• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ಸಿನ ಕಾರ್ಯದರ್ಶಿ ಸ್ಥಾನದಿಂದ ಮಾಜಿ ಸಂಸದೆ ಪ್ರಿಯಾದತ್ ವಜಾ

|

ಮುಂಬೈ, ಅಕ್ಟೋಬರ್ 02: ಕಾಂಗ್ರೆಸ್ ನಾಯಕಿ, ಮಾಜಿ ಸಂಸದೆ ಪ್ರಿಯಾ ದತ್ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿ ಎಐಸಿಸಿ ಆದೇಶ ಹೊರಡಿಸಿದೆ.

ಮುಂಬೈನ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಜತೆಗಿನ ವೈಮನಸ್ಯವೇ ಪ್ರಿಯಾ ಅವರನ್ನು ಪ್ರಮುಖ ಸ್ಥಾನದಿಂದ ಕೆಳಗಿಳಿಸಲು ಕಾರಣ ಎನ್ನಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯು ಮೂಲ ಕಾಂಗ್ರೆಸ್ಸಿಗರು, ಪಕ್ಷದ ನಿಷ್ಠಾವಂತರಿಗೆ ಸರಿಯಾದ ಮನ್ನಣೆ ನೀಡುತ್ತಿಲ್ಲ ಎಂದು ಪ್ರಿಯಾ ಅವರು ದನಿಯೆತ್ತಿದ್ದರು.

ಆದರೆ, ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ, ಪಕ್ಷದ ಮುಖಂಡರ ಜೊತೆ ಯಾವುದೇ ವೈಮನಸ್ಯವಿಲ್ಲ ಎಂದಿದ್ದಾರೆ. ಎಲ್ಲಾ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ. ಈ ಕುರಿತಂತೆ ನನಗೆ ಸಿಕ್ಕಿರುವ ಪತ್ರದಿಂದ ನನಗೆ ಹಿನ್ನಡೆಯಾಗಿಲ್ಲ, ಇಷ್ಟು ವರ್ಷ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ಈಗ ಹೊಸಬರಿಗೆ ಅವಕಾಶ ಸಿಗಲಿ, ನಾನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಭಾರಿಯಾಗಿದ್ದೇನೆ. ನನಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಮಾಜಿ ಸಂಸದ, ದಿವಂಗತ ಸುನೀಲ್ ದತ್ ಅವರ ಪುತ್ರಿ, ನಟ ಸಂಜಯ್ ದತ್ ಅವರ ಸೋದರಿ ಪ್ರಿಯಾ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಶಿವ ಸೇನಾ ಯತ್ನಿಸುತ್ತಿರುವ ಸುದ್ದಿಯೂ ಇದೆ.

ಮುಂಬೈ ವಾಯುವ್ಯ ಹಾಗೂ ಕೇಂದ್ರ ಕ್ಷೇತ್ರದಿಂದ ಗೆದ್ದು ಲೋಕಸಭಾ ಸದಸ್ಯೆಯಾಗಿದ್ದ ಪ್ರಿಯಾ ಅವರು 2014ರಲ್ಲಿ ಬಿಜೆಪಿಯ ಪೂನಮ್ ಮಹಾಜನ್ ವಿರುದ್ಧ 1.86 ಲಕ್ಷ ಅಂತರದ ಮತಗಳಿಂದ ಸೋಲು ಕಂಡಿದ್ದರು.

English summary
Senior Congress leader and former Lok Sabha member Priya Dutt was on Monday relieved of her duties as secretary, All India Congress Committee (AICC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X