ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸಂಪುಟ: ಸೋಮವಾರದಂದು ಸುದ್ದಿಯಾಗದ 5 ಸುದ್ದಿಗಳು

ಸೋಮವಾರ, ತಮಿಳುನಾಡು ಹಾಗೂ ಕರ್ನಾಟಕ ರಾಜಕೀಯ ಸುದ್ದಿಗಳ ಮಧ್ಯೆ ಕಳೆದುಹೋದ ಕೆಲವು ಗಮನಿಸಬೇಕಾದ ಸುದ್ದಿಗಳ ಸಂಕ್ಷಿಪ್ತ ಮಾಹಿತಿ

|
Google Oneindia Kannada News

ತಮಿಳುನಾಡು ರಾಜಕೀಯ ಕಹಾಗೂ ಕರ್ನಾಟಕದ ರಾಜಕೀಯಗಳು ಸೋಮವಾರದ ಸುದ್ದಿ ಸಂತೆಯನ್ನು ತಲಾ ಅರ್ಧರ್ಧ ದಿನ ಆಳಿದವು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ತಮಿಳುನಾಡು ರಾಜಕೀಯ ಬಣ್ಣಬಣ್ಣವಾಗಿ ಬಿತ್ತರವಾದರೆ, ಮಧ್ಯಾಹ್ನದ ನಂತರ ಕರ್ನಾಟಕದ ರಾಜಕೀಯ ಸಿಡಿ ಸ್ಫೋಟದ ಸುದ್ದಿ ಹಾಗೂ ಅದರ ನಂತರದ ಬೆಳವಣಿಗೆಗಳು ಮಾಧ್ಯಮಗಳಲ್ಲಿ ಬಿತ್ತರವಾದವು, ಚರ್ಚೆಯಾದವು.

ಇವನ್ನು ಹೊರತುಪಡಿಸಿದಂತೆ, ದೇಶದ ಅಲ್ಲಲ್ಲಿ ನಡೆದ ಸಭೆ, ಸಮಾರಂಭಗಳು, ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ರ್ಯಾಲಿಗಳು ಕಂಡೂ ಕಾಣದಾದವು. ಮಾಧ್ಯಮ ಲೋಕದಲ್ಲಿ ಸುದ್ದಿಸಂತೆಯೆಂದರೆ ಹೀಗೇ. ಯಾವುದು ಕಾವು ಏರಿಸುತ್ತದೆ, ಯಾವುದು ಗೌಣವಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.

ಇಂದು ಇಂಥಾ ಸುದ್ದಿ ಮಾಧ್ಯಮ ಲೋಕವನ್ನು ಹಾಗೂ ನಾಡಿನ ಜನರನ್ನು ತಲ್ಲಣಿಸಬಹುದು ಅಥವಾ ರೋಮಾಂಚನ ತರಬಹುದು ಎಂದು ಕೊಂಡರೆ, ಅದನ್ನು ಮೀರಿಸುವ ಯಾವುದೋ ಒಂದು ಸುದ್ದಿಯೊಂದು ಅಪ್ಪಳಿಸಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿಬಿಡುತ್ತದೆ.

ಅದು ನಿತ್ಯ ವ್ಯವಹಾರ. ಸುದ್ದಿಮನೆಯಲ್ಲಿ ಕೆಲಸ ಮಾಡುವವರಿಗಷ್ಟೇ ಗೊತ್ತು ಅದರ ಗಮ್ಮತ್ತು. ಅದೇನೇ ಇರಲಿ. ಗುರುವಾರ ನಡೆದ ದೇಶದ ಅಲ್ಲಲ್ಲಿ ನಡೆದ ಕೆಲವಾರು ಸಭೆ, ಸಮಾರಂಭಗಳ ಒಂದೂರು ಮಾಹಿತಿ ಇಲ್ಲಿ ನಿಮಗಾಗಿ. ನಿಮ್ಮ ಮಾಹಿತಿಗಾಗಿ.

ಆರೋಗ್ಯ ಕಾರ್ಯಕ್ರಮ

ಆರೋಗ್ಯ ಕಾರ್ಯಕ್ರಮ

ಈ ವಿಶ್ಲೇಷಣೆ ತುಸು ಪೋಲಿ ಎನ್ನಿಸಿದರೂ ಪರವಾಗಿಲ್ಲ. ಕಾಕತಾಳೀಯ ಎಂಬಂತೆ, ಪ್ರೇಮಿಗಳ ದಿನಾಚರಣೆಯ ಹಿಂದಿನ ದಿನ ಕಾಂಡೋಮ್ ಡೇ ಆಚರಿಸಲಾಗಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಡೋಮ್ ವೇಷಧಾರಿಗಳು ಜಗಜಾಗೃತಿ ಮೂಡಿಸಲೆತ್ನಿಸಿದರು.

ಮುಂದಿನ ಜನರೇಷನ್?

ಮುಂದಿನ ಜನರೇಷನ್?

ಉತ್ತರ ಪ್ರದೇಶದಲ್ಲಿ ಈಗ ಎಲ್ಲೆಲ್ಲೂ ಚುನಾವಣಾ ಕಾವು. ಮೋದಿ ಭಾವಚಿತ್ರವುಳ್ಳ ಮುಖವಾಡವನ್ನು ಹಾಕಿಕೊಂಡಿರುವ ಚಿಣ್ಣರ ಗುಂಪೊಂದು ಮಾಧ್ಯಮಗಳಿಗೆ ಕಂಡಿದ್ದು ಹೀಗೆ.

ಸುಂದರಾಂಗ ಜಾಣ

ಸುಂದರಾಂಗ ಜಾಣ

ಅಂದಹಾಗೆ, ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿರುವ ಭಾರತೀಯ ಕ್ರಿಕೆಟ್ ತಂಡ ಶೀಘ್ರದಲ್ಲೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಗಾಗಿ ಅಣಿಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆಸೀಸ್ ತಂಡದ ಸ್ಟೀವ್ ಸ್ಮಿತ್ ಸೋಮವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಹೆಚ್ಚುತ್ತಿದೆ ಜಾಟ್ ಝಳ

ಹೆಚ್ಚುತ್ತಿದೆ ಜಾಟ್ ಝಳ

ಜಾಟ್ ಜಾತಿಯ ಮೀಸಲಾತಿಗಾಗಿ ಆ ಜನಾಂಗದ ಮಂದಿ ನಡೆಸುತ್ತಿರುವ ಹೋರಾಟ ಮತ್ತಷ್ಟು ತೀಕ್ಷ್ಣವಾಗಿದೆ. ಸೋಮವಾರ ಹರ್ಯಾಣದಲ್ಲಿ ಆ ಜನಾಂಗದ ಮಹಿಳಾ ಸಮೂಹ ಪ್ರತಿಭಟನೆ ನಡೆಸಿದೆ.

ಪ್ರಚಾರದ ಬಿರುಸು

ಪ್ರಚಾರದ ಬಿರುಸು

ಉತ್ತರ ಪ್ರದೇಶದ ಲಖನೌನಲ್ಲಿ ನಡೆದ ಪಕ್ಷದ ಚುನಾವಣಾ ರ್ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಹೂಹಾರದ ಸ್ವಾಗತ ನೀಡಲಾಯಿತು.

English summary
In a news rush of Tamilnadu and Karnataka politics in news rooms of every media on Monday, some other news lost their recognition. Here, few of them have mentioned with respective photoes for your information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X