ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಗಳಿಗೆ ಕೇಂದ್ರ ಲಸಿಕೆ ನೀಡಲು ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಜೂನ್ 09; ರಾಜ್ಯಗಳಿಗೆ ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಮಾಡುವ ಹೊಸ ನೀತಿ ಜೂನ್ 21ರಿಂದ ಜಾರಿಗೆ ಬರಲಿದೆ. ಲಸಿಕೆ ಪೂರೈಕೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಮಾರ್ಗಸೂಚಿ ಪ್ರಕಾರ ಲಸಿಕೆಯನ್ನು ಪೂರೈಕೆ ಮಾಡುವಾಗ ಲಸಿಕೆ ಪೋಲು ಅಂಶವನ್ನು ಪರಿಗಣನೆ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬೆಲೆ ಪರಿಷ್ಕರಿಸಿದ ಕೇಂದ್ರ; ಯಾವ್ಯಾವ ಲಸಿಕೆಗೆ ಎಷ್ಟು ಬೆಲೆ?ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಬೆಲೆ ಪರಿಷ್ಕರಿಸಿದ ಕೇಂದ್ರ; ಯಾವ್ಯಾವ ಲಸಿಕೆಗೆ ಎಷ್ಟು ಬೆಲೆ?

ಜನಸಂಖ್ಯೆ, ಕೋವಿಡ್ ಪ್ರಮಾಣ, ಲಸಿಕೆ ಅಭಿಯಾನದ ಪ್ರಗತಿ ಹಂತಗಳನ್ನು ಪರಿಗಣಿಸಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಹಂಚಿಕೆಯಾಗಲಿದೆ. ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹೊಸ ಲಸಿಕೆ ನೀತಿ ಪ್ರಕಟಿಸಿದ್ದರು.

 ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು

ಕೇಂದ್ರ ಸರ್ಕಾರ ದೇಶದ ಲಸಿಕೆ ಉತ್ಪಾದಕರಿಂದ ಶೇ 75ರಷ್ಟು ಲಸಿಕೆಯನ್ನು ಖರೀದಿ ಮಾಡಲಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಮತ್ತು ಅದಕ್ಕೆ ದರವನ್ನು ನಿಗದಿ ಮಾಡಿದೆ.

 Fact Check: ಮೋದಿ ಹೇಳಿದಂತೆ ಭಾರತದ ಇತಿಹಾಸದಲ್ಲಿ ಲಸಿಕೆ ಕೊರತೆ ಇತ್ತೇ? Fact Check: ಮೋದಿ ಹೇಳಿದಂತೆ ಭಾರತದ ಇತಿಹಾಸದಲ್ಲಿ ಲಸಿಕೆ ಕೊರತೆ ಇತ್ತೇ?

ಲಸಿಕೆ ಪೋಲು ಸಹ ಪರಿಗಣನೆ ಆಗಲಿದೆ

ಲಸಿಕೆ ಪೋಲು ಸಹ ಪರಿಗಣನೆ ಆಗಲಿದೆ

ಲಸಿಕೆ ಪೋಲು ಪ್ರಮಾಣವೂ ಹಂಚಿಕೆಯ ಮೇಲೆ ಪ್ರಭಾವ ಬೀರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಮೇ 26ರ ಮಾಹಿತಿ ಪ್ರಕಾರ ಛತ್ತೀಸ್‌ಗಢ್ (7.47), ಜಾರ್ಖಂಡ್ (6.44), ತಮಿಳುನಾಡು (4.55) ಅತಿ ಹೆಚ್ಚು ಲಸಿಕೆ ಪೋಲು ಮಾಡಿರುವ ರಾಜ್ಯಗಳಾಗಿವೆ. ಕೆಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಲಸಿಕೆ ಪೋಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಪತ್ರವನ್ನು ಸಹ ಬರೆದಿದೆ.

ರಾಜ್ಯಗಳೇ ಬೇಡಿಕೆ ಇಟ್ಟಿದ್ದವು

ರಾಜ್ಯಗಳೇ ಬೇಡಿಕೆ ಇಟ್ಟಿದ್ದವು

ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಿ ರಾಜ್ಯಕ್ಕೆ ನೀಡಲಿ ಎಂದು ಮಹಾರಾಷ್ಟ್ರ, ಪಂಜಾಬ್, ಕೇರಳ, ಜಾರ್ಖಂಡ್, ರಾಜಸ್ಥಾನ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳು ಬೇಡಿಕೆ ಇಟ್ಟಿದ್ದವು. ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಇದನ್ನು ಘೋಷಣೆ ಮಾಡಿದ್ದರು.

ಲಸಿಕೆ ಖರೀದಿಗೆ ಬೇಡಿಕೆ ಇಟ್ಟ ಕೇಂದ್ರ

ಲಸಿಕೆ ಖರೀದಿಗೆ ಬೇಡಿಕೆ ಇಟ್ಟ ಕೇಂದ್ರ

ರಾಜ್ಯಗಳಿಗೆ ಜೂನ್ 21ರಿಂದ ಲಸಿಕೆ ಪೂರೈಕೆ ಮಾಡುವುದಾಗಿ ಹೇಳಿರುವ ಕೇಂದ್ರ ಸರ್ಕಾರ ಮಂಗಳವಾರ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಸೇರಿ ಒಟ್ಟು 44 ಕೋಟಿ ಡೋಸ್ ಲಸಿಕೆಗಾಗಿ ಬೇಡಿಕೆ ಸಲ್ಲಿಕೆ ಮಾಡಿದೆ. 25 ಕೋಟಿ ಕೋವಿಶೀಲ್ಡ್, 19 ಕೋಟಿ ಡೋಸ್ ಕೊವ್ಯಾಕ್ಸಿನ್ ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು

ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು

* ಲಸಿಕೆ ತಯಾರು ಮಾಡುವವರು ಖಾಸಗಿ ಕಂಪನಿಗಳಿಗೆ ನೇರವಾಗಿ ಲಸಿಕೆ ನೀಡಬಹುದುದ. ಆದರೆ ಒಟ್ಟು ತಯಾರಿಕೆಯಲ್ಲಿ ಶೇ 25 ದನ್ನು ಮೀರಬಾರದು.

* 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಯಾರಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ತೀರ್ಮಾನಿಸಬಹುದು.

* ಖಾಸಗಿ ಮತ್ತು ಸರ್ಕಾರಿ ಲಸಿಕಾ ಕೇಂದ್ರದಲ್ಲಿ ಸ್ಥಳದಲ್ಲಿಯೇ ವೈಯಕ್ತಿಕ ಮತ್ತು ಗುಂಪು ನೋಂದಣಿಗೆ ಅವಕಾಶವಿದೆ.

English summary
After Narendra Modi announcement of free vaccine drive ministry of health and family welfare issued guidelines for the vaccination drive set to begin from June 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X