ಡ್ಯಾಂಕ್ಕೆ ಬಿದ್ದ ತನ್ನ ಮೊಬೈಲ್ ಹುಡುಕಲು 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ ಅಧಿಕಾರಿ
ಛತ್ತೀಸ್‌ಗಢ, ಮೇ 27: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ಆಹಾರ ನಿರೀಕ್ಷಕ ಅಧಿಕಾರಿಯೊಬ್ಬ ಪರಕೋಟ್ ಜಲಾಶಯಕ್ಕೆ ತನ್ನ ಮೊಬೈಲ್ ಫೋನ್ ಬಿದ್ದರಿಂದ ಅದನ್ನು ಹುಡುಕಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ವ್ಯರ್ಥ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಆತನ್ನನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ಎಂದಿನಂತೆ ಆಹಾರವನ್ನು ಪರಿಶೀಲಿಸಿದ ಬಳಿಕ ರಾಜೇಶ್ ವಿಶ್ವಾಸ್ ಖೇರ್ಕಟ್ಟಾ ಜಲಾಶಯದ ಬಳಿ ವಿಹಾರಕ್ಕೆ ಹೋಗಿದ್ದರು. ಆಗ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಅವರ ಫೋನ್ ನೀರಿನಲ್ಲಿ ಬಿದ್ದಿದೆ. ಇದರಿಂದ ಆ ಮೊಬೈಲ್ ಫೋನ್ ಹುಡುಕಲು ಆತ ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಹೊರಗೆ ಚೆಲ್ಲಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಅನೂಪ್ ನಾಗ್, ಪಖಂಜೂರಿನ ಆಹಾರ ನಿರೀಕ್ಷಕ ರಾಜೇಶ್ ವಿಶ್ವಾಸ್ ಖೇರ್ಕಟ್ಟಾ ಅಣೆಕಟ್ಟಿನ ಬಳಿ ವಿಹಾರಕ್ಕೆ ಹೋಗಿದ್ದರು ಎಂದು ಮೂಲಗಳು ಮತ್ತು ಮಾಧ್ಯಮಗಳ ಮೂಲಕ ನನಗೆ ಈ ವಿಷಯದ ಬಗ್ಗೆ ಮಾಹಿತಿ ಸಿಕ್ಕಿತು. ಅವರು ತಮ್ಮ ಫೋನ್ ಕಳೆದುಕೊಂಡ ನಂತರ ನೀರನ್ನು ಖಾಲಿ ಮಾಡಿದ್ದಾರೆ. ಇಡೀ ಅಣೆಕಟ್ಟನ್ನು ನಂಬಿಕೊಂಡು ಈ ಪ್ರದೇಶವು ಬಹಳಷ್ಟು ರೈತರನ್ನು ಹೊಂದಿದೆ. ಫೋನ್ ಮತ್ತು ಅದರ ಡೇಟಾ ಮುಖ್ಯವಾಗಿದ್ದರೂ, ಸಾರ್ವಜನಿಕರ ನೀರಿನ ನಷ್ಟವನ್ನು ಉಂಟುಮಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಅದನ್ನು ಹುಡುಕಲು ಅನೇಕ ಜನರನ್ನು ನಿಯೋಜಿಸಲಾಗಿತ್ತು. ಆದರೂ ಮೊಬೈಲ್ ಫೋನ್‌ಗಾಗಿ ಹುಡುಕಾಟ ನಡೆಸಿರಬೇಕು ಆದರೆ ಅಣೆಕಟ್ಟಿನಿಂದ ಸಂಪೂರ್ಣ ನೀರನ್ನು ಹರಿಸುವುದು ಸ್ವೀಕಾರಾರ್ಹವಲ್ಲ. ಎಡಿಎಂ ಪ್ರಕಾರ ಈ ವಿಷಯದ ಬಗ್ಗೆ ತನಿಖೆ ನಡೆಯಲಿದೆ. ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಶಾಸಕ ಅನೂಪ್ ನಾಗ್ ಹೇಳಿದರು.

ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರನ್ನು ಇಂಥ ಬೇಸಿಗೆ ವೇಳೆ ಖಾಲಿ ಮಾಡಿಸಿದ್ದಕ್ಕಾಗಿ ರಾಜೇಶ್ ಅವರನ್ನು ಅಮಾನತು ಮಾಡಲಾಗಿದೆ ಜಿಲ್ಲಾಧಿಕಾರಿಯವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. ಇದಲ್ಲದೆ ಜಲಾಶಯದ ನೀರು ಖಾಲಿ ಮಾಡಲು ಮೌಖಿಕ ಒಪ್ಪಿಗೆ ನೀಡಿದ ಜಲ ಸಂಪನ್ಮೂಲ ಇಲಾಖೆಯ ಉಪವಿಭಾಗಾಧಿಕಾರಿ ಆರ್.ಸಿ. ದಿವರ್ ಅವರಿಗೂ ನೋಟಿಸ್ ನೀಡಲಾಗಿದೆ. ಅಲ್ಲದೆ ಅವರ ವಿರುದ್ಧ ಕ್ರಮಕ್ಕೆ ಪತ್ರ ಬರೆಯಲಾಗಿದೆ.
ಈಜು ಗೊತ್ತಿದ್ದ ನನ್ನ ಸ್ನೇಹಿತರು ಹಾಗೂ ಸ್ಥಳೀಯ ಜನರು ಮೊಬೈಲ್ ಹುಡುಕಲು ಹಲವು ಬಾರಿ ಪ್ರಯತ್ನ ಮಾಡಿದರು. ಆದರೂ ಫೋನ್ ದೊರಕಲಿಲ್ಲ, ನಂತರ ಜಲಾಶಯವು 10 ಅಡಿ ಇದೆ. ಒಂದು ವೇಳೆ 3ರಿಂದ 4 ಅಡಿ ನೀರು ಖಾಲಿ ಮಾಡಿಸಿದರೆ ಮೊಬೈಲ್ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಹೇಳಿದರು. ಆದ್ದರಿಂದ ನಾನು ದಿವಾರ್ ಅವರ ಬಳಿ ಮಾತನಾಡಿ ಮೌಖಿಕ ಆದೇಶ ಪಡೆದೆ ಎಂದು ರಾಜೇಶ್ ಹೇಳಿದ್ದಾರೆ.












Click it and Unblock the Notifications