ಮಾನವ ಹಕ್ಕುಗಳ ಆಯೋಗಕ್ಕೆ 'ಕನ್ನಡಿಗ' ದತ್ತು ಅಧ್ಯಕ್ಷ

Posted By:
Subscribe to Oneindia Kannada

ನವದೆಹಲಿ, ಫೆ. 24: ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ಮೂಲದ ಕನ್ನಡಿಗ ಹಂದ್ಯಾಳ ಲಕ್ಷ್ಮೀನಾರಾಯಣಸ್ವಾಮಿ ದತ್ತು (ಎಚ್‌.ಎಲ್‌. ದತ್ತು ) ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಎಚ್.ಎಲ್ ದತ್ತು ಅವರ ಹೆಸನ್ನು ಅಂತಿಮಗೊಳಿಸಿ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅನುಮೋದನೆಗಾಗಿ ಕಳುಹಿಸಿದೆ. ಕೆ.ಜಿ. ಬಾಲಕೃಷ್ಣನ್‌ ಅವರ ನಿವೃತ್ತಿ(ಮೇ 11, 2015) ನಂತರ ಕಳೆದ ಏಳು ತಿಂಗಳಿಂದ ಎನ್‌ಎಚ್‌ಆರ್‌ಸಿ ಅಧ್ಯಕ್ಷರ ಹುದ್ದೆ ಖಾಲಿ ಇತ್ತು. ಡಿಸೆಂಬರ್ 2, 2015ರಂದು ಎಚ್ ಎಲ್ ದತ್ತು ಅವರು ನಿವೃತ್ತರಾಗಿದ್ದರು. ಸದ್ಯಕ್ಕೆ ಎನ್ ಎಚ್ ಆರ್ ಸಿ ಗೆ ಜಸ್ಟೀಸ್ ಸಿರಿಯಾಕ್ ಜೋಸೆಫ್ ಅವರು ಮಧ್ಯಂತರ ಅಧ್ಯಕ್ಷರಾಗಿದ್ದಾರೆ. [ಎಚ್ಎಲ್ ದತ್ತು ವ್ಯಕ್ತಿಚಿತ್ರ]

ಆಯ್ಕೆ ಸಮಿತಿಯಲ್ಲಿ ಯಾರಿದ್ದರು?: ಪ್ರಧಾನಿ ಜೊತೆ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಮತ್ತು ರಾಜ್ಯಸಭಾ ಉಪ ಸಭಾಪತಿ ಪಿ.ಜೆ. ಕುರಿಯನ್‌ ಸಭೆಯಲ್ಲಿ ಹಾಜರಿದ್ದರು., ಲೋಕಸಭಾ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಿದ್ದರು.

Former -CJI Justice Dattu is NHRC chairman

ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆ, 1993ರ ಅಡಿಯಂತೆ ಎನ್‌ಎಚ್‌ಆರ್‌ಸಿ ಅಧ್ಯಕ್ಷ ಮತ್ತು ಸದಸ್ಯರನ್ನು ಪ್ರಧಾನಿ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ. ಮುಂದಿನ ಐದು ವರ್ಷಗಳ ಅವಧಿಗೆ ಎನ್‌ಎಚ್‌ಆರ್‌ಸಿ ಅಧ್ಯಕ್ಷರಾಗಿ ದತ್ತು ಮುಂದುವರಿಯುತ್ತಾರೆ.[ಕನ್ನಡಿಗ ದತ್ತು ಸುಪ್ರೀಂಕೋರ್ಟ್ ನೂತನ ಸಿಜೆ]

65 ವರ್ಷದ ಎಚ್.ಎಲ್‌. ದತ್ತು ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ 2014ರ ಸೆ.28 ರಿಂದ 2015ರ ಡಿ.2ರವರೆಗೆ ಕಾರ್ಯನಿರ್ವಹಿಸಿದ್ದರು. 1975ರಲ್ಲಿ ವಕೀಲರಾಗಿ ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು. 1983ರ ನಂತರ ಮಾರಾಟ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ ಸ್ಥಾಯಿ ಸಮಿತಿಗೆ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸಿದರು.

1995ರಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ, 2007ರಲ್ಲಿ ಛತ್ತೀಸಗಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನಂತರ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. 2ಜಿ ಹಗರಣ, ಕಪ್ಪು ಹಣ ವಾಪಸ್, ಗುಜರಾತ್ ಗಲಭೆ ಮುಂತಾದ ಪ್ರಕರಣಗಳ ವಿಚಾರಣೆಗೆ ನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Chief Justice of India H L Dattu has been appointed Chairman of the National Human Rights Commission (NHRC).
Please Wait while comments are loading...