ಮೊದಲ ಬಾರಿಗೆ ಕಾಶ್ಮೀರದಲ್ಲಿ ಕಾರ್ಯನಿರತವಾಗಿದೆ ಅಲ್ ಕೈದಾ

By: ವಿಕಾಸ್ ನಂಜಪ್ಪ
Subscribe to Oneindia Kannada

ಮೊದಲನೇ ಬಾರಿಗೆ ಕಾಶ್ಮೀರದಲ್ಲಿ ಅಲ್ ಕೈದಾ ಉಗ್ರ ಸಂಘಟನೆ ಕಾರ್ಯನಿರತವಾಗಿದೆ ಎಂಬುದು ಬಹಿರಂಗವಾಗಿದೆ. ಗ್ಲೋಬಲ್ ಇಸ್ಲಾಮಿಕ್ ಮೀಡಿಯಾ ಫ್ರಂಟ್ ನ ಘೋಷಣೆಯ ಪ್ರಕಾರ, ಈಚೆಗೆ ಹಿಜ್ಬುಲ್ ಮುಜಾಹಿದೀನ್ ತ್ಯಜಿಸಿರುವ ಜಾಕೀರ್ ಮುಸಾ ಈಗ ಅಲ್ ಕೈದಾ ನೇತೃತ್ವ ವಹಿಸಿದ್ದಾನೆ.

ಮಂಪರು ಪರೀಕ್ಷೆಯಲ್ಲಿ ಬಯಲಾಯ್ತು ಸಂಜೋತಾ ದುರಂತದ ರಹಸ್ಯ

ಭಾರತದ ವಿರುದ್ಧ ಆತ ಹೋರಾಟ ನಡೆಸುತ್ತಾನೆ ಎಂದಿದ್ದು, ಹೇಳಿಕೆಯು ಈ ರೀತಿ ಇದೆ. ಜಾಕೀರ್ ಮುಸಾ ಅಲ್ ಕೈದಾಗೆ ನಂಟು ಹೊಂದಿರುವ ಅನ್ಸರ್ ಘಾಜತ್-ಉಲ್-ಹಿಂದ್ ನ ನೇತೃತ್ವ ವಹಿಸಲಿದ್ದಾನೆ. ಇನ್ನೂ ಮುಂದುವರಿದು, ಜಿಹಾದ್ ಮೂಲಕ- ಅಲ್ಲಾ ದಯೆಯಿಂದ ನಮ್ಮ ಮಾತೃಭೂಮಿ ಕಾಶ್ಮೀರವನ್ನು ಒಗ್ಗೂಡಿಸುತ್ತೇವೆ ಎನ್ನಲಾಗಿದೆ.

For first time al-Qaeda declares it is active in Kashmir

ಈಚೆಗಷ್ಟೇ ಮುಸಾ ಕಾಶ್ಮೀರದ ಸ್ಥಳೀಯ ಉಗ್ರವಾದಿ ಗುಂಪಾದ ಹಿಜ್ಬುಲ್ ಮುಜಾಹಿದೀನ್ ನ ತ್ಯಜಿಸಿದ್ದಾನೆ. ಇನ್ನೂ ಕೆಲ ಮಂದಿ ಆತನೊಂದಿಗೆ ಸೇರಿದ್ದಾರೆ. ಭಾರತೀಯ ರಕ್ಷಣಾ ಸಂಸ್ಥೆ ಪ್ರಕಾರ, ಸದ್ಯಕ್ಕೆ ಕಾಶ್ಮೀರ ಕಣಿವೆಯಲ್ಲಿ ದೊಡ್ಡ ಮಟ್ಟದಲ್ಲಿ ಅಲ್ ಕೈದಾ ಉಗ್ರ ಸಂಘಟನೆ ವ್ಯಾಪಿಸಿಲ್ಲ.

ಹಿಜ್ಬುಲ್ ಮುಜಾಹಿದೀನ್ ನಂತರ ಅಲ್ ಕೈದಾ ಕಡೆ ವಾಲಿರುವುದಕ್ಕೆ ಮುಸಾ ಕೆಲವು ಸೂಚನೆಗಳನ್ನು ಕೊಟ್ಟಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಹಬ್ಬಿಸುವುದಕ್ಕೆ ಇದು ಪಾಕಿಸ್ತಾನದ ಮತ್ತೊಂದು ಪ್ರಯತ್ನ ಎನ್ನುತ್ತಾರೆ ಭಾರತೀಯ ಅಧಿಕಾರಿಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For the first time in Kashmir, the al-Qaeda has claimed that it is active. An announcement on the Global Islamic Media Front stated that Zakir Musa who recently quit the Hizbul Mujahideen will now head the al-Qaeda.
Please Wait while comments are loading...