
Breaking: ಛತ್ ಪೂಜೆ ವೇಳೆ ಅಗ್ನಿ ದುರಂತ: 30ಕ್ಕೂ ಹೆಚ್ಚು ಮಂದಿಗೆ ಗಾಯ- ಹಲವರ ಸ್ಥಿತಿ ಚಿಂತಾಜನಕ
ಔರಂಗಾಬಾದ್, ಬಿಹಾರ ಅಕ್ಟೋಬರ್ 29: ಛತ್ ಪೂಜೆ ವೇಳೆ ಭೀಕರ ಅಗ್ನಿ ಅವಘಡ ಸಂಭವಿಸಿದ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರಿ ಬೆಂಕಿ ಕಾಣಿಸಿಕೊಂಡು ಶಾರ್ಟ್ ಸರ್ಕ್ಯೂಟ್ ನಿಂದ 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವಾರ ಸ್ಥಿತಿ ಚಿಂತಾಜನಕವಾಗಿದೆ. ಬೆಳಗಿನ ಜಾವ 2:30ಕ್ಕೆ ಕುಟುಂಬವೊಂದು ಛತ್ ಪೂಜೆಗೆ ಅಡುಗೆ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಬೆಂಕಿ ನಂದಿಸುವ ಪ್ರಯತ್ನದಲ್ಲಿ ಹಲವು ಪೊಲೀಸ್ ಸಿಬ್ಬಂದಿಗೂ ಸುಟ್ಟ ಗಾಯಗಳಾಗಿವೆ.
ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಹಗಂಜ್ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಮೊದಲು ಅನಿಲ್ ಗೋಸ್ವಾಮಿ ಅವರ ಕುಟುಂಬ ಸದಸ್ಯರು ಛಠ್ ಪೂಜೆಗಾಗಿ ಪ್ರಸಾದವನ್ನು ತಯಾರಿಸುತ್ತಿದ್ದಾಗ ಕೆಲವು ಗ್ಯಾಸ್ ಸಿಲಿಂಡರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದು ಅನಿಲ ಸೋರಿಕೆಯಿಂದ ಭಾರಿ ಬೆಂಕಿ ಹೊತ್ತುಕೊಂಡಿದೆ. ಅದನ್ನು ನಂದಿಸಲು ಸ್ಥಳೀಯರು ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅದು ತೀವ್ರಗೊಂಡಿತು.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಆದಾಗ್ಯೂ, ಬೆಂಕಿಯು ತೀವ್ರಗೊಂಡಿತು ಮತ್ತು ಸಿಲಿಂಡರ್‌ಗೆ ಪೊಲೀಸರು ನೀರು ಎಸೆದಾಗ 30 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಔರಂಗಾಬಾದ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹಲವರನ್ನು ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕಾರಣವನ್ನು ಇನ್ನೂ ಆಡಳಿತದಿಂದ ದೃಢೀಕರಿಸಲಾಗಿಲ್ಲ ಎಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿನಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಆದರೆ ಅನಿಲ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮನೆ ಮಾಲೀಕ ಅನಿಲ್ ಗೋಸ್ವಾಮಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೀಪಾವಳಿ ಬಳಿಕ ಉತ್ತರ ಭಾರತದ ಅದರಲ್ಲೂ ಪ್ರಮುಖವಾಗಿ ಬಿಹಾರ, ಜಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಛತ್ ಪೂಜೆಯನ್ನು ಆಚರಿಸಲಾಗುತ್ತದೆ. ನಾಲ್ಕು ದಿನಗಳ ಕಾಲ ಆಚರಿಸುವ ಈ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ. ಸೂರ್ಯನಿಗೆ ವಿಶೇಷ ಅರ್ಘ್ಯ ಅರ್ಪಿಸುವುದು ಈ ಹಬ್ಬದ ವಿಶೇಷ. ಈ ಮಹಿಳೆಯರು ಉಪವಾಸವಿದ್ದು, ಸೂರ್ಯಾಸ್ತ ಮತ್ತು ಸೂರ್ಯ ಉದಯದ ಸಮಯದಲ್ಲಿ ಆರ್ಘ್ಯ ಅರ್ಪಿಸುತ್ತಾರೆ. ಯಮುನಾ ನದಿಯಲ್ಲಿ ಮೊಣಕಾಲಿನವರೆಗೂ ನೀರಿನಲ್ಲಿ ನಿಂತು ಈ ಹಬ್ಬವಬ್ಬಯ ಆಚರಿಸುವ ಮೂಲಕ ಸೂರ್ಯನಿಗೆ ನಮಿಸುತ್ತಾರೆ.