Get Updates
Get notified of breaking news, exclusive insights, and must-see stories!

ಭಾರತದ 2 ಸಾವಿರ ರು. ನೋಟು ಪಾಕಿಸ್ತಾನದಿಂದ 30 ರುಪಾಯಿಗೆ ಮಾರಾಟ

ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ ಐ ಭಾರತದ ನೋಟುಗಳನ್ನು ನಕಲು ಮಾಡುವುದಕ್ಕೆ ಅಂತಲೇ ಎರಡು ಕಾರ್ಖಾನೆ ಆರಂಭಿಸಿದ ಸುದ್ದಿ ಹೊರಬಂದ ಬೆನ್ನಲ್ಲೇ ದೆಹಲಿ ಪೊಲೀಸರು ಅಂತರರಾಷ್ಟ್ರೀಯ ಮಟ್ಟದ ನಕಲಿ ನೋಟು ಜಾಲವನ್ನು ಭೇದಿಸಿದ್ದಾರೆ.

ಪಶ್ಚಿಮ ಬಂಗಾಲದ ಮಾಲ್ಡಾ ನಿವಾಸಿ ಕಶೀದ್ ಎಂಬಾತನನ್ನು ಎರಡು ಸಾವಿರ ರುಪಾಯಿ ನಕಲಿ ನೋಟುಗಳೊಂದಿಗೆ ಪೊಲೀಸರು ಬಂಧಿಸಿದ್ದು, ಹದಿನೈದು ವರ್ಷಗಳಿಂದ ಆತ ಅದೇ ದಂಧೆಯಲ್ಲಿ ತೊಡಗಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಆತನ ವಿಚಾರಣೆ ವೇಳೆಯಲ್ಲಿ ಬೆಚ್ಚಿ ಬೀಳುವಂಥ ಸಂಗತಿಗಳನ್ನು ತಿಳಿಸಿದ್ದಾನೆ.

ಆತ ಎರಡು ಸಾವಿರ ರುಪಾಯಿಯ ನಕಲಿ ನೋಟುಗಳನ್ನು ಮೂವತ್ತು ರುಪಾಯಿ ಕೊಟ್ಟು ಪಾಕಿಸ್ತಾನದಿಂದ ಖರೀದಿಸುತ್ತಿದ್ದನಂತೆ. ಗಡಿ ದಾಟಿ ಅವುಗಳು ಬರುತ್ತಿದ್ದವು ಅಂತ ಒಪ್ಪಿಕೊಂಡಿದ್ದಾನೆ. ಆ ನಕಲಿ ನೋಟುಗಳನ್ನು ಭಾರತದಲ್ಲಿ ಒಂಬೈನೂರು ರುಪಾಯಿಗೆ ಮಾರಲಾಗುತ್ತಿತ್ತು ಅಂತಲೂ ಹೇಳಿದ್ದಾನೆ.

Note

ಈ ಮಧ್ಯೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ನಕಲಿ ನೋಟು ಮುದ್ರಣದ ಮೂರು ಕಾರ್ಖಾನೆ ಮೇಲೆ ಭಾರತದ ಗುಪ್ತಚರ ಇಲಾಖೆಯು ನಿಗಾ ಇಟ್ಟಿದೆ. ಅಲ್ಲಿ ಭಾರತದ ಐನೂರು ಹಾಗೂ ಎರಡು ಸಾವಿರ ರುಪಾಯಿಗಳ ನೋಟುಗಲ ನಕಲು ತಯಾರಿಸಲಾಗುತ್ತಿದೆಯಂತೆ.

ಕನಿಷ್ಠ ಮೂರು ಕಾರ್ಖಾನೆ ಆರಂಭಿಸಲಾಗಿದೆ. ಇದಿನ್ನೂ ಆರಂಭ. ಈಗಾಗಲೇ ನೋಟಿನ ಸುರಕ್ಷತೆಯ ಎಲ್ಲ ಲಕ್ಷಣಗಳನ್ನು ನಕಲು ಮಾಡಲಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ನಕಲು ಮಾಡಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

currency note

ಈ ನಕಲು ನೋಟುಗಳನ್ನು ಭಾರತದೊಳಕ್ಕೆ ತಳ್ಳಲು ಕಾಶ್ಮೀರ ಹಾಗೂ ಬಾಂಗ್ಲಾದೇಶದ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪಿಒಕೆಯಲ್ಲಿರುವ ಕಾರ್ಖಾನೆಯಲ್ಲಿ ಉನ್ನತ ದರ್ಜೆಯ ಮಶೀನ್, ಶಾಯಿ ಹಾಗೂ ಕಾಗದಗಳನ್ನು ಬಳಸಲಾಗುತ್ತಿದೆ. ತನಿಖಾ ಸಂಸ್ಥೆಗಳಿಂದಲೂ ನಕಲಿ ನೋಟುಗಳನ್ನು ಗುರುತಿಸಲು ಕಷ್ಟವಾಗುತ್ತದೆ ಎನ್ನಲಾಗಿದೆ.

ಐನೂರು ರುಪಾಯಿ ನೋಟಿಗಿಂತಲೂ ಎರಡು ಸಾವಿರದ ನಕಲಿ ನೋಟು ಗುರುತಿಸಲು ಕಷ್ಟವಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಗುಪ್ತಚರ ಇಲಾಖೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮುದ್ರಣವಾಗುವ ಈ ನಕಲಿ ನೋಟುಗಳು ಮೊದಲಿಗೆ ಬಾಂಗ್ಲಾದೇಶಕ್ಕೆ ಬರುತ್ತವೆ. ಅಲ್ಲಿಂದ ಪಶ್ಚಿಮ ಬಂಗಾಲವನ್ನು ಪ್ರವೇಶಿಸುತ್ತವೆ. ಆ ನಂತರ ವಿವಿಧ ಜಾಲದ ಮೂಲಕ ರಸ್ತೆ ಮಾರ್ಗದಲ್ಲಿ ಕಾಶ್ಮೀರಕ್ಕೆ ಸಾಗಾಟವಾಗುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+