• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರು 'ಕೆಲಸವಿಲ್ಲದ ಮದ್ಯವ್ಯಸನಿಗಳು' ಎಂದ ಬಿಜೆಪಿ ಸಂಸದ: ತೀವ್ರ ಪ್ರತಿಭಟನೆ

|
Google Oneindia Kannada News

ಹಿಸಾರ್‌, ನವೆಂಬರ್‌ 05: ರೈತರನ್ನು ಕೆಲಸವಿಲ್ಲದ ಮದ್ಯವ್ಯಸನಿಗಳು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಬಿಜೆಪಿ ಸಂಸದ ರಾಮ ಚಂದರ್‌ ಜಾಂಗ್ರಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೈತರು ರಾಮ ಚಂದರ್‌ ಜಾಂಗ್ರಾ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದು, ಘೋಷಣೆ ಕೂಗಿ, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.

ಹರಿಯಾಣದ ಹಿಸಾರ್‌ ಜಿಲ್ಲೆಯ ನಗರದಲ್ಲಿ ಧರ್ಮ ಶಾಲೆಯನ್ನು ಉದ್ಘಾಟನೆ ಮಾಡುವ ನಿಟ್ಟಿನಲ್ಲಿ ರಾಮ್‌ ಚಂದರ್‌ ಜಾಂಗ್ರಾ ಇದ್ದು ನಗರಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ರೈತರು ಬಿಜೆಪಿ ಸಂಸದ ರಾಮ ಚಂದರ್‌ ಜಾಂಗ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ನಡೆದ ಸಂದರ್ಭದಲ್ಲಿ ಸಂಸದರ ಕಾರಿನ ಗಾಜನ್ನು ಹೊಡೆಯಲಾಗಿದೆ.

ರೈತರಿಗೆ ನ್ಯಾಯ ಸಿಗಬೇಕಾದರೆ ಬಿಜೆಪಿಗೆ ಸೋಲಿನ ಪಾಠ ಕಲಿಸಿ: ಕೆಪಿಸಿಸಿ ರೈತರಿಗೆ ನ್ಯಾಯ ಸಿಗಬೇಕಾದರೆ ಬಿಜೆಪಿಗೆ ಸೋಲಿನ ಪಾಠ ಕಲಿಸಿ: ಕೆಪಿಸಿಸಿ

ಈ ಧರ್ಮ ಶಾಲೆಯನ್ನು ಉದ್ಘಾಟನಾ ಸಮಾರಂಭದ ಪ್ರದೇಶಕ್ಕೆ ಆಗಮಿಸಿದ ರೈತರು, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕಳೆದ ಒಂದು ವರ್ಷಗಳಿಂದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಈ ಪ್ರತಿಭಟನೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಘೋಷಣೆಗಳನ್ನು ಕೂಗಿದ್ದಾರೆ.

ಈ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಪೊಲೀಸರು ಈ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ರೈತರನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಆದರೆ ಅಧಿಕ ಸಂಖ್ಯೆಯಲ್ಲಿ ಬಂದ ರೈತರನ್ನು ತಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.

ರೈತರು ಈ ಕಾರ್ಯಕ್ರಮ ನಡೆಯುವ ಪ್ರದೇಶಕ್ಕೆ ಮುನ್ನುಗಿದ್ದು, ಸರ್ಕಾರದ ವಿರುದ್ಧ ಹಾಗೂ ಸ್ಥಳೀಯ ಆಡಳಿತದ ವಿರು‌ದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಪ್ರತಿಯಾಗಿ ಘೋಷಣೆಗಳನ್ನು ಕೂಗಿದ್ದಾರೆ.

ಗುರುವಾರವೂ ಇದೇ ಪರಿಸ್ಥಿತಿಯನ್ನು ಎದುರಿಸಿದ್ದ ಸಂಸದ

ಬಿಜೆಪಿ ಸಂಸದ ರಾಮ ಚಂದರ್‌ ಜಾಂಗ್ರಾ ಗುರುವಾರವೂ ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಗುರುವಾರ ರಾಮ ಚಂದರ್‌ ಜಾಂಗ್ರಾ ರೋಹ್ಟಕ್‌ನಲ್ಲಿದ್ದ ಗೋ ಶಾಲೆಗೆ ದೀಪಾವಳಿ ಸಮಾರಂಭಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರು ಕೆಲಸವಿಲ್ಲದ ಮದ್ಯವ್ಯಸನಿಗಳು ಎಂದು ಬಿಜೆಪಿ ಸಂಸದ ರಾಮ ಚಂದರ್‌ ಜಾಂಗ್ರಾ ನೀಡಿದ ಹೇಳಿಕೆಯ ವಿರುದ್ಧ ಈ ಆಕ್ರೋಶ ವ್ಯಕ್ತವಾಗಿದೆ.

ಕೃಷಿ ಕಾಯ್ದೆ ವಿರುದ್ಧ ಹೋರಾಡಿದ ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಪಂಜಾಬ್ ಸಿಎಂ ಆದೇಶಕೃಷಿ ಕಾಯ್ದೆ ವಿರುದ್ಧ ಹೋರಾಡಿದ ರೈತರ ಮೇಲಿನ ಕೇಸ್ ವಾಪಸ್ ಪಡೆಯಲು ಪಂಜಾಬ್ ಸಿಎಂ ಆದೇಶ

ಸಂಸದರು ಹೇಳಿದ್ದು ಏನು?

ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡುತ್ತಾ , "ಪ್ರತಿಭಟನೆ ನಡೆಸುತ್ತಿರುವ ರೈತರು ಕೆಲಸವಿಲ್ಲದ ಮದ್ಯವ್ಯಸನಿಗಳು," ಎಂದು ಬಿಜೆಪಿ ಸಂಸದ ಜಾಂಗ್ರಾ ಹೇಳಿದ್ದ ವಿಡಿಯೋ ಸಾಮಾಜಿಕ ಜಾಕತಾಣದಲ್ಲಿ ಹರಿದಾಡಿದೆ. "ಕೃಷಿ ಕಾನೂನಿಗೆ ರೈತರಿಂದ ಯಾವುದೇ ವಿರೋಧ ಇಲ್ಲ. ಈಗ ಪ್ರತಿಭಟನೆ ನಡೆಸುತ್ತಿರುವವರು ಹಳ್ಳಿಯಿಂದ ಬಂದ ಕೆಲಸವಿಲ್ಲದ ಮದ್ಯವ್ಯಸನಿಗಳು. ಇಂತಹ ಕಾರ್ಯಗಳನ್ನು ಮಾಡುತ್ತಲೇ ಇರುವ ಕೆಟ್ಟ ಜನರು ಅವರುಗಳು. ಸಿಂಘು ಗಡಿಯಲ್ಲಿ ಇತ್ತೀಚೆಗೆ ನಡೆದ ಕೆಲವು ಹತ್ಯೆಗಳು ನಿಹಾಂಗ್‌ಗಳಿಂದ ನಡೆದಿರಬಹುದು. ಇದು ಕೆಟ್ಟ ಅಂಶಗಳನ್ನು ಜನರ ಮುಂದೆ ತೆರೆದಿಟ್ಟಿದೆ. ನಾನು ದೆಹಲಿಗೆ ನಿರಂತರವಾಗಿ ಹೋಗುತ್ತಾ ಇರುತ್ತೇನೆ. ಈ ಸಂದರ್ಭದಲ್ಲಿ ಹಲವಾರು ಟೆಂಟ್‌ಗಳು ಖಾಲಿಯಾಗಿರುವುದನ್ನು ನಾನು ನೋಡಿದ್ದೇನೆ," ಎಂದು ಹೇಳಿದ್ದರು. ಇನ್ನು ಈ ಸಂದರ್ಭದಲ್ಲಿ ಈ ಬಗ್ಗೆ ಜನರೇ ರೈತರ ಜೊತೆ ಕಠಿಣವಾಗಿ ನಡೆದುಕೊಳ್ಳಬೇಕು. ರೈತರ ಮನವೊಲಿಕೆ ಮಾಡಬೇಕು. ಈ ಪ್ರತಿಭಟನೆ ಮಾಡುವುದರಿಂದ ರೈತರನ್ನು ತಡೆಯಬೇಕು ಎಂದು ಕೂಡಾ ಜನರಿಗೆ ಸಂಸದರು ಮನವಿ ಮಾಡಿದ್ದಾರೆ.

   ರವೀಂದ್ರ ಜಡೇಜಾ ಕೊಟ್ಟ ಉತ್ತರಕ್ಕೆ ಫುಲ್‌ ಕಕ್ಕಾಬಿಕ್ಕಿಯಾದ ಪತ್ರಕರ್ತ | Oneindia Kannada

   (ಒನ್‌ಇಂಡಿಯಾ ಸುದ್ದಿ)

   English summary
   Farmers Protest over BJP MP's "Jobless Alcoholics" Remark, His Car Smashed.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X