ಮಕ್ಕಳ ಮಾರಣಹೋಮ ನಡೆದಿದ್ದ ಗೋರಖ್ ಪುರ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
ಗೋರಖ್ ಪುರ್, (ಉತ್ತರ ಪ್ರದೇಶ) ಜನವರಿ 8: ಇತ್ತೀಚೆಗೆ ಇಡೀ ದೇಶಾದ್ಯಂತ ಸುದ್ದಿ ಮಾಡಿದ್ದ ಉತ್ತರ ಪ್ರದೇಶದ ಗೋರಖ್ ಪುರ್ ದ ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜು ಮತ್ತೆ ಸುದ್ದಿಯಲ್ಲಿದೆ.
ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಅಗ್ನಿ ದುರಂತಕ್ಕೆ ಕಾರಣ ಹಾಗೂ ಘಟನೆಯಲ್ಲಿ ಸಂಭವಿಸಿದ ಹಾನಿ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

2017 ಆಗಸ್ಟ್ ನಲ್ಲಿ ಇದೇ ಬಾಬ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಆಕ್ಸಿಜನ್ ಕೊರತೆಯಿಂದ ಎನ್ಸೆಫಾಲಿಟಿಸ್ (encephalitis) ಎಂಬ ಮೆದುಳು ಸಂಬಂಧಿ ರೋಗಕ್ಕೆ ಬರೋಬ್ಬರಿ 64 ಮಕ್ಕಳು ಸಾವನ್ನಪ್ಪುವುದರೊಂದಿಗೆ ಈ ವಿಷಯ ಅಂತರಾಷ್ಟ್ರೀಯ ಸುದ್ದಿ ಕೇಂದ್ರಕ್ಕೆ ಬಂದಿತ್ತು.












Click it and Unblock the Notifications