ಮಹಾರಾಷ್ಟ್ರದಲ್ಲಿ 5 ಮಹಿಳೆಯರು ಸೇರಿದಂತೆ 7 ನಕ್ಸಲರ ಹತ್ಯೆ
ಗಡಚಿರೊಲಿ(ಮಹಾರಾಷ್ಟ್ರ), ಡಿಸೆಂಬರ್ 7: ಮಹಾರಾಷ್ಟ್ರದ ಗಡಚಿರೊಲಿ ಎಂಬಲ್ಲಿ ನಿನ್ನೆ(ಡಿ. 6) ಬೆಳಿಗ್ಗೆ 7 ಗಂಟೆಗೆ ನಡೆದ ಎನ್ ಕೌಂಟರ್ ನಲ್ಲಿ ಐವರು ಮಹಿಳೆಯರು ಸಸೇರಿದಂತೆ ಒಟ್ಟು ಏಳು ನಕ್ಸಲರು ಮೃತರಾಗಿದ್ದಾರೆ.
ಗಡಚಿರೊಲಿಯ ಕಲ್ಲೆಡ್ ಎಂಬ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಊರಿನಲ್ಲಿ ನಕ್ಸಲರು ಅಡಿಗಿಕುಳಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಮೃತರಾದ ಏಳು ನಕ್ಸಲರಲ್ಲಿ ಆರು ನಕ್ಸಲರ ತಲೆಗೆ 2 ರಿಂದ 8 ಲಕ್ಷದವರೆಗೆ ಬಹುಮಾನ ಘೋಷಿಸಲಾಗಿತ್ತು. ಮೃತ ನಕ್ಸಲರಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications