25,000 ರೂಪಾಯಿ ಮಹಿಳೆಯರಿಗೆ ಭರ್ಜರಿ ಆಫರ್, ವಾಹನ ಖರೀದಿ ಮಾಡಲು ಸಹಾಯ... Free Bus Travel
ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಮೂಲಕ 2000 ರೂಪಾಯಿ ಪಡೆಯುತ್ತಿದ್ದಾರೆ, ಹಾಗೇ ಉಚಿತ ಬಸ್ ಸೇವೆ ಆಗಿರುವ ಶಕ್ತಿ ಯೋಜನೆ ಮೂಲಕ ಕರ್ನಾಟಕದಲ್ಲಿ ಕೋಟ್ಯಂತರ ಮಹಿಳೆಯರಿಗೆ ಭಾರಿ ದೊಡ್ಡ ಲಾಭ ಆಗುತ್ತಿದೆ. ಸರ್ಕಾರ ಕೂಡ ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡ್ತಿದ್ದು, ಪುರುಷರಿಗೆ ಕೂಡ ಉಚಿತ ಬಸ್ ಸೇವೆ ಒದಗಿಸಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇದೆ. ಕರ್ನಾಟಕ ರಾಜ್ಯದಲ್ಲಿ ಪುರುಷರಿಗೆ ಉಚಿತ ಬಸ್ ಸೇವೆ ಆಫರ್ ಸಿಗುವ ಮೊದಲೇ, ಕರ್ನಾಟಕದ ಪಕ್ಕದ ರಾಜ್ಯ ಇದೀಗ ಪುರುಷರಿಗೆ ಉಚಿತ ಬಸ್ ಸೇವೆ ಜೊತೆಗೆ, 25,000 ರೂಪಾಯಿ ಮಹಿಳೆಯರಿಗೆ ಭರ್ಜರಿ ಆಫರ್ ಕೊಟ್ಟಿದೆ.
ಎಲೆಕ್ಷನ್... ಎಲೆಕ್ಷನ್... ಎಲೆಕ್ಷನ್... ಹೀಗೆ ವೋಟಿಂಗ್ ಸಮಯ ಬಂತು ಅಂದ್ರೆ ಸಾಕು ಆಫರ್ಸ್ ಮೇಲೆ ಆಫರ್ಸ್ ಶುರುವಾಗುತ್ತೆ. ಅದರಲ್ಲೂ ಇತ್ತೀಚೆಗೆ ಉಚಿತ ಯೋಜನೆಗಳೇ ಟ್ರೆಂಡ್ ಆಗಿದ್ದು, ಆ ಮೂಲಕ ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಮುಂದಾಗುತ್ತಾರೆ. ಇದೇ ರೀತಿ ಈಗ ಉಚಿತ ಯೋಜನೆ ಜಾರಿ ಮಾಡಿರುವ ರಾಜ್ಯಗಳು ಹತ್ತಾರು, ಕರ್ನಾಟಕ ರಾಜ್ಯವೂ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಉಚಿತ ಯೋಜನೆಗಳ ದೊಡ್ಡ ಪಟ್ಟಿ ಇದೆ. ಹೀಗಿದ್ದಾಗಲೇ ಇಲ್ಲೊಂದು ರಾಜ್ಯದಲ್ಲಿ ಪುರುಷರಿಗೆ ಉಚಿತ ಬಸ್ ಸೇವೆ ಜೊತೆಗೆ 25,000 ರೂಪಾಯಿ ಮಹಿಳೆಯರಿಗೆ ಭರ್ಜರಿ ಆಫರ್ ಎಲೆಕ್ಷನ್ ಸಮಯದಲ್ಲಿ ಕೊಡಲಾಗಿದೆ. ಹಾಗಾದರೆ ಯಾವ ರಾಜ್ಯದಲ್ಲಿ ಈ ಭರ್ಜರಿ ಉಡುಗೊರೆ ಸಿಗಲಿದೆ? ಯಾವ ಪಕ್ಷ ಇಂತಹ ಭರವಸೆ ನೀಡಿದೆ? ಮುಂದೆ ಓದಿ.

25,000 ರೂಪಾಯಿ ಮಹಿಳೆಯರಿಗೆ ಗಿಫ್ಟ್!
ತಮಿಳುನಾಡು ದೇಶದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಪೈಕಿ ಒಂದಾಗಿದೆ ಎನ್ನಬಹುದಾಗಿದೆ. ಅಲ್ಲದೆ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಭಾವಿ ರಾಜ್ಯ ಕೂಡ ತಮಿಳುನಾಡು ಎಂದು ಹೇಳಬಹುದು. ಇಂತಹ ಸಮಯದಲ್ಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಶಕ್ತಿ ಪ್ರದರ್ಶನ ಮಾಡಿರುವ ಬಿಜೆಪಿ ನಾಯಕರಿಗೆ ತಮಿಳುನಾಡು ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ತಮಿಳುನಾಡು ರಾಜ್ಯ ಗೆಲ್ಲಬೇಕು ಎಂಬುದೇ ಚುನಾವಣೆಯಲ್ಲಿ ಬಿಜೆಪಿ ನಾಯಕರ ಒನ್‌ಲೈನ್ ಅಜೆಂಡಾ ಆಗಿದ್ದು, ಎಐಎಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡು ಎಲೆಕ್ಷನ್ ಎದುರಿಸಲು ಸಜ್ಜಾಗಿದ್ದಾರೆ. ಇದೇ ವೇಳೆ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಹತ್ವದ ಘೋಷಣೆ ಹೊರಡಿಸಿದ್ದಾರೆ.












Click it and Unblock the Notifications