ರ‍್ಯಾಪರ್ ಬಾದ್‌ಶಾ ವಿರುದ್ಧ ಎಫ್‌ಐಆರ್ ದಾಖಲು

ಬಾಲಿವುಡ್ ಗಾಯಕ ಮತ್ತು ರ‍್ಯಾಪರ್ ಬಾದ್‌ಶಾ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಾದ್‌ಶಾ ಕ್ರಿಶ್ಚಿಯನ್ ಧಾರ್ಮಿಕ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತವವಾಗಿ ಇತ್ತೀಚೆಗೆ ಬಾದ್‌ಶಾ ಅವರ 'ವೆಲ್ವೆಟ್ ಫ್ಲೋ' ಹೆಸರಿನ ಹಾಡೊಂದು ಬಿಡುಗಡೆಯಾಯಿತು. ಇದರಲ್ಲಿ ಚರ್ಚ್ ಮತ್ತು ಬೈಬಲ್ ನಂತಹ ಪದಗಳನ್ನು ತಪ್ಪು ಸಂದರ್ಭದಲ್ಲಿ ಬಳಸಲಾಗಿದೆ. ಹೀಗಾಗಿ ಬಾದ್‌ಶಾ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಬುಧವಾರ ಪಂಜಾಬ್ ಪೊಲೀಸರು ಈ ವಿಷಯದ ಬಗ್ಗೆ ಕ್ರಮ ಕೈಗೊಂಡು ದೂರು ದಾಖಲಿಸಿದ್ದಾರೆ.

ಹೌದು ಬಾದ್‌ಶಾ ಅವರ ಹೊಸ ಹಾಡಿನ ಕುರಿತು ಗ್ಲೋಬಲ್ ಕ್ರಿಶ್ಚಿಯನ್ ಆಕ್ಷನ್ ಕಮಿಟಿ ಇತ್ತೀಚೆಗೆ ಗುರುದಾಸ್ಪುರ್ ಬಳಿಯ ಬಟಾಲಾ ಜಿಲ್ಲೆಯ ಕಿಲಾ ಲಾಲ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಬಳಿಕ ಪೊಲೀಸರು ಕ್ರಮ ಕೈಗೊಂಡು ಗಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

FIR filed against rapper Badshah for hurting religious sentiments

ಈ ಬಗ್ಗೆ ಗ್ಲೋಬಲ್ ಕ್ರಿಶ್ಚಿಯನ್ ಆಕ್ಷನ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಜತಿಂದರ್ ಮಸಿಹ್ ಮಾತನಾಡಿ, ವೆಲ್ವೆಟ್ ಫ್ಲೋ ಹಾಡಿನಲ್ಲಿ, ರ‍್ಯಾಪರ್ ಬಾದ್‌ಶಾ ಬೈಬಲ್ ಮತ್ತು ಚರ್ಚ್‌ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದರು. ಈ ಹಾಡು ಕ್ರಿಶ್ಚಿಯನ್ ಸಮುದಾಯದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

ಹೀಗಾಗಿ ಕ್ರಿಶ್ಚಿಯನ್ ಸಮುದಾಯವು ರ‍್ಯಾಪರ್ ಬಾದ್‌ಶಾ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದೆ. ಹಿಂದೆ ಕ್ರಿಶ್ಚಿಯನ್ ಸಮುದಾಯ ಅಥವಾ ಇತರ ಧರ್ಮಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣಗಳು ನಡೆದಿವೆ, ಇದು ಸಂಪೂರ್ಣವಾಗಿ ತಪ್ಪು ಎಂದು ಜತಿಂದರ್ ಮಸಿಹ್ ಅವರು ಹೇಳಿದರು.

ಇತ್ತೀಚೆಗೆ ಬಾದ್‌ಶಾ ಅವರ ಹೊಸ ಹಾಡು 'ವೆಲ್ವೆಟ್ ಫ್ಲೋ' ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾದ ತಕ್ಷಣ, ಪಂಜಾಬ್‌ನ ಕ್ರಿಶ್ಚಿಯನ್ ಸಮುದಾಯ ತನ್ನ ಪ್ರತಿಭಟನೆಯನ್ನು ಶುರು ಮಾಡಿತು. ಈ ಹಾಡಿನ ಆರಂಭಿಕ ಸಾಲಿನಲ್ಲಿ ಬೈಬಲ್ ಮತ್ತು ಚರ್ಚ್ ಅನ್ನು ಬಳಸಲಾಗಿದೆ. ಈ ಮಾತುಗಳಿಗೆ ಸಂಬಂಧಿಸಿದಂತೆ, ಕ್ರಿಶ್ಚಿಯನ್ ಸಮುದಾಯ ಅವಮಾನಕರ ಮತ್ತು ಜನರ ಭಾವನೆಗಳಿಗೆ ನೋವಾಗಿದೆ ಎಂದು ಆರೋಪಿಸಿದೆ. ಬಾದ್‌ಶಾ ತಮ್ಮ ಹಾಡುಗಳಿಂದ ಈ ಹಿಂದೆ ಹಲವು ಬಾರಿ ಸುದ್ದಿ ಮಾಡಿದ್ದಾರೆ. ಬಾದ್‌ಶಾ ತಮ್ಮ ವೃತ್ತಿಜೀವನದಲ್ಲಿ ಇಂತಹ ಅನೇಕ ಹಾಡುಗಳನ್ನು ಹಾಡಿದ್ದಾರೆ, ಆದರೆ ಇದು ಬಹಳಷ್ಟು ವಿವಾದವನ್ನುಂಟು ಮಾಡಿದೆ.

FIR filed against rapper Badshah for hurting religious sentiments

'ಮನೆ ಚರ್ಚ್​ನಂತೆ ಅನಿಸಲಿ, ಪಾಸ್​ಪೋರ್ಟ್ ಬೈಬಲ್ ರೀತಿ' ಎಂಬ ಸಾಲು ಆ ಹಾಡಿನಲ್ಲಿದೆ. ಈ ಸಾಲಿನ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ. ಬಾಲಿವುಡ್ ಗಾಯಕ ಮತ್ತು ರ‍್ಯಾಪರ್ ಬಾದ್‌ಶಾ ಅನೇಕ ಸೂಪರ್‌ಹಿಟ್ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಆದರೆ ಬಾದ್‌ಶಾ ಅವರ ಹಾಡುಗಳು ಮತ್ತು ಅವುಗಳ ಸಾಹಿತ್ಯಕ್ಕಾಗಿ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

ಮೇಲ್ನೋಟದ ಸಾಹಿತ್ಯ ಮತ್ತು ಅರ್ಥಹೀನ ವಿಚಾರಗಳಿಂದ ಪ್ರೇರಿತವಾದ ಸಂಗೀತ ಜನರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಬಾದ್‌ಶಾ ಅವರ ಹಾಡುಗಳು ವೈರಲ್ ಆಗುತ್ತವೆ. ಆದರೆ ಈಗ ಹೊಸ ಹಾಡು ಬಾದ್‌ಶಾಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಂಬಂಧ ಪಂಜಾಬ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಬಾದ್‌ಶಾ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+