ಮಹೀಂದ್ರಾ ಥಾರ್ ಮುಂದೆ ನಿಂತು ವಾರದೊಳಗೆ ಮಗಳನ್ನು ಮದುವೆಯಾದವರಿಗೆ ಬ್ಲ್ಯಾಂಕ್ ಚೆಕ್ ಕೊಡುತ್ತೇನೆಂದ ತಂದೆ-ವಿಡಿಯೋ ವೈರಲ್
ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾದ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿರುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಇನ್ನೂ ವಿಚಿತ್ರವಾಗಿ ಹೇಳಿಕೆ ಕೊಟ್ಟಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀವೇ ಗಮನಿಸಿ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯವೂ ಸಾವಿರಾರು ವಿಚಿತ್ರ ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗಳನ್ನು ಒಂದು ವಾರದೊಳಗೆ ಮದುವೆ ಆಗಲು ಮುಂದೆ ಬರುವ ವರನಿಗೆ ಬ್ಲ್ಯಾಂಕ್ ಚೆಕ್ ನೀಡುವೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆದರೆ ಈ ವಿಡಿಯೋ ಇದೀಗ ನಕಲಿಯೋ ಅಸಲಿಯೋ ಎಂಬುದೇ ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿದೆ.

@shadi_karne_wali_girls ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲು ಪೋಸ್ಟ್ ಮಾಡಲಾಗಿರುವ ಈ ವೀಡಿಯೊದಲ್ಲಿ, ತಂದೆ ಕೆಂಪು ಹಾಗೂ ಕಪ್ಪು ಬಣ್ಣದಿಂದ ಕೂಡಿರುವ ಮಹೀಂದ್ರಾ ಥಾರ್ ಕಾರ್ ಮುಂದೆ ತನ್ನ ಮಗಳನ್ನು ನಿಲ್ಲಿಸಿಕೊಂಡು ನಿಂತಿರುವುದನ್ನು ಕಾಣಬಹುದು. ಅಲ್ಲದೆ ತಂದೆಯ ಕೈಯಲ್ಲಿ ಒಂದು ಚೆಕ್ ಬುಕ್ ಕೂಡ ಇದೆ.
"ನನ್ನ ಮಗಳನ್ನು ಮದುವೆ ಆಗಲು ವರ ಬೇಕಾಗಿದ್ದಾನೆ. ಆದರೆ ಹೆಚ್ಚು ಸಮಯಾವಾಕಾಶ ಇಲ್ಲ. ಕೇವಲ ಒಂದೇ ಒಂದು ವಾರದೊಳಗೆ ನನ್ನ ಮಗಳನ್ನು ಮದುವೆ ಆಗಬೇಕು. ಜೊತೆಗೆ ಆತನ ಅದೃಷ್ಟವು ಬದಲಾಗಲಿದೆ. ಯಾಕೆಂದರೆ ಆತನಿಗೆ ನಾನು ಬ್ಲ್ಯಾಂಕ್ ಚೆಕ್ ನೀಡುತ್ತೇನೆ" ಎಂದು ಆ ಮಗಳ ತಂದೆ ಹೇಳಿರುವ ವಿಡಿಯೋ ಅಸಲಿಯೋ.. ನಕಲಿಯೋ ಗೊತ್ತಿಲ್ಲ.. ಆದರೆ ಇದೀಗ ಈ ವಿಡಿಯೋ ಎಲ್ಲೆಡೆ ಟ್ರೆಂಡ್ ಸೃಷ್ಟಿಸಿರುವುದಂತೂ ನಿಜ.
ಈ ವಿಡಿಯೋವನ್ನು @shadi_karne_wali_girls ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾರ್ಚ್ 18ರಂದು ಹಂಚಿಕೊಳ್ಳಲಾಗಿದ್ದು, ಇಲ್ಲಿವರೆಗೆ ಈ ವಿಡಿಯೋವನ್ನು 12 ಮಿಲಿಯನ್‌ಗೂ ವೀಕ್ಷಣೆಯನ್ನು ಪಡೆದುಕೊಂಡಿದ್ದು, ತುಂಬಾ ವಿಚಿತ್ರ ಕಾಮೆಂಟ್‌ಗಳು ಕೂಡ ಬಂದಿವೆ. ಕೆಲವರು ಇದು ನಕಲಿ ಎಂದು ಹೇಳಿದರೆ, ಮತ್ತೆ ಕೆಲವರು ತಮ್ಮ ನಂಬರ್‌ಗಳನ್ನು ಕಳುಹಿಸಿ ತಾವು ಮದುವೆಯಾಗುವುದಾಗಿ ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿದ್ದಾರೆ.
ಇನ್ನು ಈ ವ್ಯಕ್ತಿ ವಿಡಿಯೋ ಕೆಂಪು ಮತ್ತು ಕಪ್ಪು ಬಣ್ಣದ ಥಾರ್ ಕಾರ್ ಮುಂದೆಯೇ ಮಾಡಿದ್ದಾರೆ. ಅದರಲ್ಲೂ ಸಖತ್ ಜನಪ್ರಿಯತೆ ಹೊಂದಿರುವ ಕಾರ್ ಇದು. ಇದರ ನಂರ್ ಪ್ಲೇಟ್‌ನಲ್ಲಿ HRನಿಂದ ಪ್ರಾರಂಭವಾಗಿದ್ದು, ಈ ಹಿನ್ನೆಲೆ ಇದನ್ನು ಹರಿಯಾಣ ಮೂಲದ್ದು ಎಂದು ಹೇಳಲಾಗಿದೆ. ಅದರಲ್ಲೂ ಹುಡುಗಿಯ ತಂದೆ ಹಿಂದಿಯಲ್ಲೇ ಮಾತನಾಡಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications