ಕೇರಳ: ಪದ್ಮನಾಭಸ್ವಾಮಿ ದೇಗುಲದ ಬಳಿ ಬೆಂಕಿ ಅವಘಡ

ಕೇರಳದ ಪದ್ಮನಾಭಸ್ವಾಮಿ ದೇಗುಲದ ಬಳಿ ಭಾನುವಾರ ಬೆಳಗ್ಗೆ ಬೆಂಕಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ದೇಗುಲದ ಗೋದಾಮು ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಿರುವನಂತಪುರಂ, ಫೆಬ್ರವರಿ 26: ಇಲ್ಲಿನ ಪದ್ಮನಾಭಸ್ವಾಮಿ ದೇಗುಲದ ಬಳಿ ಭಾನುವಾರ ಬೆಳಗ್ಗೆ ಬೆಂಕಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ದೇಗುಲದ ಗೋದಾಮು ಸುಟ್ಟು ಭಸ್ಮವಾಗಿದ್ದು, ಇಬ್ಬರಿಗೆ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೇಗುಲದ ಉತ್ತರ ಭಾಗದ ಬಾಗಿಲಿನ ಸಮೀಪ ಇರುವ ಅಂಚೆ ಇಲಾಖೆಗೆ ಸೇರಿದ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾನುವಾರ ಬೆಳಗ್ಗೆ 3.30ರ ಸುಮಾರಿಗೆ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಅಂಚೆ ಇಲಾಖೆಗೆ ಸೇರಿದ ಹಳೆಯ ಬ್ಯಾಗ್​ ಗಳನ್ನು ಮಾತ್ರ ಕೊಠಡಿಯಲ್ಲಿ ತುಂಬಿಸಿಡಲಾಗಿತ್ತು ಎಂದು ತಿಳಿದು ಬಂದಿದೆ.

Fire near Padmanabhaswamy Temple in Kerala, godown gutted

ಘಟನಾ ಸ್ಥಳಕ್ಕೆ ಆಗಮಿಸಿದ 15 ಅಗ್ನಿ ಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಚೆ ಇಲಾಖೆ ಗೋದಾಮಿನ ಪಕ್ಕದಲ್ಲಿರುವ ಬೇರೆ ಎರಡು ಗೋದಾಮಿಗೂ ಬೆಂಕಿ ತಗುಲಿ ಹಾನಿ ಸಂಭವಿಸಿದೆ. ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ದೇಗುಲದ ಸಮೀಪದಲ್ಲಿದ್ದ ತ್ಯಾಜ್ಯಗಳಿಗೆ ಬೆಂಕಿ ತಗುಲಿ ನಂತರ ಗೋದಾಮಿಗೂ ವ್ಯಾಪಿಸಿರಬಹುದು. ದೇಗುಲದ ಆವರಣದ ಸುತ್ತಾ ಮುತ್ತಾ ಭದ್ರತೆ ಹೆಚ್ಚಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೆ ಸುರೇಂದ್ರನ್ ಹೇಳಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+