ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳು ಮೀನುಗಾರರ ಮೇಲೆ ಗುಂಡಿನ ದಾಳಿ: ಮೋದಿಗೆ ಪತ್ರ ಬರೆದ ಸ್ಟಾಲಿನ್

|
Google Oneindia Kannada News

ಚೆನ್ನೈ, ಅಕ್ಟೋಬರ್‌ 21: ಭಾರತೀಯ ನೌಕಾಪಡೆಯು ತಮಿಳುನಾಡಿನ ಮೀನುಗಾರ ಮೇಲೆ ಗುಂಡಿನ ದಾಳಿ ಮಾಡಿದ್ದರಿಂದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಸಶಸ್ತ್ರ ಪಡೆಗಳಿಗೆ ತೀವ್ರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ತಿಳಿಸುವಂತೆ ಕೋರಿದ್ದಾರೆ.

ಪದೇ ಪದೇ ಎಚ್ಚರಿಕೆ ನೀಡಿದರೂ ಶ್ರೀಲಂಕಾದ ಭಾರತದ ಕಡಲ ಗಡಿಯ ಬಳಿ ಅನುಮಾನಾಸ್ಪವಾಗಿ ದೋಣಿ ನಿಲ್ಲಿಸದೇ ಚಲನೆ ಮಾಡಿದ ಕಾರಣ ರಬ್ಬರ್ ಬುಲೆಟ್‌ಗಳನ್ನು ಹಾರಿಸಬೇಕಾಯಿತು ಎಂದು ತನಿಖೆಗೆ ಆದೇಶಿಸಿರುವ ನೌಕಾಪಡೆ ತಿಳಿಸಿದೆ. ಮೈಲಾಡುತುರೈ ಮೂಲದ ಮೀನುಗಾರನನ್ನು ಹೆಲಿಕಾಪ್ಟರ್ ಮೂಲಕ ರಾಮನಾಥಪುರದ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Breaking; ಡಿಎಂಕೆ ಅಧ್ಯಕ್ಷರಾಗಿ ಎಂ. ಕೆ. ಸ್ಟಾಲಿನ್ ಮತ್ತೆ ಆಯ್ಕೆBreaking; ಡಿಎಂಕೆ ಅಧ್ಯಕ್ಷರಾಗಿ ಎಂ. ಕೆ. ಸ್ಟಾಲಿನ್ ಮತ್ತೆ ಆಯ್ಕೆ

ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಮನ್ನಾರ್ ಕೊಲ್ಲಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ ಗುಂಡನ್ನು ಹಾರಿಸಿದೆ ಎಂದು ಪೊಲೀಸರ ಆರಂಭಿಕ ವರದಿಗಳು ತಿಳಿಸಿವೆ. ಆದರೆ ಕೋಸ್ಟ್ ಗಾರ್ಡ್ ನಂತರ ಇದನ್ನು ನಿರಾಕರಿಸಿತು. ಈ ಪ್ರದೇಶವು ಹೆಚ್ಚಿನ ಸೂಕ್ಷತೆಯನ್ನು ಹೊಂದಿದೆ. ಏಕೆಂದರೆ ಮೀನುಗಾರರು ಹೆಚ್ಚಾಗಿ ಗಡಿಯನ್ನು ದಾಟುತ್ತಾರೆ. ಭಾಗಶಃ, ಅತಿಯಾದ ಶೋಷಣೆಯಿಂದಾಗಿ ಭಾರತೀಯ ನೀರಿನಲ್ಲಿ ಮೀನಿನ ಜನಸಂಖ್ಯೆಯು ಕಡಿಮೆಯಾಗುತ್ತಿದೆ.

Firing on Tamil Nadu fishermen: CM MK Stalin writes to Narendra Modi

ಆದರೆ ಎರಡೂ ಕಡೆಯವರು ಸಾಂಪ್ರದಾಯಿಕವಾಗಿ ಪ್ರಾದೇಶಿಕ ಜಲವನ್ನು ದಾಟುತ್ತಾರೆ ಮತ್ತು ಎರಡೂ ಸರ್ಕಾರಗಳು ಇದನ್ನು ಗೌರವಿಸಬೇಕೆಂದು ಮೀನುಗಾರರು ಹೇಳುತ್ತಾರೆ. 1970ರ ದಶಕದಲ್ಲಿ ಭಾರತವು ನೆರೆಯವರಿಗೆ ಉಡುಗೊರೆಯಾಗಿ ನೀಡಿದ್ದ ಕಚ್ಚತೀವು ದ್ವೀಪವನ್ನು ಶ್ರೀಲಂಕಾದಿಂದ ಹಿಂಪಡೆಯುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಇದು, ಕನಿಷ್ಠ ಅನುಮತಿ ಇರುವ ಮೀನುಗಾರಿಕೆ ಪ್ರದೇಶವನ್ನು ಹಿಗ್ಗಿಸುತ್ತದೆ ಎಂದು ಹಲವರು ಹೇಳುತ್ತಾರೆ.

Firing on Tamil Nadu fishermen: CM MK Stalin writes to Narendra Modi

ಜೆ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾರತ ಮತ್ತು ಶ್ರೀಲಂಕಾ ನಡುವೆ ಲಂಕಾದ ನೀರಿನಲ್ಲಿ ಮೀನುಗಾರಿಕೆ ನಡೆಸಲು ಭಾರತೀಯ ಮೀನುಗಾರರಿಗೆ ಅನುಮತಿ ನೀಡಲು ದೀರ್ಘಾವಧಿಯ ಗುತ್ತಿಗೆಯ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು.

English summary
Tamil Nadu Chief Minister MK Stalin has written to Prime Minister Narendra Modi asking the armed forces to act with extreme caution after the Indian Navy fired at a fisherman in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X