Free Jailer 2 Tickets: ರಜನೀಕಾತ್ ಸಿನಿಮಾಗೆ ಫ್ರೀ ಟಿಕೆಟ್: ಟಿವಿಕೆಗೆ AIADMK ನಾಯಕಿಯಿಂದ ಬಿಗ್ ಶಾಕ್!
ತಮಿಳುನಾಡಿನಲ್ಲಿ ಜೈಲರ್ 2 ಸಿನಿಮಾದ ಟಿಕೆಟ್‌ಗಳನ್ನು ಉಚಿತವಾಗಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ನಾಯಕಿಯೊಬ್ಬರು ಘೋಷಿಸಿದ್ದಾರೆ. ಇದಕ್ಕಾಗಿ ತಮಿಳುನಾಡಿನ ಎಐಎಡಿಎಂಕೆ ನಾಯಕಿ ಜನರಿಗೆ ಒಂದು ಸಣ್ಣ ಷರತ್ತನ್ನು ಸಹ ವಿಧಿಸಿದ್ದಾರೆ. ಇದು ಆಡಳಿತರೂಢ ತಮಿಳಗ ವೆಟ್ರಿ ಕಳಗಂ (TVK); ವಿಜಯ್‌ಗೆ ಭಾರೀ ಮುಜುಗರವನ್ನುಂಟು ಮಾಡಿದೆ.
ತಮಿಳುನಾಡಿನಲ್ಲಿ ಜೈಲರ್ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಟರಾದ ರಜನೀಕಾಂತ್ ಹಾಗೂ ಶಿವರಾಜ್ ಕುಮಾರ್ ಸೇರಿದಂತೆ ವಿವಿಧ ಭಾಷೆಯ ನಟ ಮತ್ತು ನಟಿಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ರೀತಿ ಇರುವಾಗಲೇ ಎಐಎಡಿಎಂಕೆ ಪಕ್ಷದ ಕೌನ್ಸಿಲರ್‌ವೊಬ್ಬರು ಜೈಲರ್ 2 ಸಿನಿಮಾದ ಫ್ರೀ ಟಿಕೆಟ್ ಕೊಡುವುದಾಗಿ ಘೋಷಿಸಿದ್ದಾರೆ. ಆದರೆ ಇದರಲ್ಲಿ ಅವರು ಟ್ವಿಸ್ಟ್‌ವೊಂದನ್ನು ಕೊಟ್ಟಿದ್ದಾರೆ.

ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿ, ತಮಿಳುನಾಡಿನಲ್ಲಿ ನಟ, ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷವು ಅಧಿಕಾರಕ್ಕೆ ಬಂದಿದೆಯಾದರೂ, ಪ್ರಸ್ತುತ ಆಡಳಿತದಲ್ಲಿ ಅಘೋಷಿತ ವಿದ್ಯುತ್ ಕಡಿತ, ಹಣದುಬ್ಬರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಂತಹ ತೀವ್ರ ಸಮಸ್ಯೆಗಳು ಮುಂದುವರೆದಿದೆ. ಇದರಿಂದ ತಮಿಳುನಾಡಿನ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಲ್ಲಿನ ವಿರೋಧ ಪಕ್ಷಗಳು ಗಂಭೀರ ಆರೋಪವನ್ನು ಮಾಡಿವೆ.
ಮುಂದುವರಿದು ತಮಿಳುನಾಡು ಹಾಗೂ ಕೇರಳಂನಲ್ಲಿ ವಿದ್ಯುತ್ ಪೂರೈಕೆಯಲ್ಲಿ ಭಾರೀ ಏರುಪೇರಾಗಿದೆ. ತಮಿಳುನಾಡಿನಲ್ಲಿ ಆಡಳಿತರೂಢ ಟಿವಿಕೆ ಪಕ್ಷಕ್ಕೆ ಹಾಗೂ ಕೇರಳಂನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿದ್ಯುತ್ ಕಡಿತ ವಿಚಾರ ಭಾರೀ ಮುಜುಗರವನ್ನು ತಂದೊಡ್ಡಿದೆ.
"ಪವರ್ ಕಟ್ ಸೆಲ್ಫಿ' ಟಾಸ್ಕ್ ಕೊಟ್ಟ ಎಐಎಡಿಎಂಕೆ ಕೌನ್ಸಿಲರ್
ಇನ್ನು ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರದ ಅಘೋಷಿತ ವಿದ್ಯುತ್ ಕಡಿತದ ವಿರುದ್ಧದ ವಿಶಿಷ್ಟ ಪ್ರತಿಭಟನೆಗೆ ಎಐಎಡಿಎಂಕೆ ಪಕ್ಷದ ಕೌನ್ಸಿಲರ್ ಮುಂದಾಗಿದ್ದಾರೆ. ತಮಿಳುನಾಡಿಮ ತಿರುಪ್ಪೂರಿನ ಎಐಎಡಿಎಂಕೆ ಮಹಿಳಾ ಕೌನ್ಸಿಲರ್‌ವೊಬ್ಬರು ಜೈಲರ್-2 ಸಿನಿಮಾಗೆ ಉಚಿತ ಟಿಕೆಟ್‌ಗಳನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ್ದಾರೆ.
ಆಗಾಗ್ಗೆ ಆಗುವ ಈ ವಿದ್ಯುತ್ ಕಡಿತವನ್ನು ಎತ್ತಿ ತೋರಿಸಲು, ತಿರುಪ್ಪೂರಿನ 9 ನೇ ವಾರ್ಡ್‌ನ ಎಐಎಡಿಎಂಕೆ ಕೌನ್ಸಿಲರ್ ದಿವ್ಯಭಾರತಿ ಬಾಲಾಜಿ ಅವರು ನವೀನ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದರು. ಸ್ಥಳೀಯ ವಾಟ್ಸಾಪ್ ಗ್ರೂಪ್‌ನ ಮೂಲಕ, ಅವರು ತಮ್ಮ ವಾರ್ಡ್‌ನ ನಿವಾಸಿಗಳಿಗೆ ಒಂದು ಟಾಸ್ಕ್ ಕೊಟ್ಟಿದ್ದಾರೆ. ವಿದ್ಯುತ್ ಕಡಿತ ಸಂಭವಿಸಿದಾಗಲೆಲ್ಲಾ, ಅವರು ಹಗಲಿನಲ್ಲಿ ತಮ್ಮ ವಿದ್ಯುತ್ ಮೀಟರ್ ಬಳಿ ಸೆಲ್ಫಿ ತೆಗೆದುಕೊಳ್ಳಬೇಕು ಅಥವಾ ರಾತ್ರಿಯಲ್ಲಿ ಬೆಳಗಿದ ಮೇಣದಬತ್ತಿಯನ್ನು ಹಿಡಿದುಕೊಂಡು ಆ ಫೋಟೋವನ್ನು ಗ್ರೂಪ್‌ನಲ್ಲಿ ಶೇರ್ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ.
ಈ ಸೆಲ್ಫಿಗಳನ್ನು ಕಳುಹಿಸಿದ ಮೊದಲ 55 ಜನರ ಕುಟುಂಬಗಳಲ್ಲಿ ಇಬ್ಬರು ಸದಸ್ಯರಿಗೆ ಜೈಲರ್-2 ಸಿನಿಮಾಗೆ ಅವಕಾಶ ನೀಡಲಾಗುವುದು ಎಂದು ಅವರು ಘೋಷಿಸಿದರು. ಎಐಎಡಿಎಂಕೆಯ 55ನೇ ಸಂಸ್ಥಾಪನಾ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 55 ಸಂಖ್ಯೆಯನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಲಾಗಿದ್ದು, ಅದೇ ಸಮಯದಲ್ಲಿ ಟಿವಿಕೆ ಆಡಳಿತದಲ್ಲಿ ತೀವ್ರ ವಿದ್ಯುತ್ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದಾರೆ.
"ಪವರ್ ಕಟ್ ಸೆಲ್ಫಿ' ಟಾಸ್ಕ್‌ಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಪವರ್ ಕಟ್ ಸಮಯದಲ್ಲಿ 340 ಜನರು ಸೆಲ್ಫಿಗಳನ್ನು ಕಳುಹಿಸಿದ್ದಾರೆ. ತಮ್ಮ ಭರವಸೆಗೆ ಬದ್ಧರಾಗಿ, ಕೌನ್ಸಿಲರ್ ದಿವ್ಯಭಾರತಿ ಮೊದಲ 55 ಜನರನ್ನ ಆಯ್ಕೆ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ 110 ನಿವಾಸಿಗಳನ್ನು (ಪ್ರತಿ ವಿಜೇತ ಕುಟುಂಬದಿಂದ ಇಬ್ಬರು) ಮತ್ತು 15 ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ಒಟ್ಟು 125 ಜನರಿಗೆ ಜೈಲರ್ 2 ಸಿನಿಮಾ ನೋಡುವುದಕ್ಕೆ ಇಲ್ಲಿನ ಆಂಗೇರಿಪಾಳ್ಯಂನ ಚಿತ್ರಮಂದಿರಲ್ಲಿ ಫ್ರೀ ಟಿಕೆಟ್ ಕೊಡಿಸಿದ್ದಾರೆ. ಈ ವಿಷಯವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications
