ಸನಾತನ ಧರ್ಮ ನಿರ್ಮಲನೆಗಾಗಿಯೇ ಇಂಡಿಯಾ ಒಕ್ಕೂಟ ರಚನೆ: ತಮಿಳುನಾಡು ಸಚಿವ

ಚೆನ್ನೈ, ಸೆಪ್ಟೆಂಬರ್‌ 12: ಸನಾತನ ಧರ್ಮದ ನಿರ್ಮೂಲನೆ ಮಾಡಲು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ ಎಂದು ಡಿಎಂಕೆ ಸಚಿವ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರ ಹೇಳುವ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಈಗ ಮತ್ತೊಬ್ಬ ಸಚಿವರೂ ಹೀಗೆ ಹೇಳಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.

Formation of India Union for Purification of Sanatana Dharma: Tamil Nadu Minister

ಸನಾತನ ಧರ್ಮವನ್ನು ಮಲೇರಿಯಾ, ಕೊರೋನಾ ಮತ್ತು ಡೆಂಗ್ಯೂ ಕಾಯಿಲೆಗಳಿಗೆ ಹೋಲಿಸಿ ತಮಿಳುನಾಡು ಸಿಎಂ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ವಿವಾದ ಸೃಷ್ಟಿಸಿದ್ದರು. ನಂತರ, ಎ. ರಾಜಾ ಏಡ್ಸ್‌ಗೆ ಹೋಲಿಸಿದ್ದರು. ಈಗ ಮತ್ತೊಬ್ಬ ತಮಿಳುನಾಡು ಸಚಿವ ಮಾತನಾಡಿದ್ದು, ಸನಾತನ ಧರ್ಮ ನಿಮೂರ್ಲನೆ ಮಾಡಲೆಂದೇ ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ ಎಂದಿದ್ದಾರೆ.

ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಇಂಡಿಯಾ ಮೈತ್ರಿಯಲ್ಲಿರುವ 26 ಪಕ್ಷಗಳು ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಒಂದಾಗಿವೆ. ಆದರೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಂದು ಅಂಶವನ್ನು ಒಪ್ಪುತ್ತೇವೆ. 26 ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಸಮಾನತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ರಕ್ಷಣೆ, ಲಿಂಗ ಸಮಾನತೆ ಇವೆಲ್ಲವೂ ಬೇಕು. ನೀವು ಮತ್ತು ನಾನು ಈ ಬಗ್ಗೆ ಮಾತನಾಡಬಹುದು, ಆದರೆ ನಾವು ರಾಜಕೀಯದಲ್ಲಿ ಗೆದ್ದಾಗ ಮಾತ್ರ, ನಾವು ಬದಲಾವಣೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಬಹುದು" ಎಂದು ಹೇಳಿದ್ದಾರೆ.

ಸನಾತನ ಧರ್ಮದ ವಿರುದ್ಧ ಹೋರಾಡಲು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಸೆಪ್ಟೆಂಬರ್ 2 ರಂದು ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಮಲೇರಿಯಾ, ಕೊರೋನಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+