ಸೊಳ್ಳೆ ನಿಯಂತ್ರಣಕ್ಕೆಂದು ತಂದಿರುವ ಮೀನೇ ಈಗ ಸಮಸ್ಯೆ : ಅಮೂಲ್ಯ ಜಲಚರಗಳನ್ನೇ ನುಂಗಿ ಹಾಕುತ್ತಿದೆ ಮಾಸ್ಕಿಟೋ ಫಿಶ್‌

ಸೊಳ್ಳೆಯಿಂದ ಅನೇಕ ರೋಗಗಳು ಹರಡುವುದು ಎಲ್ಲರಗೂ ಗೊತ್ತೇ ಇರುವ ವಿಚಾರ. ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಮುಂತಾದ ಕಾಯಿಲೆಗಳಿಗೆ ಸೊಳ್ಳೆಗಳೇ ಕಾರಣ. ಸೊಳ್ಳೆಗಳ ನಿಯಂತ್ರಣಕ್ಕೆ ನಾವು ಕಾಯಿಲ್‌, ಕ್ರೀಂ, ಸ್ಪ್ರೆ ಎಲ್ಲವನ್ನೂ ಬಳಸುತ್ತೇವೆ. ಇನ್ನು ಕೆಲವರು ಸೊಳ್ಳೆಗಳು ಮನೆಯ ಒಳಗೆ ಬಾರದಂತೆ ತಡೆಯಲು ಕೆಲವು ಗಿಡಗಳನ್ನು ಕೂಡಾ ನೆಡುತ್ತಾರೆ. ಸರ್ಕಾರ ಕೂಡಾ ಸೊಳ್ಳೆಗಳ ನಿಯಂತ್ರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಸರ್ಕಾರದ ಒಂದು ಕ್ರಮವೇ ಸಮಸ್ಯೆಯಾಗಿ ಪರಿಣಮಿಸಿದೆ.

ಸೊಳ್ಳೆ ನಿಯಂತ್ರಣಕ್ಕೆ ತಂದ ಮೀನು

ಹೌದು, ಸೊಳ್ಳೆ ನಿಯಂತ್ರಣಕ್ಕೆ ಬಳಸುವ ಮೀನಿನ ಬಗ್ಗೆ ನೀವೆಲ್ಲಾ ಕೇಳಿರಬಹುದು. ಸೊಳ್ಳೆ ನಿಯಂತ್ರಣಕ್ಕೆ ಎಂದು ನೂರು ವರ್ಷಗಳ ಹಿಂದೆಯೇ ಈ ಮೀನಿನ ಪ್ರಯೋಗವನ್ನು ಜಾರಿಗೆ ತರಲಾಗಿತ್ತು. ಈ ಮೀನು ಸೊಳ್ಳೆಗಳ ಮೊಟ್ಟೆ, ಲಾರ್ವಾಗಳನ್ನು ಕ್ಷಣ ಮಾತ್ರದಲ್ಲಿ ಗುಳುಂ ಮಾಡಿ ಬಿಡುತ್ತದೆ. ಹಾಗಾಗಿ ಸೊಳ್ಳೆಗಳ ಸಂತತಿ ವೃದ್ದಿಯಾಗದಂತೆ ತಡೆಯುತ್ತದೆ. ಆದರೆ ಈ ಮೀನು, ಈಗ ಸೊಳ್ಳೆಗಳ ಬದಲು ಜಲಚರಗಳಿಗೇ ಕಂಟಕವಾಗಿ ಪರಿಣಮಿಸಿದೆ.

fish

ಇದಾಗಿದ್ದು ಹವಾಯಿಯಲ್ಲಿ. ಅಪಾಯಕಾರಿ ಸೊಳ್ಳೆಗಳನ್ನು ಜೈವಿಕವಾಗಿ ನಿಯಂತ್ರಿಸಲು 1905ರಲ್ಲಿ ಅಮೇರಿಕದಿಂದ ಒಂದು ಜಾತಿಯ ಮೀನನ್ನು ಹವಾಯಿಗೆ ತರಿಸಲಾಗಿತ್ತು. ಆ ಮೀನಿನ ಹೆಸರು ಗಂಬೂಶಿಯ ಅಫಿನಿಸ್‌ ಅಥವಾ ಈಸ್ಟರ್ನ್‌ ಮಾಸ್ಕಿಟೋ ಫಿಶ್‌. ಈ ಮೀನುಗಳು ನೀರಿನಲ್ಲಿರುವ ಸೊಳ್ಳೆಗಳ ಮೊಟ್ಟೆ, ಮರಿಗಳನ್ನು ತಿಂದು, ಸೊಳ್ಳೆ ಸಂತತಿ ನಿರ್ಮೂಲನೆಯಲ್ಲಿ ಅತಿದೊಡ್ಡ ಪಾತ್ರ ನಿರ್ವಹಿಸುತ್ತದೆ. ಇದೇ ಕಾರಣಕ್ಕಾಗಿಯೇ ಗಂಬೂಶಿಯಾ ಮೀನನ್ನು ಅಮೇರಿಕದಿಂದ ಹವಾಯಿಗೆ ತರಿಸಲಾಗಿತ್ತು.

ಜಲಚರಗಳಿಗೆ ಕಂಟಕವಾದ ಮೀನು

ಗಂಬೂಶಿಯ ಜಾತಿಯ ಮೀನು, ಮೊದಮೊದಲು ಸೊಳ್ಳೆ ಮೊಟ್ಟೆ ಮತ್ತು ಮರಿಗಳನ್ನು ತಿಂದು ಬದುಕುತಿತ್ತು. ಆದರೆ, ಬರಬರುತ್ತಾ ಅದು ಸೊಳ್ಳೆ ಮರಿ, ಮೊಟ್ಟೆಗಳನ್ನು ತಿನ್ನುವ ಬದಲು ನೀರಿನಲ್ಲಿರುವ ಅಮೂಲ್ಯ ಜಲಚರಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲಾರಂಭಿಸಿತು. ಇದು ಎಲ್ಲಿಯವರೆಗೆ ಹೋಯಿತು ಅಂದರೆ, ಹವಾಯಿ ದ್ವೀಪದಲ್ಲಿರುವ ಅಳಿವಿನಂಚಿನ ಕೆಲವು ಅಮೂಲ್ಯ ಮೀನು, ಜಲಚರಗಳ ಸಂತತಿಯೇ ಈ ಗಂಬೂಶಿಯಾ ಮೀನಿನಿಂದಾಗಿ ಮತ್ತೆ ಅಪಾಯದ ಅಂಚಿಗೆ ಸಿಲುಕಿತ್ತು. ಅಮೂಲ್ಯ ಜಲಚರಗಳೇ ನಾಶವಾಗಿ ಹೋಗುವ ಆತಂಕ ಹವಾಯಿ ಆಡಳಿತವನ್ನು ಕಾಡುತ್ತಿದೆ.

ಪರಿಸ್ಥಿತಿಗೆ ತಕ್ಕ ಬದಲಾಗುವ ಗಂಬೂಶಿಯಾ

ಈ ಗಂಬೂಶಿಯಾ ಮೀನು ಪರಿಸ್ಥಿತಿಗೆ ತಕ್ಕ ತನ್ನ ಆಹಾರ ಪದ್ದತಿಯನ್ನು ಬದಲಾಯಿಸಿಬಿಡುತ್ತದೆ. ತಿನ್ನಲು ಸೊಳ್ಳೆ, ಅದರ ಲಾರ್ವ ಸಿಗದೇ ಹೋದರೆ, ಅದು ಸಣ್ಣ ಸಣ್ಣ ಜಲಚರಗಳನ್ನೇ ತಿಂದು ಬಿಡುತ್ತದೆ. ಹಾಗಾಗಿ, ಇದೀಗ ಸೊಳ್ಳೆ ನಿಯಂತ್ರಣ ಬದಲು ಗಂಬೂಶಿಯಾ ಮೀನಿನ ನಿಯಂತ್ರಣದ ಬಗ್ಗೆ ಹವಾಯಿ ಆಡಳಿತ ಯೋಚನೆ ಮಾಡುತ್ತಿದೆ.

ಗಂಬೂಶಿಯಾ ನಿಯಂತ್ರಣಕ್ಕೆ ಪರದಾಟ

ಹವಾಯಿಗೆ ಕಂಟಕವಾಗಿರುವ ಗಂಬೂಶಿಯಾ ಮೀನಿನ ನಿಯಂತ್ರಣಕ್ಕೆ ಹವಾಯಿ ಆಡಳಿತ ಪರದಾಡುತ್ತಿದೆ. ಯಾಕೆಂದರೆ, ಹವಾಯಿಯ ಎಲ್ಲಾ ಕೆರೆ, ಹಳ್ಳ, ತೊರೆಗಳು ಒಂದಕ್ಕೊಂದು ಸಂಪರ್ಕದಲ್ಲಿವೆ. ಹಾಗಾಗಿ, ಎಲ್ಲಾ ನದಿ, ಕೆರೆಗಳಲ್ಲೂ ಗಂಬೂಶಿಯಾ ಮೀನುಗಳಿವೆ. ಅಷ್ಟೇ ಅಲ್ಲ, ಈ ಗಂಬೂಶಿಯ ಮೀನುಗಳು ಮರಿ ಹಾಕುವ ಮೂಲಕ ಸಂತಾನಾಭಿವೃದ್ದಿ ಮಾಡಿಕೊಳ್ಳುತ್ತವೆ. ಹಾಗಾಗಿ, ಅತ್ಯಂತ ಕ್ಷಿಪ್ರಗತಿಯಲ್ಲಿ ಈ ಮೀನುಗಳ ಸಂತತಿ ವರ್ಧಿಸುತ್ತಿದೆ.

ಇದೇ ಕಾರಣಕ್ಕೆ, ಗಂಬೂಶಿಯಾ ನಿಯಂತ್ರಣ ಅಸಾಧ್ಯವೆನ್ನುವಷ್ಟು ಕಠಿಣವಾಗಿದೆ. ಇನ್ನು ರಸಾಯನಿಕಗಳನ್ನು ಸಿಂಪಡಿಸಿ, ನಿಯಂತ್ರಿಸೋಣವೆಂದರೆ, ಅದೂ ಕಷ್ಟ. ಯಾಕೆಂದರೆ, ಗಂಬೂಶಿಯಾಕ್ಕೆಂದು ಸಿಂಪಡಿಸಿದ ಕೆಮಿಕಲ್ ಹವಾಯಿಯ ಸಂಪೂರ್ಣ ಪರಿಸರವನ್ನೇ ವಿಷಯುಕ್ತಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ, ಗಂಬೂಶಿಯ ಎಂಬ ರಕ್ಕಸ ಮೀನಿನ ಸಂತತಿ ಮುಗಿಸುವುದು ಹೇಗೆ ಎಂಬ ವಿಚಾರದಲ್ಲಿ ಹವಾಯಿ ಆಡಳಿತ ತಲೆಚಚ್ಚಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+