ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ಕಂಪನಿಗಳಿಂದ ಪ್ರತಿನಿತ್ಯ 50 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಉತ್ಪಾದನೆ

|
Google Oneindia Kannada News

ನವದೆಹಲಿ, ಏಪ್ರಿಲ್ 28: ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಆಸ್ಪತ್ರೆಗೆ ಅಧಿಕ ಮಂದಿ ದಾಖಲಾಗುತ್ತಿರುವುದರಿಂದ ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರವಾಗಿದೆ. ದೇಶ ವಿದೇಶದ ಹಲವೆಡೆಯಿಂದ ಆಮ್ಲಜನಕ ನೆರವು ಸಿಗುತ್ತಿದ್ದರೂ ಈಗಿರುವ ಬೇಡಿಕೆ ಮಟ್ಟವನ್ನು ತಲುಪಲಾಗುತ್ತಿಲ್ಲ.

ಹೀಗಾಗಿ ತಮ್ಮ ರಸಗೊಬ್ಬರ ಉತ್ಪಾದನಾ ಘಟಕಗಳಲ್ಲಿ ಆಮ್ಲಜನಕ ಉತ್ಪಾದನೆಯ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲು ರಸಗೊಬ್ಬರ ತಯಾರಿಕೆಯ ಸಾರ್ವಜನಿಕ ವಲಯ, ಖಾಸಗಿ ವಲಯ ಹಾಗೂ ಕೋ ಆಪರೇಟಿವ್ ವಲಯಗಳ ಕಂಪನಿಗಳೊಂದಿಗೆ ರಾಸಾಯನಿಕ ಹಾಗೂ ರಸಗೊಬ್ಬರ ರಾಜ್ಯ ಖಾತೆ ಸಚಿವ ಮನ್ಸುಖ್ ಮಾಂಡವೀಯ ಬುಧವಾರ ಸಭೆ ನಡೆಸಿದ್ದಾರೆ.

ಭಾರತಕ್ಕೆ ನೆರವು ನೀಡಲು ಅಮೆರಿಕದಿಂದ ಬರುತ್ತಿದೆ ತಜ್ಞರ ತಂಡಭಾರತಕ್ಕೆ ನೆರವು ನೀಡಲು ಅಮೆರಿಕದಿಂದ ಬರುತ್ತಿದೆ ತಜ್ಞರ ತಂಡ

ದೇಶ ಇಂಥ ಬಿಕ್ಕಟ್ಟಿನ ಸಮಯದಲ್ಲಿ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳಬೇಕಿದೆ. ರಸಗೊಬ್ಬರ ಕಂಪನಿಗಳು ಈ ಸಾಂಕ್ರಾಮಿಕದ ವಿರುದ್ಧದ ದೇಶದ ಹೋರಾಟಕ್ಕೆ ಕೈಜೋಡಿಸಬೇಕಿದೆ. ರಸಗೊಬ್ಬರ ಕಂಪನಿಗಳು ಆಮ್ಲಜನಕ ಉತ್ಪಾದನೆಯ ನಿಟ್ಟಿನಲ್ಲಿ ಯೋಜಿಸಿ, ಆಮ್ಲಜನಕವನ್ನು ತುರ್ತು ಪೂರೈಕೆ ಮಾಡಿ ಸಮಾಜಕ್ಕೆ ಸಹಾಯ ಮಾಡಬೇಕು ಎಂದು ರಸಗೊಬ್ಬರ ಕಂಪನಿಗಳಿಗೆ ಸಚಿವರು ಕರೆ ನೀಡಿದ್ದಾರೆ.

Fertiliser Companies To Supply 50 MT Medical Oxygen Per Day Ahead Of Oxygen Crisis

ರಸಗೊಬ್ಬರ ಕಂಪನಿಗಳು ಈ ನಡೆಯನ್ನು ಸ್ವಾಗತಿಸಿದ್ದು, ಕೊರೊನಾ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ರಸಗೊಬ್ಬರ ಘಟಕಗಳಿಂದ ಕೊರೊನಾ ರೋಗಿಗಳಿಗೆ ದಿನನಿತ್ಯ 50 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ನಿರೀಕ್ಷಿಸಬಹುದು ಎಂದು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.

English summary
Approximately 50 Metric Tons (MT) of medical oxygen per day can be made available for COVID patients by the fertilizer Plants,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X