ಐದು ದಿನದ ಕಂದಮ್ಮನಿಗೆ ಲಭಿಸಿದೆ ಪ್ಯಾನ್ ಕಾರ್ಡ್!

Posted By:
Subscribe to Oneindia Kannada

ಪಾಟ್ನಾ,ಮಾರ್ಚ್,11: ನಮಗೆ, ನಿಮಗೆ ಗೊತ್ತಿರುವ ಹಾಗೆ 18ವರ್ಷ ಮೇಲ್ಪಟ್ಟರವರು ಪ್ಯಾನ್ ಕಾರ್ಡ್ ಪಡೆಯಲು ಅರ್ಹರಾಗುತ್ತಾರೆ. ಆದರೆ ಇಲ್ಲೊಂದು 5 ದಿನದ ಮಗು ಪ್ಯಾನ್ ಕಾರ್ಡ್ ಪಡೆದು ದಾಖಲೆ ಬರೆದಿದೆ.

ಹೌದು ಬಿಹಾರದಲ್ಲಿರುವ ಆಶಿ ಎಂಬ ಐದು ದಿನದ ಮಗುವೇ ಪ್ಯಾನ್ ಕಾರ್ಡ್ ಪಡೆದ ಮಗು. ಇದರಿಂದ ಪ್ಯಾನ್ ಕಾರ್ಡ್ ಪಡೆದ ದೇಶದ ಅತ್ಯಂತ ಕಿರಿಯ ವಯಸ್ಸಿನ ಮಗು ಎಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ.[ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪ್ಯಾನ್ ಕಾರ್ಡ್]

Five day old baby youngest PAN card holder in Bihar

ಆಶಿ ಎಂಬ ಮಗು ಬಿಹಾರದಲ್ಲಿ ಫೆಬ್ರವರಿ 21ರ ಭಾನುವಾರ ಜನಿಸಿದೆ. ಈಕೆ ಜನಿಸಿ ಐದು ದಿನದ ಒಳಗೆ ಅಂದರೆ ಫೆಬ್ರವರಿ 26ಕ್ಕೆ ಪ್ಯಾನ್ ಕಾರ್ಡ್ ಪಡೆದುಕೊಂಡಿದೆ. ಈ ವಿಚಾರವನ್ನು ಆಶಿಯ ತಂದೆ ಕುಮಾರ್ ಸಜಾಲ್ ಮಾರ್ಚ್ 10ರ ಗುರುವಾರದಂದು ಮಾಧ್ಯಮದವರಿಗೆ ತಿಳಿಸಿದರು.[ಪ್ಯಾನ್ ಕಾರ್ಡ್ ಉಪಯೋಗಿಸುವವರು ಈ ನಿಯಮ ಓದಿಕೊಳ್ಳಿ]

ಆಶಿ ಯಾರ ದಾಖಲೆ ಮುರಿದಿದ್ದಾಳೆ?

ಬಿಹಾರದಲ್ಲಿ ಜನಿಸಿದ ಆಶಿಯು ರಾಜಸ್ತಾನದ ಜೈಪುರದಲ್ಲಿರುವ ಆರ್ಯನ್ ಚೌದರಿಯವವರ ದಾಖಲೆಯನ್ನು ಮುರಿದಿದ್ದಾಳೆ. ಆರ್ಯನ್ ಏಳು ದಿನಕ್ಕೆ ಪ್ಯಾನ್ ಕಾರ್ಡ್ ಪಡೆದು ಪ್ಯಾನ್ ಕಾರ್ಡ್ ಪಡೆದ ಅತ್ಯಂತ ಕಿರಿಯ ಮಗು ಎಂದೆನಿಸಿಕೊಂಡಿದ್ದನು.

ಆಶಿ ತಂದೆ ಹೇಳುವುದೇನು?

ಆಶಿ ತಂದೆಯು ಬಿಹಾರದ ಮಂಜೇರ್ ಎಂಬಲ್ಲಿ ಬಿಸಿನೇಸ್ ಮಾಡುತ್ತಿದ್ದಾರೆ. ಇವರು ಆಶಿ ಜನಿಸಿದ ಬಳಿಕ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೆ. ಐದು ದಿನದೊಳಗೆ ಆಕೆಗೆ ಪ್ಯಾನ್ ಕಾರ್ಡ್ ಬಂದಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A Five days child Ashi get PAN (Permanent Account Number) card in Bihar. She has become the youngest PAN card holder in the country. Ashi Born on February 21, Ashi was allotted the PAN card on February 26. She is break the Aryan Choudhary's record. This record was previously held by seven day old Aryan.
Please Wait while comments are loading...