ವಿದೇಶಿ ದೇಣಿಗೆ ಸ್ವೀಕಾರ: 1222 ಎನ್ ಜಿಒಗಳಿಗೆ ಕೇಂದ್ರದ ನೋಟಿಸ್

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 13: ಕಳೆದೊಂದು ವರ್ಷದಲ್ಲಿ ವಿದೇಶಿ ಮೂಲಗಳಿಂದ ತಮ್ಮ ಖಾತೆಗಳಿಗೆ ಹರಿದುಬಂದಿರುವ ಹಣದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ದೇಶದ ಸುಮಾರು 1222 ಸರ್ಕಾರೇತರ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಇಲಾಖೆಯು ಸೂಚನೆ ನೀಡಿದೆ.

ತಮ್ಮಲ್ಲಿನ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುವ ವಿದೇಶಿ ಮೂಲದ ಹಣದ ಬಗ್ಗೆ ದಾಖಲಾತಿಗಳನ್ನು ನೀಡಲೇಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.

Foreign funds: Govt asks 1,222 NGOs to validate bank accounts

ಅಂದಹಾಗೆ, ಕೇಂದ್ರ ಸರ್ಕಾರ ಹೀಗೆ ಚಾಟಿ ಬೀಸಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ಶ್ರೀ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್, ಇಂದೋರ್ ನ ಕ್ಯಾನ್ಸರ್ ಫೌಂಡೇಷನ್ ಚಾರಿಟಬಲ್ ಟ್ರಸ್ಟ್, ಕೊಯಮತ್ತೂರಿನ ಕ್ರಿಶ್ಚಿಯನ್ ಚಾರಿಟಬಲ್ ಟ್ರಸ್ಟ್, ಡೆಲ್ಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಸೊಸೈಟಿ, ಹಿಂದೂ ಅನಂತಾಶ್ರಮ ಹಾಗೂ ಮದನಿ ದರೂತ್ ತರ್ಬಿಯತ್ ಸಂಸ್ಥೆಗಳು ಸೇರಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As many as 1,222 NGOs across the country, including Ramakrishna Muth, have been directed by the home ministry to validate the bank accounts in which they receive a foreign contribution, failure of which will invite punitive action.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ