ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವನ್ನು ಆವರಿಸಿದ ವಿಶ್ವಕಪ್ ಫುಟ್ಬಾಲ್ ಜ್ವರ

By Mahesh
|
Google Oneindia Kannada News

ಬೆಂಗಳೂರು, ಜೂ.11: ವಿಶ್ವಕಪ್ ಫುಟ್ಬಾಲ್ ಸಮರಕ್ಕೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ವಿಶ್ವದ ಇತರೆಡೆಯಂತೆ ಭಾರತದ ಅನೇಕ ನಗರಗಳಲ್ಲೂ ಫುಟ್ಬಾಲ್ ವಿಶ್ವಕಪ್ ಜ್ವರ ಆರಂಭಗೊಂಡಿದೆ. ಬ್ರೆಜಿಲ್ಲಿನ ಪಂದ್ಯಾವಳಿಗಳನ್ನು ನೋಡಲು ಭಾರತೀಯ ಅಭಿಮಾನಿಗಳಿಗೆ ಜಾಗರಣೆ ತಪ್ಪಿದ್ದಲ್ಲ. ಅಲ್ಲಿಂದ ಇಲ್ಲಿಗೆ ಸುಮಾರು ಎಂಟೂವರೆ ಗಂಟೆಗಳ ಕಾಲದ ಟೈಮ್ ವ್ಯತ್ಯಾಸವಿದೆ.

ಪ್ರತಿ ಕ್ರೀಡಾಕೂಟಕ್ಕೂ ಒಂದು ಲಾಂಛನವಿರುವಂತೆ ಇಡೀ ವಿಶ್ವಕಪ್ ಹಾಗೂ ಅತಿಥೇಯ ರಾಷ್ಟ್ರವನ್ನು ಪ್ರತಿನಿಧಿಸುವ ಲಾಂಛನವನ್ನು ಬ್ರೆಜಿಲ್ ವಿಶ್ವಕಪ್ ಕೂಡಾ ಹೊಂದಿದೆ. ಬ್ರೆಜಿಲ್ಲಿನ ಇನ್ ಸ್ಪಿರೇಷನ್ ಹಾಗೂ ಫುಲೆಕೊ ದ ಅರ್ಮಾಡಿಲ್ಲೋ ಈಗ ಭಾರತದಲ್ಲೂ ಜನಪ್ರಿಯತೆ ಗಳಿಸುತ್ತಿದೆ.[ಫೀಫಾ ವಿಶ್ವಕಪ್ 2014 ಟೂರ್ ಗೈಡ್]

ಮೊರಾದಾಬಾದಿನಲ್ಲಿ ಅಭಿಮಾನಿಗಳು ರಸ್ತೆಯಲ್ಲಿ ಬೃಹತ್ ರಂಗೋಲಿ ಬಿಡಿಸಿ ಫುಲೆಕೋ ಚಿತ್ರವನ್ನು ಮೂಡಿಸಿದ್ದಾರೆ. ಕೋಲ್ಕತ್ತಾದ ಫುಟ್ಬಾಲ್ ಕ್ಲಬ್ ಗಳಲ್ಲಿ ಹಬ್ಬದ ವಾತಾವರಣ ಶುರುವಾಗಿದ್ದರೆ, ಮುಂಬೈನಲ್ಲಿ ಫುಟ್ಬಾಲ್ ಕೇಶ ವಿನ್ಯಾಸ ಜನಪ್ರಿಯಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಚಿಣ್ಣರು ನೆಚ್ಚಿನ ತಂಡದ ಬಣ್ಣ ಬಳಿದುಕೊಂಡು ಚೆಂಡಾಟದಲ್ಲಿ ತೊಡಗಿದ್ದಾರೆ. ಭಾರತದ ವಿವಿಧೆಡೆಗಳಲ್ಲಿ ಹಬ್ಬುತ್ತಿರುವ ಫುಟ್ಬಾಲ್ ಉಲ್ಲಾಸ ಉತ್ಸಾಹ, ಸಂಭ್ರಮದ ಚಿತ್ರಗಳ ಸಂಗ್ರಹ ಇಲ್ಲಿದೆ ಕಣ್ಣಾಡಿಸಿ...

ವಿಶ್ವಕಪ್‌ನ ಚಿಹ್ನೆ ಫುಲೆಕೊ ದ ಅರ್ಮಾಡಿಲ್ಲೋ

ವಿಶ್ವಕಪ್‌ನ ಚಿಹ್ನೆ ಫುಲೆಕೊ ದ ಅರ್ಮಾಡಿಲ್ಲೋ

ಫುಲೆಕೊ ಈ ಬಾರಿಯ ವಿಶ್ವಕಪ್‌ನ ಚಿಹ್ನೆ. ಪ್ರಕೃತಿ ಸಂಪತ್ತನ್ನು ಉಳಿಸಿ, ಬೆಳೆಸುವ ಸಂದೇಶವನ್ನು ಫುಲೆಕೊ ಚಿಹ್ನೆಯ ಮೂಲಕ ನೀಡಲಾಗಿದೆ.ವಿನಾಶದ ಅಂಚಿನಲ್ಲಿರುವ ಆರ್ಮಾಡಿಲ್ಲೋ ಪ್ರಾಣಿಯನ್ನು ಚಿನ್ಹೆಯಾಗಿ ಬಳಸಲಾಗಿದೆ.

ಚಿತ್ರದಲ್ಲಿ : ಮೊರಾದಾಬಾದಿನಲ್ಲಿ ವಿದ್ಯಾರ್ಥಿಗಳ ರಂಗೋಲಿಯಲ್ಲಿ ಮೂಡಿದ ಫೀಫಾ ವಿಶ್ವಕಪ್ 2014ರ ಚಿಹ್ನೆ.

ಅಧಿಕೃತ ಲಾಂಛನ ಇನ್‌ಸ್ಪಿರೇಷನ್‌

ಅಧಿಕೃತ ಲಾಂಛನ ಇನ್‌ಸ್ಪಿರೇಷನ್‌

ಮೂರು ಕೈಗಳು ಪರಸ್ಪರ ಬೆಸೆದುಕೊಂಡು ಚೆಂಡನ್ನು ಹಿಡಿದುಕೊಂಡಿರುವಂತೆ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ. 3 ದಂತಕಥೆಗಳು ವಿಶ್ವಕಪ್‌ ಟ್ರೋಫಿಯನ್ನು ಎತ್ತಿಹಿಡಿದಿರುವ ಚಿತ್ರದಿಂದ ಪ್ರೇರಣೆ ಪಡೆದು ಇಂತಹ ವಿನ್ಯಾಸ ಮಾಡಲಾಗಿದೆ. ರಾಷ್ಟ್ರಧ್ವಜದ ಬಣ್ಣಗಳಾದ ಹಳದಿ ಹಾಗೂ ಹಸಿರು ಬಣ್ಣ ಬಳಕೆ ಮಾಡಲಾಗಿದೆ.

ಚಿತ್ರದಲ್ಲಿ: ಮುಂಬೈನಲ್ಲಿ ವಿಶ್ವಕಪ್ ಗಾಗಿ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಿರುವ ಅಭಿಮಾನಿಗಳು.

ಫುಲೆಕೋ ಲಾಂಛನ ಬಿಡುಗಡೆಯಾದ ಕ್ಷಣ

ಫುಲೆಕೋ ಲಾಂಛನ ಬಿಡುಗಡೆಯಾದ ಕ್ಷಣ

ಬ್ರೆಜಿಲ್ಲಿನಲ್ಲಿ ನಡೆಯುವ ಫೀಫಾ ವಿಶ್ವಕಪ್ 2014ರ ಅಧಿಕೃತ ಲಾಂಛನವಾಗಿ ಫುಲೆಕೋ ಅನಾವರಣಗೊಂಡ ಚಿತ್ರ..

ಅರ್ಮಾಡಿಲ್ಲೋ ಪ್ರಾಣಿ ಬ್ರೆಜಿಲ್‌, ಪ್ರಕೃತಿ, ಸ್ನೇಹಮಯಿ, ಫುಟ್ ಬಾಲ್‌ನೆಡೆಗಿನ ತುಡಿತ ಇವೆಲ್ಲವನ್ನು ಒಗ್ಗೂಡಿಸಿ ಅರ್ಥ ಹೊಮ್ಮಿಸುವ ಶಕ್ತಿ ಹೊಂದಿರುವ ಕಾರಣಕ್ಕೆ ಸಂಘಟಕರು ಇದನ್ನೇ ಬಳಸಿಕೊಂಡಿದ್ದಾರೆ.

ಬ್ರೆಜಿಲ್ ಪರ ನಿಂತ ಬೆಂಗಳೂರು

ಬ್ರೆಜಿಲ್ ಪರ ನಿಂತ ಬೆಂಗಳೂರು

ಬ್ರೆಜಿಲ್ ಧ್ವಜದ ಬಣ್ಣ ಬಳಿದುಕೊಂಡ ಬೆಂಗಳೂರಿನ ಮಕ್ಕಳು ಫುಟ್ಬಾಲ್ ಆಟವನ್ನು ಆನಂದಿಸುತ್ತಿದ್ದಾರೆ. ಬೆಂಗಳೂರಿಗರು ಕಳೆದ ಬಾರಿಯ ವಿಶ್ವಕಪ್ ನಲ್ಲಿ ಇಡೀ ವಿಶ್ವದ ಗಮನ ಸೆಳೆದಿದ್ದರು. ವಿಶ್ವಕಪ್ ಬಗ್ಗೆ ಗೂಗಲ್ ಸರ್ಚ್ ಮಾಡಿದ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನ ಪಡೆದಿತ್ತು[ವಿವರ ಇಲ್ಲಿ ಓದಿ]

ಮಣ್ಣಿನ ಬೊಂಬೆಗಳಾದ ಫುಟ್ಬಾಲ್ ತಾರೆಗಳು

ಮಣ್ಣಿನ ಬೊಂಬೆಗಳಾದ ಫುಟ್ಬಾಲ್ ತಾರೆಗಳು

ಕೋಲ್ಕತ್ತಾದಲ್ಲಿ ದುರ್ಗಾದೇವಿ ಬೊಂಬೆಗಳನ್ನು ಮಾಡುವ ಶಿಲ್ಪಿಗಳಿಗೆ ಈಗ ಫುಟ್ಬಾಲ್ ತಾರೆಗಳ ಬೊಂಬೆ ಮಾಡುವ ಕಾಯಕ ಸಿಕ್ಕಿದೆ. PTI Photo by Swapan Mahapatra

ಕೇರಳದ ವಿದ್ಯಾರ್ಥಿಗಳಲ್ಲಿ ಫೀಫಾ ಫೀವರ್

ಕೇರಳದ ವಿದ್ಯಾರ್ಥಿಗಳಲ್ಲಿ ಫೀಫಾ ಫೀವರ್

ಕೇರಳದ ಕೋಳಿಕ್ಕಾಡ್ ನ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಫೀಫಾ ವಿಶ್ವಕಪ್ 2014 ಸಂಭ್ರಮದ ಸ್ವಾಗತಕ್ಕೆ ನಾವು ಸಿದ್ಧ ಎಂದಿದ್ದಾರೆ.

ಕೋಲ್ಕತ್ತಾಕ್ಕೂ ಹಬ್ಬಿದ ಫುಟ್ಬಾಲ್ ಹೇರ್ ಸ್ಟೈಲ್

ಕೋಲ್ಕತ್ತಾಕ್ಕೂ ಹಬ್ಬಿದ ಫುಟ್ಬಾಲ್ ಹೇರ್ ಸ್ಟೈಲ್

ಮುಂಬೈ ನಂತರ ಕೋಲ್ಕತ್ತಾಕ್ಕೂ ಫುಟ್ಬಾಲ್ ಹೇರ್ ಸ್ಟೈಲ್ ಹಬ್ಬಿದ್ದು, ಯುವಕರು ವಿವಿಧ ಶೈಲಿಯ ಕೇಶ ವಿನ್ಯಾಸ ಮಾಡಿಸಿಕೊಳ್ಳುತ್ತಿದ್ದಾರೆ. PTI Photo by Swapan Mahapatra

ರಾಜಧಾನಿಯಲ್ಲಿ ನಮ್ಮ ಬೆಂಗಳೂರು ಬಾಯ್

ರಾಜಧಾನಿಯಲ್ಲಿ ನಮ್ಮ ಬೆಂಗಳೂರು ಬಾಯ್

ರಾಜಧಾನಿ ನವದೆಹಲಿಯ ಮಕ್ಕಳಿಗೆ ಫುಟ್ಬಾಲ್ ಕಿಚ್ಚು ಹಬ್ಬಿಸಲು ನಮ್ಮ ಬೆಂಗಳೂರು ಬಾಯ್, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆತ್ರಿ ತೆರಳಿದ್ದು, ಜರ್ಮನಿ ರಾಯಭಾರ ಕಚೇರಿಯ ಸಮೀಪ ನಡೆದ ಸಮಾರಂಭದಲ್ಲಿ ಹೊಡೆದ ಕಿಕ್ ಇದು. PTI Photo by Kamal Kishore

ಪುರಿಯಲ್ಲಿ ಮರಳು ಶಿಲ್ಪದಲ್ಲಿ ವಿಶ್ವಕಪ್

ಪುರಿಯಲ್ಲಿ ಮರಳು ಶಿಲ್ಪದಲ್ಲಿ ವಿಶ್ವಕಪ್

ಒಡಿಶಾದ ಪುರಿಯ ಕಡಲ ದಡದಲ್ಲಿ ಮರಳು ಶಿಲ್ಪಿ ಮನಸ್ ಸಾಹೂ ಅವರು ಫೀಫಾ ವಿಶ್ವಕಪ್ 2014ರ ವಿಶೇಷ ರಚನೆ

ಕೋಲ್ಕತ್ತಾದ ಗೋಡೆಗಳಲ್ಲಿ ಫುಟ್ಬಾಲ್ ರಂಗು

ಕೋಲ್ಕತ್ತಾದ ಗೋಡೆಗಳಲ್ಲಿ ಫುಟ್ಬಾಲ್ ರಂಗು

ಕೋಲ್ಕತ್ತಾದ ಗೋಡೆಗಳಲ್ಲಿ ಫುಟ್ಬಾಲ್ ರಂಗು ಮೂಡಿಸುತ್ತಿರುವ ಕಲಾವಿದರು. PTI Photo by Swapan Mahapatra

ಫುಟ್ಬಾಲ್ ತಾರೆಯರ ಕಟೌಟ್ ಗಳು

ಫುಟ್ಬಾಲ್ ತಾರೆಯರ ಕಟೌಟ್ ಗಳು

ಫುಟ್ಬಾಲ್ ತಾರೆಯರಾದ ಮೆಸ್ಸಿ, ನೇಮಾರ್ ಕಟೌಟ್ ಗಳು ಕೋಲ್ಕತ್ತಾದ ಗಲ್ಲಿಗಳಲ್ಲಿ ಕಾಣ ಸಿಗುತ್ತದೆ. PTI Photo by Swapan Mahapatra

ಕೋಲ್ಕತ್ತಾದ ಫುಟ್ಬಾಲ್ ಕ್ಲಬ್ ಗಳು

ಕೋಲ್ಕತ್ತಾದ ಫುಟ್ಬಾಲ್ ಕ್ಲಬ್ ಗಳು

ಕೋಲ್ಕತ್ತಾದ ಫುಟ್ಬಾಲ್ ಕ್ಲಬ್ ಗಳು ಅರ್ಜೆಂಟಿನಾ ಹಾಗೂ ಬ್ರೆಜಿಲ್ ಎಂದು ಪರಸ್ಪರ ಕಚೇರಿಗಳಿಗೆ ಆ ದೇಶದ ರಂಗು ಚೆಲ್ಲಿದ್ದಾರೆ.

English summary
FIFA World Cup 2014: Football fever grips India. Fans in Bangalore, Moradabad, Mumbai and Kolkata gear up for the big tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X