ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್
ನವದೆಹಲಿ, ಜನವರಿ 09: ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಸುದ್ದಿ ಬಂದಿದೆ. ಕೋವಿಡ್ 19 ಸಂಖ್ಯೆ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ವರ್ಚ್ಯುಯಲ್ ಕೋರ್ಟ್ ವಿಧಾನ ಬಳಸಲು ಮುಂದಾಗುವ ಹೊತ್ತಿಗೆ ನ್ಯಾಯಾಲಯಕ್ಕೆ ಕೋವಿಡ್ ಹೊಕ್ಕಿದೆ. ನಾಲ್ವರು ನ್ಯಾಯಮೂರ್ತಿಗಳಲ್ಲದೆ 150ಕ್ಕೂ ಅಧಿಕ ಕೋರ್ಟ್ ಸಿಬ್ಬಂದಿಗಳಿಗೂ ಪಾಸಿಟಿವ್ ಎಂದು ವರದಿ ಬಂದಿದೆ.
ಜನವರಿ 10ರಿಂದ ಪ್ರಕರಣಗಳ ವಿಚಾರಣೆ ವರ್ಚುವಲ್ ವಿಧಾನದ ಮೂಲಕ ನಡೆಯಲಿದ್ದು, ನ್ಯಾಯಮೂರ್ತಿಗಳು ನ್ಯಾಯಾಲಯದ ಬದಲಿಗೆ ತಮ್ಮ ಮನೆಗಳಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದ್ದಾರೆ ಎಂದು ಕೆಲ ದಿನಗಳ ಹಿಂದೆಯೆ ಸುಪ್ರೀಂ ಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಅತ್ಯಂತ ತುರ್ತು ಉಲ್ಲೇಖದ ಪ್ರಕರಣಗಳು, ಹೊಸ ಪ್ರಕರಣಗಳು, ಜಾಮೀನು ಪ್ರಕರಣಗಳು, ತಡೆಯಾಜ್ಞೆ ಪ್ರಕರಣಗಳು, ಬಂಧನದ ಪ್ರಕರಣಗಳು ಹಾಗೂ ನಿಗದಿತ ದಿನಾಂಕದ ಪ್ರಕರಣಗಳು ಜನವರಿ 10 ರಿಂದ ವಿಚಾರಣೆಗೆ ಬರಲಿವೆ.

ಕೋವಿಡ್ ಉಲ್ಬಣದಿಂದಾಗಿ ಹಲವು ಹೈಕೋರ್ಟ್‌ಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ವಿಧಾನದಲ್ಲಿ ವಿಚಾರಣೆಗೆ ಮುಂದಾಗಿವೆ. ಬಾಂಬೆ, ಉತ್ತರಾಖಂಡ, ಕಲ್ಕತ್ತಾ ಮತ್ತು ಅಲಾಹಾಬಾದ್ ಸೇರಿದಂತೆ ವಿವಿಧ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೂಡ ಕೋವಿಡ್ ದೃಢಪಟ್ಟಿದೆ.
ಕೋವಿಡ್ ಉಲ್ಬಣದಿಂದಾಗಿ ಹಲವು ಹೈಕೋರ್ಟ್‌ಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ವರ್ಚುವಲ್ ವಿಧಾನದಲ್ಲಿ ವಿಚಾರಣೆಗೆ ಮುಂದಾಗಿವೆ. ಬಾಂಬೆ, ಉತ್ತರಾಖಂಡ, ಕಲ್ಕತ್ತಾ ಮತ್ತು ಅಲಾಹಾಬಾದ್ ಸೇರಿದಂತೆ ವಿವಿಧ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೂಡ ಕೋವಿಡ್ ದೃಢಪಟ್ಟಿದೆ.
ಸಂಸತ್ ಸಿಬ್ಬಂದಿಗೂ ಕೊರೊನಾ ಸೋಂಕು
ಜನವರಿ 06 ಹಾಗೂ 7ರಂದು ಸಂಸತ್ ಸಿಬ್ಬಂದಿ ಹಾಗೂ ಸೆಕ್ಯುರಿಟಿ ಸಿಬ್ಬಂದಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿರುವ ಶಂಕೆಯಿಂದ ಪರೀಕ್ಷೆಗೆ ಒಳಪಟ್ಟಿದ್ದರು. ಇದೀಗ 400ಕ್ಕೂ ಅಧಿಕ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,59,632 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ.












Click it and Unblock the Notifications