ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ಕೋಟಿ ಬಡವರಿಗೆ ಉಚಿತರ ಪಡಿತರ ವಿತರಣೆ ಅವಧಿ ವಿಸ್ತರಣೆ

|
Google Oneindia Kannada News

ನವದೆಹಲಿ, ಆಗಸ್ಟ್‌ 22: ಭಾರತದ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ನೀಡುವುದನ್ನು ಇನ್ನೂ 3ರಿಂದ 6 ತಿಂಗಳುಗಳವರೆಗೆ ಸರ್ಕಾರ ಮುಂದುವರಿಸಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿದಿದ್ದಾರೆ.

ಹೆಚ್ಚಿನ ಹಣದುಬ್ಬರ, ಭೌಗೋಳಿಕ ಅನಿಶ್ಚಿತತೆ ಹಾಗೂ ಜಾಗತಿಕ ಪೂರೈಕೆ ಸರಪಳಿಗಳನ್ನು ಮತ್ತಷ್ಟು ಅಡ್ಡಿಯಾಗುವ ನಿಟ್ಟಿನಲ್ಲಿ ಚೀನಾದಲ್ಲಿ ಸನ್ನಿಹಿತವಾಗುತ್ತಿರುವ ಕುಸಿತದಿಂದಾಗಿ ಸೆಪ್ಟೆಂಬರ್ 30ರ ಗಡುವನ್ನು ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ತಿಂಗಳು ರೇಷನ್ ಸಿಗಲಿಲ್ವಾ, ಸರ್ಕಾರವೇ ಕಾಸು ಕೊಡುತ್ತೆ ತಗೋಳಿ!ಈ ತಿಂಗಳು ರೇಷನ್ ಸಿಗಲಿಲ್ವಾ, ಸರ್ಕಾರವೇ ಕಾಸು ಕೊಡುತ್ತೆ ತಗೋಳಿ!

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಕಠಿಣ ಲಾಕ್‌ಡೌನ್‌ನಿಂದ ಬಡವರನ್ನು ರಕ್ಷಿಸಲು ಉಚಿತ ಪಡಿತರ ವ್ಯವಸ್ಥೆಯನ್ನು ಏಪ್ರಿಲ್ 2020ರಲ್ಲಿ ಪ್ರಾರಂಭಿಸಲಾಗಿತ್ತಿ. ಮಾರ್ಚ್‌ನಲ್ಲಿ ಆರನೇ ಬಾರಿಗೆ ವಿಸ್ತರಿಸಿದ ಈ ಯೋಜನೆಯು ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ. ಸಾಂಕ್ರಾಮಿಕ ಮತ್ತು ಉಕ್ರೇನ್ ಯುದ್ಧದ ವಿನಾಶಕಾರಿ ಪರಿಣಾಮಗಳು ಇನ್ನೂ ಮುಗಿದಿಲ್ಲವಾದ್ದರಿಂದ ಬಡವರಿಗೆ ಈ ನೆರವಿನ ಯೋಜನೆಯನ್ನು ವಿಸ್ತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವಾಗಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಗಾಗಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಇದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕವನ್ನು ಮೀರಿ ಕಾರ್ಯಕ್ರಮವನ್ನು ವಿಸ್ತರಿಸಲು ಸಾಕಷ್ಟು ಆಹಾರದ ದಾಸ್ತಾನನ್ನು ಸರ್ಕಾರವು ಇತ್ತೀಚೆಗೆ ಪರಿಶೀಲಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತ್ರಿವರ್ಣ ಧ್ವಜ ಖರೀದಿಸುವಂತೆ ಒತ್ತಾಯಿಸಿದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುತ್ರಿವರ್ಣ ಧ್ವಜ ಖರೀದಿಸುವಂತೆ ಒತ್ತಾಯಿಸಿದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ತಮ್ಮ ಸಾಮಾನ್ಯ ಆಹಾರ ಧಾನ್ಯಗಳ ಕೋಟಾದ ಜೊತೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಪಡಿತರವನ್ನು ಪಡೆಯುತ್ತಾರೆ. ಇಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ದೇಶದ ಸುಮಾರು 75% ಗ್ರಾಮೀಣ ಮತ್ತು 50% ನಗರ ಜನಸಂಖ್ಯೆಗೆ ಹೆಚ್ಚು ಸಬ್ಸಿಡಿ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಜನರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದೆ. ಜೂನ್ 8 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ಜನರು ಉಪಯುಕ್ತತೆಗಳ ಬಳಕೆಯನ್ನು 75%, ಆಹಾರ ಪದಾರ್ಥಗಳ ಬಳಕೆಯನ್ನು 76% ರಷ್ಟು ಕಡಿತಗೊಳಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಹಣವನ್ನು ಸಾಲವಾಗಿ ಪಡೆಯುವ ಸಂಭವನೀಯತೆಯನ್ನು 67% ರಷ್ಟು ಕಡಿಮೆ ಮಾಡಿದೆ. ಮಾರ್ಚ್ 2020ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಉಚಿತ ಆಹಾರ, ಅಡುಗೆ ಅನಿಲ ಮತ್ತು ನಗದು ಸಬ್ಸಿಡಿಗಳನ್ನು ಒಳಗೊಂಡಿವೆ.

ಸಕ್ಷಮ ಪ್ರಾಧಿಕಾರದಿಂದ ಶೀಘ್ರದಲ್ಲೇ ತೀರ್ಮಾನ

ಸಕ್ಷಮ ಪ್ರಾಧಿಕಾರದಿಂದ ಶೀಘ್ರದಲ್ಲೇ ತೀರ್ಮಾನ

ಹಣದುಬ್ಬರ ಮತ್ತಷ್ಟು ಕಡಿಮೆಯಾಗುವವರೆಗೆ ಮತ್ತು ಆರಾಮದಾಯಕ ಮಟ್ಟಕ್ಕೆ ಮರಳುವವರೆಗೆ ಈ ಯೋಜನೆಯನ್ನು ಇನ್ನೂ ಒಂದು ಅಥವಾ ಎರಡು ತ್ರೈಮಾಸಿಕಗಳಿಗೆ ವಿಸ್ತರಿಸಬಹುದು ಎನ್ನಲಾಗಿದೆ. ಆದಾಗ್ಯೂ, ಅಂತಿಮ ನಿರ್ಧಾರವನ್ನು ಸಕ್ಷಮ ಪ್ರಾಧಿಕಾರವು ಶೀಘ್ರದಲ್ಲೇ ತೆಗೆದುಕೊಳ್ಳಲಿದೆ. ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆಯ ಬಗ್ಗೆ ನಿರ್ಧರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲ್ಲರೆ ಹಣದುಬ್ಬರ ಜುಲೈನಲ್ಲಿ 6.71% ಕ್ಕೆ ಸ್ಥಿರ

ಚಿಲ್ಲರೆ ಹಣದುಬ್ಬರ ಜುಲೈನಲ್ಲಿ 6.71% ಕ್ಕೆ ಸ್ಥಿರ

ಗ್ರಾಹಕ ಬೆಲೆ ಸೂಚ್ಯಂಕದಿಂದ (CPI) ಅಳತೆ ಪ್ರಕಾರ, ಭಾರತದ ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ 7.8% ರಷ್ಟು ಗರಿಷ್ಠ ಮಟ್ಟವನ್ನು ತಲುಪಿತ್ತು. ಇದು ಜುಲೈನಲ್ಲಿ 6.71% ಕ್ಕೆ ಸ್ಥಿರವಾಗಿದೆ. ಇಂಧನ ಆಮದುಗಳ ಮೇಲಿನ ಅತಿಯಾದ ಅವಲಂಬನೆಯು ಆರ್ಥಿಕತೆಯನ್ನು ಹಣದುಬ್ಬರಕ್ಕೆ ತಳ್ಳಲ್ಪಟ್ಟಿದೆ. ಅಲ್ಲದೆ ದೇಶದ ವಿದೇಶಿ ವಿನಿಮಯ ಮೀಸಲು ಮೇಲೆ ಬರೆ ಎಳೆದಿದೆ ಎನ್ನಲಾಗಿದೆ.

7% ಕ್ಕಿಂತ ಕಡಿಮೆ ಹಣದುಬ್ಬರ ದರ

7% ಕ್ಕಿಂತ ಕಡಿಮೆ ಹಣದುಬ್ಬರ ದರ

ಕೇಂದ್ರ ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಾಮರ್ಶೆಯು ಶುಕ್ರವಾರದಂದು ಜೂನ್‌ನಿಂದ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಕುಸಿತ, 7% ಕ್ಕಿಂತ ಕಡಿಮೆ ಹಣದುಬ್ಬರ ದರ ಮತ್ತು ತೆರಿಗೆ ಆದಾಯದಲ್ಲಿನ ದೃಢವಾದ ಬೆಳವಣಿಗೆಯು ಭಾರತಕ್ಕೆ "ಬೆಳವಣಿಗೆ ಮತ್ತು ಹಣದುಬ್ಬರದ ಮೇಲಿನ ಕಳವಳಗಳನ್ನು ಗಣನೀಯವಾಗಿ ತಗ್ಗಿಸಲು" ಕೊಡುಗೆ ನೀಡಿದೆ ಎಂದು ಹೇಳಿದೆ.

 ಜನವರಿಯಲ್ಲಿ 4.8% ಆರ್ಥಿಕ ಬೆಳವಣಿಗೆ

ಜನವರಿಯಲ್ಲಿ 4.8% ಆರ್ಥಿಕ ಬೆಳವಣಿಗೆ

ಆದರೂ ಚೀನಾದ ಆರ್ಥಿಕತೆಯಲ್ಲಿನ ಮಂದಗತಿ ಸೇರಿದಂತೆ ಜಾಗತಿಕ ಅಂಶಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. 2022 ರ ಚೀನಾದ ಬೆಳವಣಿಗೆಯ ಮುನ್ಸೂಚನೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಈ ವರ್ಷದ ಜನವರಿಯಲ್ಲಿ 4.8% ರಿಂದ ಜುಲೈ 2022ರಲ್ಲಿ 3.3% ಗೆ ಇಳಿಕೆ ಕಂಡಿದೆ. ಇದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಅಭಿವೃದ್ಧಿಯ ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುತ್ತದೆ ಹಾಗೂ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

Recommended Video

ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅನ್ನೋದು ಸರಿಯಲ್ಲ | Oneindia Kannada

English summary
Central government officials know that the government may continue to provide free rations to India's 800 million poor for another 3 to 6 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X