Union Budget 2023: ಬಜೆಟ್‌ನ ಸಂಪೂರ್ಣ, ಶೀಘ್ರ ಮಾಹಿತಿಗಾಗಿ ಡೈಲಿಹಂಟ್ ನೋಡಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನವು ಜನವರಿ 31ರಂದೇ ಆರಂಭವಾಗಲಿದ್ದು, ಪ್ರತಿ ವರ್ಷದಂತೆ ಫೆಬ್ರವರಿ 1ರಂದು 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 2.0 ನ ಈ ಆಡಳಿತಾವಧಿಯ ಕೊನೆಯ ಬಜೆಟ್ ಇದಾದ ಕಾರಣ ಸಾಮಾನ್ಯವಾಗಿ ಕುತೂಹಲ ಕೊಂಚ ಅಧಿಕವೇ ಇದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮುಂದಿನ ಕೇಂದ್ರ ಸರ್ಕಾರದ ಯಾವುದು ಎಂಬುವುದು ಜನರ ಮತದಾನದಿಂದ ನಿರ್ಧಾರವಾಗಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಈ ಬಜೆಟ್ ಅತೀ ಮುಖ್ಯವಾಗಿದೆ.
Budget 2023 Date and Time: ಕೇಂದ್ರ ಬಜೆಟ್ ಸಮಯ, ದಿನಾಂಕ, ಇಲ್ಲಿದೆ ವಿವರ
2023ರ ಬಜೆಟ್ ಕೋವಿಡ್‌ನಿಂದ ಹೊರಬಂದು ಭಾರತದ ಆರ್ಥಿಕ ಸುಧಾರಣೆಗಾಗಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ಬಗ್ಗೆ ವಿವರಣೆ ನೀಡುವ, ಭಾರತದ ಆರ್ಥಿಕ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಚುಣಾವಣೆಗೂ ಮುನ್ನ ಬಜೆಟ್ ಇದಾದ ಕಾರಣ ಜನರು ಅಧಿಕ ಭರವಸೆ, ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ಈ ಬಜೆಟ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು, ಅತೀ ಶೀಘ್ರವಾಗಿ ನಾವು ಎಲ್ಲಿ ಪಡೆಯಲು ಸಾಧ್ಯ ಎಂಬ ಬಗ್ಗೆ ಹಲವಾರು ಗೊಂದಲಗಳು ಇರಬಹುದು. ಅದಕ್ಕೆ ಉತ್ತರ ಡೈಲಿಹಂಟ್ ಆಗಿದೆ.

ಡೈಲಿಹಂಟ್‌ನಲ್ಲಿ ಬಜೆಟ್ 2023ರ ಮಾಹಿತಿ ನೋಡಿ
ಪ್ರತಿ ವರ್ಷವೂ ಕೂಡಾ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲಾಗುತ್ತದೆ. 2023-24ನೇ ಸಾಲಿನ ಬಜೆಟ್ ಅನ್ನು ಕೂಡಾ ಫೆಬ್ರವರಿ ಒಂದರಂದು ಮಂಡನೆ ಮಾಡಲಾಗುತ್ತದೆ. ಈ ವರ್ಷ ಬಜೆಟ್ ಸೆಷನ್ 31ರಿಂದ ಆರಂಭವಾಗಲಿದೆ. ಬಜೆಟ್ ಸೆಷನ್ ಫೆಬ್ರವರಿ 6ರವರೆಗೆ ನಡೆಯಲಿದೆ. ಆ ಬಳಿಕ ಬಜೆಟ್ ಅಧಿವೇಶನದ ಎರಡನೇ ಭಾಗ ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ನಡೆಯಲಿದೆ.
ಪ್ರತಿ ವರ್ಷವೂ ಡೈಲಿಹಂಟ್‌ನಲ್ಲಿ ಬಜೆಟ್ ಲೈವ್ ನೀಡಲಾಗುತ್ತದೆ. ಈ ವರ್ಷವೂ ಕೂಡಾ ಡೈಲಿಹಂಟ್‌ನಲ್ಲಿ ಬಜೆಟ್ ಲೈವ್ ನೀಡಲಾಗುತ್ತದೆ. ಡೈಲಿಹಂಟ್ ಬಜೆಟ್‌ನ ರಿಯಲ್ ಟೈಮ್ ಅಪ್‌ಡೇಟ್ ಅನ್ನು ನೀಡಲಿದೆ. ಸುದ್ದಿ, ಪ್ರತಿಕ್ರಿಯೆ, ವಿಮರ್ಶೆಯನ್ನು ಕೂಡಾ ಪ್ರಕಟಿಸಲಿದೆ. ಲೈವ್‌ಗಾಗಿ ಡೈಲಿಹಂಟ್ ಅನ್ನು ವೀಕ್ಷಿಸಿ.












Click it and Unblock the Notifications