ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೋಲೋ ಮಾತ್ರೆ ಶಿಫಾರಸ್ಸು ಮಾಡಲು ವೈದ್ಯರಿಗೆ 1000 ಕೋಟಿ ಉಡುಗೊರೆ: ಸುಪ್ರೀಂಗೆ ಮಾಹಿತಿ

|
Google Oneindia Kannada News

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಔಷಧವಾಗಿ ಜನಪ್ರಿಯವಾಗಿದ್ದ ಪ್ಯಾರಾಸಿಟಮಾಲ್ ಡ್ರಗ್ 'ಡೋಲೋ' ತಯಾರಕರು ವೈದ್ಯರಿಗೆ ಉಚಿತವಾಗಿ 1,000 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ವೈದ್ಯಕೀಯ ಪ್ರತಿನಿಧಿಗಳ ಮಂಡಳಿ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಖ್, 650 ಮಿಲಿ ಗ್ರಾಂ ಶಿಫಾರಸ್ಸು ಮಾಡಲು ಡೋಲೋ ಕಂಪನಿಯು 1,000 ಕೋಟಿ ರುಪಾಯಿಗೂ ಹೆಚ್ಚು ಉಚಿತ ಕೊಡುಗೆಗಳನ್ನು ನೀಡಿದೆ. ವೈದ್ಯರು ವೀಚಾರಹೀನ ಡೋಸ್ ಸಂಯೋಜನೆಯನ್ನು ಸೂಚಿಸುತ್ತಿದ್ದಾರೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು. ಅವರು ತಮ್ಮ ಮಾಹಿತಿಯ ಮೂಲವಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (CBDT) ವರದಿಯನ್ನು ಉಲ್ಲೇಖಿಸಿದ್ದಾರೆ.

ಡೋಲೋ 650 ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿಡೋಲೋ 650 ತಯಾರಕ ಕಂಪನಿ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ

ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರನ್ನೊಳಗೊಂಡ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, "ನೀವು ಹೇಳುತ್ತಿರುವುದು ನನ್ನ ಕಿವಿಗೆ ಸಂಗೀತವಲ್ಲ. ನಾನು ಕೂಡ ಕೋವಿಡ್‌ನಿಂದ ಬಳಲುತ್ತಿದ್ದಾಗ ಇದೇ ಮಾತ್ರೆಯನ್ನು ತೆಗೆದುಕೊಂಡಿದ್ದೆ" ಎಂದು ಹೇಳಿದರು.

 ಔಷಧಿಗಳ ಬೆಲೆ ನಿಯಂತ್ರಣದ ಬಗ್ಗೆ ಕಳವಳ

ಔಷಧಿಗಳ ಬೆಲೆ ನಿಯಂತ್ರಣದ ಬಗ್ಗೆ ಕಳವಳ

ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಪಿಐಎಲ್ ಭಾರತದಲ್ಲಿ ಮಾರಾಟವಾಗುತ್ತಿರುವ ಔಷಧಿ ಸೂತ್ರೀಕರಣಗಳು ಮತ್ತು ಔಷಧಿಗಳ ಬೆಲೆಗಳ ನಿಯಂತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಎ.ಎಸ್ ಬೋಪಣ್ಣ ಅವರ ಪೀಠ, ಸಂಜಯ್ ಪಾರಿಖ್ ಅವರ ಅಹವಾಲುಗಳನ್ನು ಆಲಿಸಿದ ನಂತರ, ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿದೆ.

 ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸೂಚನೆ ಕೊಟ್ಟ ನ್ಯಾಯಾಲಯ

ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸೂಚನೆ ಕೊಟ್ಟ ನ್ಯಾಯಾಲಯ

ಪಿಐಎಲ್‌ಗೆ ಒಂದು ವಾರದೊಳಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಈಗ ಕೇಂದ್ರವನ್ನು ಕೇಳಿದೆ ಮತ್ತು 10 ದಿನಗಳ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.

ಫೆಡರೇಶನ್ ತಮ್ಮ ಔಷಧಿಗಳನ್ನು ಶಿಫಾರಸು ಮಾಡಲು ಪ್ರೋತ್ಸಾಹಕವಾಗಿ ವೈದ್ಯರಿಗೆ ಉಚಿತ ಉಡುಗೊರೆ ನೀಡುವುದಕ್ಕೆ ಔಷಧೀಯ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ನಿರ್ದೇಶನಗಳನ್ನು ಕೋರಿ ಪಿಐಎಲ್‌ ಅನ್ನು ಮುಂದಿಟ್ಟಿದೆ. ಯೂನಿಫಾರ್ಮ್ ಕೋಡ್ ಆಫ್ ಫಾರ್ಮಾಸ್ಯುಟಿಕಲ್ ಮಾರ್ಕೆಟಿಂಗ್ ಪ್ರಾಕ್ಟೀಸಸ್ (ಯುಸಿಪಿಎಂಪಿ) ಗೆ ಶಾಸನಬದ್ಧ ಬೆಂಬಲವನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.

 ಮಿತಿ ಮೀರಿದ ಭ್ರಷ್ಟಾಚಾರ

ಮಿತಿ ಮೀರಿದ ಭ್ರಷ್ಟಾಚಾರ

ಪಾರಿಖ್ ತಮ್ಮ ವಾದಗಳಲ್ಲಿ, "ಯುಸಿಪಿಎಂಪಿಗೆ ಯಾವುದೇ ಶಾಸನಬದ್ಧ ಆಧಾರದ ಅನುಪಸ್ಥಿತಿಯಲ್ಲಿ ಅಂತಹ ಅಭ್ಯಾಸಗಳನ್ನು ನಿಷೇಧಿಸುವ ಯಾವುದೇ ಕಾನೂನು ಅಥವಾ ನಿಯಂತ್ರಣ ಮಾಡಲು ಅವಕಾಶವಿಲ್ಲ," ಎಂದು ಹೇಳಿದ್ದಾರೆ.

"ಭ್ರಷ್ಟಾಚಾರದ ವಿರುದ್ಧದ ಯುಎನ್ ಕನ್ವೆನ್ಷನ್‌ಗೆ ಸಹಿ ಹಾಕಿದ್ದರೂ ಭಾರತದಲ್ಲಿ ಔಷಧೀಯ ಮಾರುಕಟ್ಟೆ ಅಭ್ಯಾಸಗಳಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

 ಉಡುಗೊರೆ ಪಡೆದು ಔಷಧ ಶಿಫಾರಸ್ಸು ಮಾಡುವ ವೈದ್ಯರು

ಉಡುಗೊರೆ ಪಡೆದು ಔಷಧ ಶಿಫಾರಸ್ಸು ಮಾಡುವ ವೈದ್ಯರು

ವಿಚಾರಣೆಯ ನಂತರ ಮಾತನಾಡಿದ ಸಂಜಯ್ ಪಾರಿಖ್, "ಫಾರ್ಮಾ ಕಂಪನಿಗಳು ನೀಡುವ ಉಡುಗೊರೆಗಳಿಗೆ ಪ್ರತಿಯಾಗಿ ವೈದ್ಯರು ಅನಗತ್ಯ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಈ ಸಮಸ್ಯೆಯನ್ನು ನಿಭಾಯಿಸಲು ಯುಸಿಪಿಎಂಪಿ ಕೋಡ್ ಅನ್ನು ರಚಿಸಲಾಗಿದೆ. ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ" ಎಂದು ಹೇಳಿದರು.

"500 ಮಿಗ್ರಾಂ ಪ್ಯಾರೆಸಿಟಮಾಲ್‌ಗೆ ಔಷಧಿ ಬೆಲೆಯನ್ನು ಪ್ರಾಧಿಕಾರ ನಿರ್ಧರಿಸಿದೆ. ಆದರೆ ಅದನ್ನು 650 ಎಂಜಿಗೆ ಹೆಚ್ಚಿಸಿದಾಗ ಅದರ ಬೆಲೆಯನ್ನು ಪ್ರಾಧಿಕಾರ ನಿರ್ಧರಿಸುವ ಅಧಿಕಾರ ಹೊಂದಿಲ್ಲ. ಅದಕ್ಕಾಗಿಯೇ ಡೋಲೋ 650 ಮಾತ್ರೆಯನ್ನು ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಇದು ಉಚಿತಗಳ ಉದಾಹರಣೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಆ್ಯಂಟಿಬಯೋಟಿಕ್‌ಗಳು ಅಗತ್ಯವಿಲ್ಲದಿದ್ದರೂ ವಿಭಿನ್ನ ರೂಪಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಔಷಧ ಸೂತ್ರೀಕರಣಗಳನ್ನು ನಿಯಂತ್ರಿಸಲು ಶಾಸನಬದ್ಧ ಚೌಕಟ್ಟು ಇರಬೇಕು" ಎಂದು ಪಾರಿಖ್ ಹೇಳಿದರು.

English summary
A body of medical representatives told the Supreme Court That Manufacturers of the Paracetamol drug 'Dolo', which became popular as a drug during the Covid-19 pandemic, spent over Rs 1,000 crores as freebies on doctors. Supreme Court observed that it was a serious issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X