ಆಂಧ್ರದ ಬಳಿ ಅಪಘಾತ, ಕೊಪ್ಪಳದ ನಾಲ್ವರ ದುರ್ಮರಣ

Posted By:
Subscribe to Oneindia Kannada

ಆಂಧ್ರಪ್ರದೇಶ, ಡಿಸೆಂಬರ್, 26: ಓಮಿನಿ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆ ಬಳಿ ಶನಿವಾರ ನಡೆದಿದೆ.

ಶ್ರೀನಿವಾಸ ರೆಡ್ಡಿ, ಭೀಮನ ಗೌಡ, ಭೀಮಸೇನ, ವಿಶ್ವ ಎಂಬ ನಾಲ್ವರು ಸಾವನ್ನಪ್ಪಿದ ಪ್ರಯಾಣಿಕರು. ಇವರು ಕರ್ನಾಟಕದ ಕೊಪ್ಪಳ ಮೂಲದವರು ಎಂದು ತಿಳಿದು ಬಂದಿದ್ದು, ತಮ್ಮ ಸ್ವಂತ ಊರಿಗೆ ವಾಪಾಸ್ಸಾಗುವ ವೇಳೆ ಈ ಅಪಘಾತ ಸಂಭವಿಸಿದೆ.[ಭೀಕರ ರಸ್ತೆ ಅಪಘಾತ, ನಾಲ್ವರು ಅಯ್ಯಪ್ಪ ಭಕ್ತರ ದುರ್ಮರಣ]

Andhra pradesh

ಶ್ರೀನಿವಾಸ ರೆಡ್ಡಿ, ಭೀಮನ ಗೌಡ, ಭೀಮಸೇನ, ವಿಶ್ವ ಸೇರಿದಂತೆ ಒಟ್ಟು ಏಳು ಮಂದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಓಮಿನಿ ಕಾರಿನಲ್ಲಿ ಊರಿನ ಕಡೆಗೆ ವಾಪಾಸ್ಸಾಗುತ್ತಿದ್ದರು. ಆಗ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಕ್ರಾಸ್ ಬಳಿ ಲಾರಿಯೊಂದು ಎದುರಾಗಿದೆ.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]

ಲಾರಿ ಎದುರಾದ ಪರಿಣಾಮ ಚಾಲನೆಯ ಹಿಡಿತ ಕಳೆದುಕೊಂಡ ಓಮಿನಿ ಕಾರಿನ ಚಾಲಕ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ. ಆ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಉಳಿದ ಮೂವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A four Koppala person were death in road accident when a stabbed lorry and omini car near Ananthpura district, Andrapradesh, on Saturday, December 26th.
Please Wait while comments are loading...