ಸಿಲಿಂಡರ್ ಗೋದಾಮಿಗೆ ಬೆಂಕಿ, ಮೂವರು ದುರ್ಮರಣ

Posted By:
Subscribe to Oneindia Kannada

ಕೋಲ್ಕತ್ತಾ, ಅಕ್ಟೋಬರ್ 06: ಇಲ್ಲಿನ ತಾಂಗ್ರಾ ಪ್ರದೇಶದಲ್ಲಿರುವ ಎಲ್ ಪಿಜಿ ಗೋದಾಮಿಗೆ ಗುರುವಾರ ಮಧ್ಯಾಹ್ನ ಬೆಂಕಿ ಬಿದ್ದಿದೆ. ಈ ದುರ್ಘಟನೆಯಲ್ಲಿ ಮೂವರು ಬೆಂಕಿಗೆ ಆಹುತಿಯಾಗಿದ್ದಾರೆ.

ಸದ್ಯಕ್ಕೆ ಬೆಂಕಿಯಿಂದ ಸುಟ್ಟು ಕರಕಲಾದ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮೃತರು ಗೋದಾಮಿಯ ಕಾರ್ಮಿಕರು ಎಂದು ತಿಳಿದು ಬಂದಿದೆ ಎಂದು ಅಗ್ನಿಶಾಮಕದಳ ಸಿಬ್ಬಂದಿ ಹೇಳಿದ್ದಾರೆ.

Fire Engulfs at Gas Cylinder Godown in Kolkata

ಕ್ರಿಸ್ಟೋಫರ್ ರಸ್ತೆಯಲ್ಲಿರುವ ಗೋದಾಮಿಗೆ ಬೆಂಕಿ ಬಿದ್ದಿದೆ ಎಂದು ಮಧ್ಯಾಹ್ನ 1 ಗಂಟೆಗೆ ಕರೆ ಬಂದಿತು. ಸುಮಾರು 7 ಅಗ್ನಿ ಶಾಮಕದಳ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡು ಎರಡು ಗಂಟೆಗಳ ನಂತರ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

ಗೋದಾಮಿಯಲ್ಲಿ ಎಲ್ ಪಿಜಿ ಸಿಲಿಂಡರ್ ಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೇರಿಸಲಾಗಿತ್ತು. ಇದು ಅನಧಿಕೃತ ಕಟ್ಟಡವಾಗಿದೆ.


ಸಿಲಿಂಡರ್ ಶೇಖರಣೆಗೆ ಅನುಮತಿ ಇಲ್ಲ ಎಂಬ ದೂರು ಕೇಳಿ ಬಂದಿದೆ. ಈ ಬಗ್ಗೆ ತನಿಖೆ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Three persons were charred to death as a devastating fire on Thursday gutted a gas cylinder godown in Tangra area of the metropolis. "So far three persons have been charred to death. We are yet to confirm if the casualty is more," officials at the city police control room said.
Please Wait while comments are loading...