ಜೂಟ್' ಚಿತ್ರದ ನಾಯಕಿ ಮರಿಯಾ ಮತ್ತೆ ಬಂಧನ
ಅಹಮದಾಬಾದ್, ಅ.08: ಟಿವಿ ನಿರ್ಮಾಪಕ ನೀರಜ್ ಗ್ರೋವರ್ ಅವರ ಹತ್ಯೆಯ ಆರೋಪದ ಮೇಲೆ ಬಂಧಿತರಾಗಿ ಜೈಲುವಾಸ ಅನುಭವಿಸಿದ್ದ ಕನ್ನಡ ನಟಿ ಮೋನಿಕಾ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮೈಸೂರು ಮೂಲದ ಮಾಡೆಲ್ ಕಮ್ ನಟಿ, 'ಜೂಟ್' ಚಿತ್ರ ಖ್ಯಾತಿಯ ಮರಿಯಾ ಮೋನಿಕಾ ಸುಸೈರಾಜ್ ಅವರು ನೀರಜ್ ಕೊಲೆ ಆರೋಪದಿಂದ ಮುಕ್ತರಾಗಿದ್ದರು. ಅದರೆ, ಕೊಲೆ ಸಂಚು, ಸಾಕ್ಷಿ ನಾಶದ ಆರೋಪ ಹೊತ್ತು ಮುರ್ನಾಲ್ಕು ವರ್ಷ ಜೈಲುವಾಸ ಅನುಭವಿಸಿದ್ದರು. ಅಕೆಯ ಪ್ರಿಯಕರ ಮತ್ತು ನೌಕಾಧಿಕಾರಿ ಲೆಫ್ಟಿನೆಂಟ್ ಎಮ್ಎಲ್ ಜೇರೋಮ್ ಮ್ಯಾಥ್ಯೂ ಅವರು ಕೊಲೆ ಮಾಡಿದ ಅಪರಾಧಕ್ಕೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ವಂಚನೆ ಪ್ರಕರಣ: ಹಜ್ ಯಾತ್ರಿಕರ ಹಣ ಲಪಾಟಿಸಿದ ಆರೋಪವನ್ನ್ ಮೋನಿಕಾ ಹೊತ್ತುಕೊಂಡಿದ್ದಾರೆ. ಮೋನಿಕಾ ಅವರ ಏಜೆನ್ಸಿ ಹಜ್ ಯಾತ್ರಿಕರಿಂದ ಹಣ ಪಡೆದು ಟಿಕೆಟ್ ಬುಕ್ ಮಾಡಿಕೊಡುವ ಜವಾಬ್ದಾರಿ ಹೊತ್ತುಕೊಂಡಿತ್ತು. ಅದರೆ, ಟಿಕೆಟ್ ಬುಕ್ ಮಾಡದೆ 2.68 ಕೋಟಿ ರು ಮೊತ್ತದ ಹಣ ನುಂಗಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. [ಬೀದೀಲಿ ಹೋಗೋ 'ಮಾರಿ'ಯಾ ಬಿಗ್ ಬಾಸ್ ಮನೆ ಬೇಡ್ವಂತೆ]

ವಡೋದರಾದಲ್ಲಿ ಮೋನಿಕಾ ಅವರ ಏರ್ ಟಿಕೆಟ್ ಬುಕ್ಕಿಂಗ್ ಏಜೆನ್ಸಿ ಕಾರ್ಯನಿರ್ವಹಿಸುತ್ತಿದೆ. ಹಜ್ ಯಾತ್ರಿಕರ ಟಿಕೆಟ್ ಬುಕ್ ಮಾಡಲು ಹಣ ಪಡೆದುಕೊಂಡಿದ್ದಾರೆ. ಟಿಕೆಟ್ ಕ್ಯಾನ್ಸಲ್ ಮಾಡಿ 2.68 ಕೋಟಿ ರು ತೆಗೆದುಕೊಂಡು ಪರಾರಿಯಾಗಲು ಯತ್ನಿಸುವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಗ್ರೋವರ್ ಹತ್ಯೆ: 2008ರ ಮೇ 7ರಂದು ಜೆರೋಮ್ ಮಲಾಡ್‌ನಲ್ಲಿದ್ದ ಮರಿಯಾಳ ಮನೆಗೆ ಹೋಗಿದ್ದನು. ಅಲ್ಲಿ ಗ್ರೋವರ್ ಮತ್ತು ಆತನ ನಡುವೆ ಗಲಾಟೆ ನಡೆದು, ಗ್ರೋವರ್ ಹತ್ಯೆಯಾಗಿದ್ದ. ಬಳಿಕ ಸುಸೈರಾಜ್ ಮತ್ತು ಜೆರೋಮ್ ಇಬ್ಬರೂ ಸೇರಿಕೊಂಡು ಗ್ರೋವರ್‌ನ ಮೃತ ದೇಹವನ್ನು ಕತ್ತರಿಸಿ ಪಕ್ಕದ ಥಾಣೆಯ ಮನೋರ್ ಅರಣ್ಯದಲ್ಲಿ ಎಸೆದಿದ್ದರು.
ಅಂಗಡಿಯಿಂದ ಬ್ಯಾಗ್ ಮತ್ತು ದೊಡ್ಡ ಬಾಕನ್ನು ತರಲು ಪ್ರೇರೇಪಿಸಿದ ಜೇರೋಮ್, ನೀರಜ್ ದೇಹವನ್ನು ತುಂಡುತುಂಡು ಮಾಡಲು ಬಲವಂತ ಮಾಡಿದ ಎಂದು ಹೇಳಿಕೆ ನೀಡಿದ್ದರು.
ಜೆರೋಮ್ ಅವರ ವಿರುದ್ಧ ಐಪಿಸಿ ಕಲಂಗಳಾದ 304 (ಭಾಗ 1) (ಕೊಲೆ ನಡೆಸುವ ಉದ್ದೇಶವುಳ್ಳ ಅಪರಾಧ) ಮತ್ತು 201 (ಸಾಕ್ಷಗಳ ನಾಶ) ಅನ್ವಯ ತಪ್ಪಿತಸ್ಥನೆಂದು ಗುರುತಿಸಿ ಶಿಕ್ಷೆ ವಿಧಿಸಲಾಗಿತ್ತು. ಕನ್ನಡ ನಟಿ ಮರಿಯಾ ಸುಸೈರಾಜ್ -ನೀರಜ್ ಗ್ರೋವರ್ ಹತ್ಯಾಕಾಂಡದ ಕಥೆ ಆಧಾರಿಸಿದ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ನಾಟ್ ಎ ಲವ್ ಸ್ಟೋರಿ ಚಿತ್ರ ತೆಗೆದಿದ್ದರು.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications