ಉತ್ತರಪ್ರದೇಶದ ಭದೋಹಿಯಲ್ಲಿ ದುರ್ಗಾಪೂಜೆ ವೇಳೆ ಅಗ್ನಿ ಅವಘಡ: 5 ಸಾವು, 64 ಮಂದಿಗೆ ಗಾಯ
ಭದೋಹಿ, ಅಕ್ಟೋಬರ್ 03: ಉತ್ತರಪ್ರದೇಶದ ಭದೋಹಿಯಲ್ಲಿ ಭಾನುವಾರ ತಡರಾತ್ರಿ ದುರ್ಗಾಪೂಜಾ ಪೆಂಡಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ 5 ಜನ ಸಾವನ್ನಪ್ಪಿದ್ದಾರೆ. ಇದೇ ವೇಳೆ 50ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ. ಸುಟ್ಟಗಾಯಕ್ಕೆ ಬಲಿಯಾದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಭದೋಹಿ ಡಿಎಂ ಗೌರಂಗ್ ರಾಠಿ ಮಾತನಾಡಿ, ದುರ್ಗಾಪೂಜೆ ಪಂಗಡದ ಬೆಂಕಿಯಲ್ಲಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಸಾವಿನ ಸಂಖ್ಯೆ ಐದಕ್ಕೆ ಏರಿದೆ ಎಂದಿದ್ದಾರೆ.
ಪಂಗಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ದುರ್ಗಾ ಪೂಜೆ ಆರತಿ ವೇಳೆ ಸುಮಾರು 150 ಮಂದಿ ಹಾಜರಿದ್ದರು. ಗಾಯಗೊಂಡ 64 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾದ ಜನರಿಗೆ 30-40% ಸುಟ್ಟಗಾಯವಾಗಿದೆ. ಘಟನೆ ವೇಳೆ ಆರತಿ ನಡೆಯುತ್ತಿದ್ದು, ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಭದೋಹಿ ಡಿಎಂ ಗೌರಂಗ್ ರಾಠಿ ಹೇಳಿದರು.
ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಔರೈ ಪ್ರದೇಶದ ನರ್ತುವಾದಲ್ಲಿ ಭಾನುವಾರ ಸಂಜೆ ದುರ್ಗಾಪೂಜಾ ಪಂಡಲ್‌ನಲ್ಲಿ ಆರತಿ ಕಾರ್ಯಕ್ರಮ ನಡೆಯುತ್ತಿತ್ತು. ಪಂಡಲ್ ನಲ್ಲಿ ಡಿಜಿಟಲ್ ಶೋ ಕೂಡ ನಡೆಯುತ್ತಿತ್ತು. ಇದೇ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ನೋಡಿ ಜನ ಭಯಭೀತರಾಗಿದ್ದರು. ಜನರು ಪ್ರಾಣ ಉಳಿಸಿಕೊಳ್ಳಲು ಚಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಜನಜಂಗುಳಿಯಿಂದಾಗಿ ಜನರು ಹೊರ ಬರುವಷ್ಟರಲ್ಲಿ ಕೆಲವರು ಬೆಂಕಿಗೆ ಆಹುತಿಯಾದರು.
UP | Around 150 people were present during #DurgaPuja aarti when a fire broke out. 52 people admitted to diff hospitals; a 10-12y/o child died. 30-40% burns on people in trauma centers, every patient stable...Prime facie, it was a short-circuit; probe on: Bhadohi DM Gaurang Rathi pic.twitter.com/9AMsMP4OCk
— ANI UP/Uttarakhand (@ANINewsUP) October 2, 2022
ಬೆಂಕಿಯ ಜ್ವಾಲೆಯು ಎಷ್ಟು ಪ್ರಬಲವಾಗಿದೆಯೆಂದರೆ ಇಡೀ ಪಂಡಲ್ ಸುಟ್ಟು ಬೂದಿಯಾಯಿತು. ಮಾಹಿತಿ ಮೇರೆಗೆ ಅಗ್ನಿಶಾಮಕ ದಳವೂ ಸ್ಥಳಕ್ಕಾಗಮಿಸಿದ್ದು, ಅಷ್ಟೊತ್ತಿಗಾಗಲೇ ಇಡೀ ಪಂಡಲ್ ಸುಟ್ಟು ಕರಕಲಾಗಿತ್ತು. ಮಾಹಿತಿ ಪಡೆದ ಡಿಎಂ-ಎಸ್ಪಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಆಗಮಿಸಿತು. ಸುಟ್ಟ ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಈ ಪೈಕಿ 33 ಮಂದಿಯನ್ನು ಬಿಎಚ್‌ಯುಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಎಂ ಗೌರಂಗ್ ರಾಠಿ ಕೂಡ ಆಗಮಸಿದರು. ಬೆಂಕಿ ಎಷ್ಟು ತೀವ್ರವಾಗಿದೆ ಎಂದರೆ ಇಡೀ ಪಂಗಡ ಸುಟ್ಟು ಭಸ್ಮವಾಗಿದ್ದು, ಅಲ್ಲಿ ಇರಿಸಲಾಗಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಭದೋಹಿ ಜಿಲ್ಲೆಯ ಔರಾಯ್‌ನಲ್ಲಿರುವ ದುರ್ಗಾ ಪಂಡಲ್‌ನಲ್ಲಿ ನಡೆದ ಬೆಂಕಿ ಅವಘಡದ ಬಗ್ಗೆ ಗಮನ ಸೆಳೆದಿದ್ದಾರೆ.












Click it and Unblock the Notifications