ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆ, ಮೋದಿ ಸಿಇಒಗಳ ಜೊತೆ ಸಭೆ
ನವದೆಹಲಿ, ಜ. 24: ಭಾರತಕ್ಕೆ ಮೂರು ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರಿಗೆ ಭಾನುವಾರ ಚಂಡೀಗಢದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.
ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಹರ್ಯಾಣ ದ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತಾರ್, ಸಂಸದೆ ಕಿರಣ್ ಖೇರ್ ಮುಂತಾದವರು ಸ್ವಾಗತಿಸಿದರು. ನಂತರ ಅವರು ಪ್ರವಾಸೋಧ್ಯಮ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪಾಲ್ಗೊಂಡಿದ್ದರು.[ಚಿತ್ರಗಳು : ದೆಹಲಿಯಲ್ಲಿ ಫ್ರಾನ್ಸ್ ಸೈನಿಕರ ತಾಲೀಮು]
ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಆಗಮಿಸಿದ್ದಾರೆ. [ಬೆಂಗಳೂರಿನ ಫ್ರಾನ್ಸ್ ರಾಯಭಾರಿ ಕಚೇರಿಗೆ ಬೆದರಿಕೆ]
ಮೊದಲ ದಿನ ಚಂಡೀಗಢ ನಂತರ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಚಂಢೀಗಡದ ಖ್ಯಾತ ರಾಕ್ ಗಾರ್ಡನ್ ನಲ್ಲಿ ಮೋದಿ ಹಾಗೂ ಹೊಲ್ಲಾಂಡೆ ಅವರು ಸುತ್ತಾಡಿದರು.
ಸಂಪೂರ್ಣ ನಿರುಪಯೋಗಿ ತ್ಯಾಜ್ಯಗಳಿಂದ ನೆಕ್ ಚಂದ್ ಎಂಬುವವರು ಈ ಉದ್ಯಾನವನ್ನು ನಿರ್ಮಿಸಿದ್ದು ಈಗ ಸರ್ಕಾರಿ ಮ್ಯೂಸಿಯಮ್ ಮತ್ತು ಆರ್ಟ್ ಗ್ಯಾಲರಿಯಾಗಿ ಪರಿವರ್ತನೆ ಗೊಂಡಿದೆ.ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳಿರುವ ಟ್ವೀಟ್ಸ್ ಮುಂದಿದೆ ನೋಡಿ...

ಹೊಲ್ಲಾಂಡೆ ಸ್ವಾಗತಿಸಿದ ಸಂಸದೆ ಕಿರಣ್ ಖೇರ್
ರಫೆಲ್ ಜೆಟ್ ಯುದ್ಧ ವಿಮಾನ ಒಪ್ಪಂದ: ಭಾರತದೊಂದಿಗೆ ರಫೆಲ್ ಜೆಟ್ ವಿಮಾನ ಒಪ್ಪಂದ ಕಾರ್ಯ ಒಳ್ಳೆ ಹಾದಿಯಲ್ಲಿ ಸಾಗಿದೆ. ಈ ಬಗ್ಗೆ ಮಾತುಕತೆ ನಡೆಸುವುದಾಗಿ ಹೊಲ್ಲಾಂಡೆ ಹೇಳಿದ್ದಾರೆ.
ಇದಕ್ಕೂ ಮುನ್ನ ಇಂಡೋ -ಫ್ರೆಂಚ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಗಳ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಹೊಲ್ಲಾಂಡೆ ಭಾಗವಹಿಸಲಿದ್ದಾರೆ.
|
ಸಿಇಒಗಳ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಹೊಲ್ಲಾಂಡೆ
ರಕ್ಷಣಾ ಇಲಾಖೆ, ಸ್ಮಾರ್ಟ್ ಸಿಟಿ, ಮೂಲ ಸೌಕರ್ಯ, ಸಾರಿಗೆ, ಜಲ ಸಂಪನ್ಮೂಲ, ಆರ್ಥಿಕ ಉತ್ತೇಜನ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
|
ವಿಶ್ವಕ್ಕೆ ಭಾರತ ಸ್ಪೂರ್ತಿ ದಾಯಕ
ಕಳೆದ ವರ್ಷ ಪ್ರಧಾನಿ ಮೋದಿಯವರು ಫ್ರಾನ್ಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದರು. ಭಾರತೀಯ ಸೇನೆಯ ಆಧುನೀಕರಣ, ರಫೆಲ್ ಜೆಟ್ ಖರೀದಿ ಪ್ರಮುಖವಾಗಿತ್ತು.
|
ಹೊಲ್ಲಾಂಡೆಗೆ ಚಂಡೀಗಢದಲ್ಲಿ ಸಿಕ್ಕ ಸ್ವಾಗತ ಹೀಗಿತ್ತು
ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಅವರು ಭಾರತದ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಅತಿಥಿಯಾಗಿರುವುದನ್ನು ವಿರೋಧಿಸಿ ಬೆದರಿಕೆ ಪತ್ರ ಬಂದಿತ್ತು.
|
ಗಣರಾಜ್ಯೋತ್ಸವಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ
ಐಸಿಸ್ ಉಗ್ರರ ಬೆದರಿಕೆ ಪತ್ರ ಬಂದಿರುವುದರಿಂದ ದೇಶದೆಲ್ಲೆಡೆ ಉಗ್ರಗಾಮಿಗಳ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಉಭಯ ದೇಶಗಳ ನಡುವಿನ ಪುರಾತನ ಬಾಂಧವ್ಯದ ಮೆಲುಕು ಹಾಕಲಾಗುತ್ತಿದೆ.
|
ಇಂಡೋ ಫ್ರೆಂಚ್ ಬಾಂಧವ್ಯ ಬೆಸೆಯುವ ಮ್ಯೂಸಿಯಂ
ಇಂಡೋ ಫ್ರೆಂಚ್ ಬಾಂಧವ್ಯ ಬೆಸೆಯುವ ಮ್ಯೂಸಿಯಂನಲ್ಲಿ ಉಭಯ ದೇಶದ ನಾಯಕರ ಸುತ್ತಾಟ.
|
ಪ್ರಜಾಪ್ರಭುತ್ವವನ್ನು ವಿನ್ಯಾಸದ ಮೂಲಕ ಪ್ರದರ್ಶನ
ಪ್ರಜಾಪ್ರಭುತ್ವವನ್ನು ವಿನ್ಯಾಸದ ಮೂಲಕ ಪ್ರದರ್ಶನ ಮಾಡಿದ ಕಲಾವಿದರು.
|
ಚಂಡೀಗಢಕ್ಕೆ ಬಂದಿಳಿದ ಫ್ರೆಂಚ್ ಅಧ್ಯಕ್ಷರಿಗೆ ಸ್ವಾಗತ
ಚಂಡೀಗಢಕ್ಕೆ ಬಂದಿಳಿದ ಫ್ರೆಂಚ್ ಅಧ್ಯಕ್ಷರಿಗೆ ಸ್ವಾಗತ Bonjour












Click it and Unblock the Notifications