ಮೋದಿ ಸಂಪುಟ ಸೇರಿದ ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್

ಭಾರತ ಹಾಗೂ ಅಮೆರಿಕ ನಡುವೆ ನಾಗರಿಕ ಅಣ್ವಸ್ತ್ರ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಬ್ರಮಣ್ಯಂ ಜೈಶಂಕರ್ ಅವರಿಗೆ ಮೋದಿ ಸರ್ಕಾರ್ 2 ನಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗುವ ಅವಕಾಶ ಸಿಕ್ಕಿದೆ.

ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸಚಿವ ಸಂಪುಟದ ಇತರೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. 12ನೇಯವರಿಗೆ ಎಸ್ ಜೈಶಂಕರ್ ಅವರು ಪ್ರತಿಜ್ಞಾ ವಿಧಿಯಂತೆ ಪ್ರಮಾಣ ಮಾಡಿ ಸಚಿವರಾದರು.

ಕಳೆದ ಮಾರ್ಚ್ ತಿಂಗಳಿನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ಜೈಶಂಕರ್ ಅವರು ಭಾರತದ ಅತಿ ಹೆಚ್ಚು ಅವಧಿ ಕಾರ್ಯ ನಿರ್ವಹಿಸಿದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ.

Former Foreign Secretary S Jaishankar joins Modis Cabinet

ನಾಲ್ಕು ದಶಕಗಳ ಅನುಭವಹೊಂದಿರುವ ಜೈಶಂಕರ್ ಅವರು ಮೋದಿ ಅವರ ವಿದೇಶಾಂಗ ನೀತಿಗಳ ರೂಪುರೇಷೆ ತಿದ್ದಿದವರು. ಇಂದು ಮೋದಿ ಅವರನ್ನು ವಿಶ್ವಗುರು ಎಂಬಂತೆ ನೆರೆ ರಾಷ್ಟ್ರಗಳು ಕೊಂಡಾಡಲು ಈ ನೀತಿ ಕೂಡಾ ಕಾರಣ.

ಜನವರಿ 2015ರಲ್ಲಿ ಸುಜತಾ ಸಿಂಗ್ ಸ್ಥಾನ ಪಡೆದ ಜೈಶಂಕರ್ ಅವರು ನಿವೃತ್ತರಾಗಲು ಕೆಲವು ತಿಂಗಳುಗಳು ಮಾತ್ರ ಬಾಕಿಯಿತ್ತು. ಚೀನಾದ ರಾಯಭಾರಿಯಾಗಿದ್ದ ಲಡಾಕ್ ದೆಪ್ಸಂಗ್ ಹಾಗೂ ಡೊಕ್ಲಂನಲ್ಲಿನ ಗಡಿ ಉದ್ವಿಗ್ನತೆ, ನುಸುಳುವಿಕೆಯ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟವಾಗಿ ಮಂಡಿಸಿ, ಬೀಜಿಂಗ್ ಜೊತೆಗೆ ಸರಿಯಾಗಿ ಮಾತುಕತೆ ನಡೆಸಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ 2005ರಲ್ಲಿ ಅಮೆರಿಕದಲ್ಲಿ ಅಣ್ವಸ್ತ್ರ ಒಪ್ಪಂದ ಏರ್ಪಡಲು ಆರಂಭವಾದ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2007ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಂತಿಮ ಷರಾ ಹಾಕಿದ್ದರು.

1977ರ ಬ್ಯಾಚಿನ ಇಂಡಿಯನ್ ಫಾರಿನ್ ಸರ್ವೀಸ್ ಅಧಿಕಾರಿ ಅವರನ್ನು ರಂಜನ್ ಮಥಾಯಿ ಸ್ಥಾನಕ್ಕೆ ತರಲು ಮನಮೋಹನ್ ಸಿಂಗ್ ಬಯಸಿದ್ದರು. ಆದ್ರೆ, ಹೈಕಮಾಂಡ್ ಈ ಸಲಹೆ ಒಪ್ಪದೆ ಸುಜಾತಾ ಸಿಂಗ್ ರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿತ್ತು.

ಟೋಕಿಯೋ ಹೊರತುಪಡಿಸಿ, ಯುರೋಪಿನ ಅನೇಕ ರಾಜಧಾನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತ ಯತ್ನಿಸಿದ್ದಾಗ ರಾಜಕೀಯ ಸಲಹೆಗಾರ, ಕಾರ್ಯದರ್ಶಿಯಾಗಿದ್ದರು. 2018ರಲ್ಲಿ ನಿವೃತ್ತಿ ಬಳಿಕ ಟಾಟಾ ಸಮೂಹದ ಗ್ಲೋಬಲ್ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+