಿತ ಕ್ಷಮೆಯಾಚನೆಯನ್ನು ನೀಡುವಂತೆ ನಿರ್ದೇಶಿಸಿತು. ಈ ಎಲ್ಲಾ ವಿಚಾರಗಳನ್ನು ಗಮನಿಸಿದರೆ, ಒಂದು ವಿಷಯ ಖಚಿತವಾಗುತ್ತದೆ. ಪುರಾವೆಗಳಿಲ್ಲದೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದ್ದು, ರಾಜಕೀಯ ಲಾಭಕ್ಕಾಗಿ ನಿರೂಪಣೆಗಳನ್ನು ರೂಪಿಸಲಾಗುತ್ತಿದೆ. ಕಾನೂನು ಒತ್ತಡ ಅಥವಾ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ನಂತರವೇ ಆ ಹೇಳಿಕೆಗಳನ್ನು ಹಿಂಪಡೆಯಲಾಗುತ್ತಿದೆ.
2014ರ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿ ಅವರು, ಗಾಂಧಿಗಳು ಕ್ಷಮೆಯಾಚಿಸುವುದಿಲ್ಲ ಎಂದಿದ್ದರು. ಆ ಹೇಳಿಕೆಯನ್ನು ಜನರು ಇನ್ನೂ ಮರೆತಿಲ್ಲ. ನ್ಯಾಯಾಲಯದ ಆದೇಶ ಅಥವಾ ಹಾನಿಯನ್ನು ನಿಯಂತ್ರಿಸಲು ಕ್ಷಮೆಯಾಚನೆ ಮಾಡಲಾಗುತ್ತದೆ. ಇದಾದ ನಂತರ ಹೊಸ ವಿವಾದ, ಬಾಯ್ತಪ್ಪಿನಿಂದ ಮಾತನಾಡಿದೆ ಎಂದು ಹೇಳಲಾಗುತ್ತದೆ. ಇದು ವಾಕ್ಚಾತುರ್ಯ ಮತ್ತು ವಾಸ್ತವದ ನಡುವಿನ ವ್ಯತ್ಯಾಸ ಎನ್ನುವುದು ಸ್ಪಷ್ಟವಾಗುತ್ತದೆ.
ಸಾಕೇತ್ ಗೋಖಲೆ ಅವರ ಇತ್ತೀಚಿನ ಸಾರ್ವಜನಿಕ ಕ್ಷಮೆಯಾಚನೆಯು ಇದೇ ರೀತಿ ವಿರೋಧ ಪಕ್ಷದ ನಾಯಕರ ವರ್ತನೆಯ ಭಾಗವಾಗಿದೆ. ಪರಿಶೀಲನೆ ಮಾಡದೆ ಮಾತನಾಡುವುದು. ಸಂವೇದನೆ ಇಲ್ಲದಿರುವುದು ಹಾಗೂ ರಾಜಕೀಯ ಉದ್ದೇಶಕ್ಕಾಗಿ ಹೇಳಿಕೆ ನೀಡುವ ಸಂಸ್ಕೃತಿಯ ಭಾಗವಾಗಿದೆ. ಅಂತಿಮವಾಗಿ ಕಾನೂನು ಪರಿಶೀಲನೆಯಲ್ಲಿ ಸುಳ್ಳು ಎಂದು ಸಾಬೀತಾಗಿದೆ. ಈಗ ಎದುರಾಗಿರುವ ದೊಡ್ಡ ಪ್ರಶ್ನೆಯೆಂದರೆ: ಆಧಾರರಹಿತ ಆರೋಪಗಳು ಮತ್ತು ತಡವಾಗಿ ಕ್ಷಮೆಯಾಚಿಸುವ ಈ ಪ್ರವೃತ್ತಿಯು ಎಲ್ಲಾ ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳುವ ಮೊದಲು ಇನ್ನೆಷ್ಟು ದಿನಗಳ ಕಾಲ ಮುಂದುವರಿಯಬಹುದು ಎನ್ನುವುದಷ್ಟೇ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications