ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023ಕ್ಕೆ ಭಾರತದಲ್ಲಿ ಬುಲೆಟ್ ಟ್ರೈನ್ ಓಡಲಿದೆ: ಸುರೇಶ್ ಪ್ರಭು

By Mahesh
|
Google Oneindia Kannada News

ನವದೆಹಲಿ, ಮೇ 27: ಮೋದಿ ಸರ್ಕಾರದ ಕನಸಿನ ಯೋಜನೆ 2023ರಲ್ಲಿ ಸಾಕಾರಗೊಳ್ಳಲಿದೆ. ಮೊಟ್ಟ ಮೊದಲ ಬುಲೆಟ್ ರೈಲಿಗೆ 2023ರಲ್ಲಿ ಹಸಿರು ನಿಶಾನೆ ಸಿಗಲಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಪಿಟಿಐಗೆ ತಿಳಿಸಿದ್ದಾರೆ.

ಮುಂಬೈ ಹಾಗೂ ಅಹಮದಾಬಾದಿನ ನಡುವಿನ 508ಕಿ.ಮೀ ದೂರವನ್ನು ಬುಲೆಟ್ ಟ್ರೈನ್ 2 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ಗರಿಷ್ಠ 350 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸಲಿದೆ.

508 ಕಿ.ಮೀ ದೂರದ ಮುಂಬೈ ಹಾಗೂ ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೆ ಜಪಾನ್ ನಿಂದ ಸಾಲ ಪಡೆಯಲಾಗಿದೆ. 97,636 ಕೋಟಿ ರು ವೆಚ್ಚದ ಈ ಯೋಜನೆಗೆ ಶೇ 81ರಷ್ಟು ಸಾಲ ಜಪಾನ್ ನಿಂದ ಬಂದಿದೆ.

'First bullet train to run in India by 2023'

ವಿಶೇಷ ವಾಹನ ಯೋಜನೆಯಡಿಯಲ್ಲಿ ಈ ಯೋಜನೆಗೆ ರೈಲ್ವೆ ಇಲಾಖೆ ಈಗಾಗಲೇ 200 ಕೋಟಿ ರು ನೀಡಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳು ಶೇ 25ರಷ್ಟು ಈಕ್ವಿಟಿ ಹಾಗೂ ಭಾರತೀಯ ರೈಲ್ವೆಸ್ ಶೇ 50ರಷ್ಟು ಪಾಲು ಹೊಂದಿದೆ.

2018ರ ಅಂತ್ಯಕ್ಕೆ ಜಪಾನೀಸ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿ (ಜಿಐಸಿಎ) ಜೊತೆ ಭಾರತೀಯ ರೈಲ್ವೆ ಒಪ್ಪಂದ ಮಾಡಿಕೊಳ್ಳಲಿದೆ. ಥಾಣೆಯ ಬಳಿ ಎಲಿಮೇಟೆಡ್ ಟ್ರ್ಯಾಕ್, ಜಲಾಂತರ್ಗತ 21 ಕಿ.ಮೀ ಗಳ ಸುರಂಗ ಮಾರ್ಗ ನಿರ್ಮಾಣ ಇದರಲ್ಲಿ ಸೇರಿದೆ. (ಪಿಟಿಐ)

English summary
Railway Minister Suresh Prabhu today said the first bullet train will run in India in 2023 heralding a new era in train operations in the subcontinent. "In 2023, the first bullet train will run in India. We have already discussed the phases of bullet train project," Prabhu told PTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X